
ಇವತ್ತಿನ ಕಾಲದಲ್ಲಿ ಲವ್ವು-ಗಿವ್ವು ಅಂತೆಲ್ಲಾ ದಿನಕ್ಕೊಂದು ಹೊಸ ನಾಟಕ ನೋಡೋ ಕಾಲಘಟ್ಟದಲ್ಲಿ, ಈ ‘ವಿತ್ ಲವ್’ ಸಿನಿಮಾ ಒಂಥರ ಫ್ರೆಶ್ ಆಗಿ ಕಂಡದ್ದಂತು ನಿಜ. ಯಾವುದೇ ಗಲೀಜು, ಧವ ಧವ, ಬೇಡಾದ ಸೀನ್ ಗಳಿಲ್ಲದೆ, ಅಪ್ಪಟ ಪ್ರೀತಿಯನ್ನ ತುಂಬಾ ಕ್ಯೂಟ್ ಆಗಿ ಈ ರೊಮ್ಯಾಂಟಿಕ್ ಕಾಮಿಡಿ ಥರ ತೋರಿಸಿದ್ದಾರೆ.
ಕಥೆ ಶುರುವಾಗೋದು ಇಬ್ಬರು ಅಪರಿಚಿತರು ಮೀಟ್ ಆದಾಗ. ಅಲ್ಲಿಂದ ಅವರಿಬ್ಬರೂ ತಮ್ಮ ಹಳೆ ಸ್ಕೂಲ್ ಕಾಲದ ಲವ್ ಸ್ಟೋರಿಗಳನ್ನ ನೆನಪು ಮಾಡಿಕೊಳ್ತಾರೆ. ಆ ದಿನಗಳ ಪ್ರೀತಿ, ಆ ತುಂಟಾಟ ಎಲ್ಲವನ್ನ ನಿರ್ದೇಶಕರು ಎಷ್ಟು ನ್ಯಾಚುರಲ್ ಆಗಿ ತೋರಿಸಿದ್ದಾರೆ ಅಂದ್ರೆ, ಸಿನಿಮಾ ನೋಡ್ತಾ ಇದ್ರೆ ನಮಗೂ ನಮ್ಮ ಶಾಲಾ ದಿನಗಳು ಕಣ್ಣ ಮುಂದೆ ಬಂದು ಹೋಗುತ್ತೆ.
ಇನ್ನು ಅನಾಸ್ವರ ರಾಜನ್ ಅಂತೂ ಅಲ್ಟಿಮೇಟ್! ಇಡೀ ಸಿನಿಮಾನ ಅವರೇ ಎಳೆದುಕೊಂಡು ಹೋಗಿದ್ದಾರೆ. ಅವರ ಆಕ್ಟಿಂಗ್ ಈ ಸಿನಿಮಾದ ದೊಡ್ಡ ಶಕ್ತಿ. ಅದಕ್ಕೆ ತಕ್ಕ ಹಾಗೆ ಸಾಂಗ್ಸ್ ಮತ್ತು ಕ್ಯಾಮೆರಾ ವರ್ಕ್ ಕೂಡ ಸಖತ್ ಆಗಿದೆ.
ಸಿನಿಮಾ ಅಲ್ಲಲ್ಲಿ ಸ್ವಲ್ಪ ಸ್ಲೋ ಅಂತ ಅನ್ನಿಸಿದ್ರೂ ‘ಚಲ್ತಾ ಹೇ’, ಅಷ್ಟೇನು ಬೇಸರ ತರಿಸಲ್ಲ. ಯಾವುದೇ ದೊಡ್ಡ ಎಕ್ಸ್‌ಪೆಕ್ಟೇಶನ್ ಇಟ್ಟುಕೊಳ್ಳದೆ, ಒಂದು ಒಳ್ಳೆ ಫೀಲ್-ಗುಡ್ ಲವ್ ಸ್ಟೋರಿ ನೋಡಬೇಕು ಅನ್ನೋರಿಗೆ ಈ ಸಿನಿಮಾ ಖಂಡಿತ ಇಷ್ಟ ಆಗುತ್ತೆ.

