La hora escrita

La hora escrita | Spanish | 2025

ನಮ್ಮ ಮನೆಗಳಲ್ಲಿ ಆರಾಮಾಗಿ ಕುಳಿತು, ಟಿವಿಯಲ್ಲಿ ಯಾವುದೋ ದೂರದ ದೇಶದಲ್ಲಿ ನಡೆಯುವ ಯುದ್ಧದ ಸುದ್ದಿಗಳನ್ನು ನೋಡುವುದು ನಮಗೆ ಕೇವಲ ಒಂದು ಸುದ್ದಿಯಷ್ಟೇ. ಅದರ ಹಿಂದಿರುವ ನಿಜವಾದ ಭಯ ಮತ್ತು ನೋವು ನಮಗೆ ಎಂದಿಗೂ ಅರ್ಥವಾಗುವುದಿಲ್ಲ; ನಾವು ಸ್ವತಃ ಆ ಪರಿಸ್ಥಿತಿಯನ್ನು ಅನುಭವಿಸುವವರೆಗೂ ಅದು ನಮಗೆ ತಿಳಿಯುವುದೇ ಇಲ್ಲ.

ಇಂತಹದ್ದೇ ಒಂದು ಸಣ್ಣ ಸನ್ನಿವೇಶವನ್ನು ಇಟ್ಟುಕೊಂಡು ನಿರ್ಮಿಸಿದ ಅದ್ಭುತ ಕಿರುಚಿತ್ರವೇ ‘ಲಾ ಒರಾ ಎಸ್ಕ್ರಿತಾ’ (La Hora Escrita).

1937ರ ಸ್ಪ್ಯಾನಿಷ್ ಅಂತರ್ಯುದ್ಧದ ಭೀಕರ ‘ಲಾ ದೇಸ್ಬಂದಾ’ (ಮಾಲಗಾ-ಅಲ್ಮೇರಿಯಾ ರಸ್ತೆ ಮಾರಣಹೋಮ) ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಕೋಕ್ ಅರಿಜೋ ಅವರು ಮೂಡಿಸಿರುವ ಈ ಚಿತ್ರ, ಒಂದು ತೀವ್ರತರವಾದ ಯುದ್ಧವಿರೋಧಿ ಕಾವ್ಯದಂತಿದೆ.

ಬಾಂಬ್ ದಾಳಿಯ ನಂತರ ಎಚ್ಚರಗೊಳ್ಳುವ ನಾಯಕಿ ಮೋನಿಕಾಳ ಕಣ್ಣುಗಳಲ್ಲಿ ಕಾಣುವ ನರಕಯಾತನೆಯ ಅಭಿನಯ, ಸುಂದರವಾದ ಛಾಯಾಗ್ರಹಣ ಮತ್ತು ಗಂಭೀರ ಹಿನ್ನೆಲೆ ಸಂಗೀತದ ಮೂಲಕ ಯುದ್ಧದ ಕ್ರೂರತೆ ಹಾಗೂ ನಿರಾಶ್ರಿತರ ಅಸಹಾಯಕತೆಯನ್ನು ಅತ್ಯಂತ ಭಾವನಾತ್ಮಕವಾಗಿ ತೋರಿಸುವಲ್ಲಿ ಈ ಕಿರುಚಿತ್ರ ಸಂಪೂರ್ಣವಾಗಿ ಯಶಸ್ವಿಯಾಗಿದೆ.

Leave a Comment

Your email address will not be published. Required fields are marked *

Scroll to Top