Pagla Ghoda (Badal Sircar) – Play

Pagal Ghoda

ಬಹಳ ದಿನದಿಂದ ಈ ‘ಪಗ್ಲಾ ಘೋಡಾ’ ನಾಟಕದ ಬಗ್ಗೆ ಸಿಕ್ಕಾಪಟ್ಟೆ ಕೇಳಿದ್ದೆ, ಆದ್ರೆ ಸರಿಯಾದ ಟೈಮ್ ಸಿಕ್ಕಿರಲಿಲ್ಲ. ಹೇಗೋ ಹುಡುಕಾಡಿ ನೋಡಿದ ಮೇಲೆ ಅನಿಸಿದ್ದು ಏನೆಂದ್ರೆ, ಇದೊಂದು ಸಿಕ್ಕಾಪಟ್ಟೆ ತಲೆಕೆಡಿಸಿವ ಸೈಕಲಾಜಿಕಲ್ ಡ್ರಾಮಾ.

ಕಥೆ ನಡೆಯೋದು ಒಂದು ಸ್ಮಶಾನದಲ್ಲಿ. ಒಬ್ಬ ಹುಡುಗಿ ಸತ್ತು ಹೋಗಿರ್ತಾಳೆ, ಅವಳ ದೇಹವನ್ನ ಸುಡೋಕೆ ಅಂತ ನಾಲ್ಕು ಜನ ಬಂದಿರ್ತಾರೆ. ಚಿತೆ ಉರಿಯೋವರೆಗೂ ಟೈಮ್ ಪಾಸ್ ಮಾಡೋಕೆ ಇಸ್ಪೀಟ್ ಆಡ್ತಾ, ಕುಡಿತಾ ಕೂತ ಆ ನಾಲ್ಕು ಜನ ತಮ್ಮ ಕಥೆ ಬಿಚ್ಚಿಡುತ್ತಾ ಹೋಗ್ತಾರೆ. ನೋಡಿದ್ರೆ ಪ್ರತಿಯೊಬ್ಬನೂ ಒಬ್ಬೊಬ್ಬ ಹುಡುಗಿಗೆ ಪ್ರೀತಿಯಲ್ಲಿ ಕೈ ಕೊಟ್ಟವನೇ! ಒಬ್ಬ ಜಾತಿಗೆ ಹೆದರಿದ್ರೆ, ಇನ್ನೊಬ್ಬ ಮನೆಯವರಿಗೆ, ಮಗದೊಬ್ಬ ತನ್ನ ಅಹಂಕಾರಕ್ಕೋಸ್ಕರ ಆ ಹುಡುಗಿಯರ ಬದುಕನ್ನೇ ಹಾಳು ಮಾಡಿರ್ತಾರೆ.

ಈ ನಾಟಕದ ಟೈಟಲ್ ‘ಪಗ್ಲಾ ಘೋಡಾ’ ಅಂದ್ರೆ ಆ ‘ಹುಚ್ಚು ಕುದುರೆ’ ಬೇರೆ ಯಾರೂ ಅಲ್ಲ, ಅದು ಮನುಷ್ಯನ ಅಹಂಕಾರ ಮತ್ತು ಅತಿಯಾದ ಆಸೆಗಳು. ಈ ಅಹಂಕಾರ ಒಮ್ಮೆ ಓಡೋಕೆ ಶುರು ಮಾಡಿದ್ರೆ ಸಾಕು, ಎದುರಿಗಿರೋ ಸಂಬಂಧಗಳನ್ನ ತುಳಿದು ಹಾಕಿಬಿಡುತ್ತೆ ಅನ್ನೋದನ್ನ ಇಲ್ಲಿ ಚನ್ನಾಗಿ ತೋರಿಸಿದ್ದಾರೆ.

ಆ ಸತ್ತ ಹುಡುಗಿಯೇ ಎಲ್ಲರ ಕಥೆಯಲ್ಲೂ ಬೇರೆ ಬೇರೆ ಪ್ರೇಯಸಿಯಾಗಿ ಬರೋದು ನಮಗೆ ಒಂಥರಾ ಸಸ್ಪೆನ್ಸ್ ಕೊಡುತ್ತೆ. ಅಸಲಿಗೆ ಇಲ್ಲಿ ಪ್ರೀತಿಗಿಂತ ಹೆಚ್ಚಾಗಿ ಗಂಡಸರ ‘ಈಗೋ’ (Ego) ಹೇಗೆ ಕೆಲಸ ಮಾಡುತ್ತೆ, ಆ ಒಂದು ಅಹಂಕಾರದಿಂದ ಒಬ್ಬ ಹೆಣ್ಣಿನ ಬದುಕು ಹೇಗೆ ಸ್ಮಶಾನ ಆಗುತ್ತೆ ಅನ್ನೋದನ್ನ ಡೈರೆಕ್ಟಾಗಿ ಎದೆಗೆ ನಾಟೋ ತರಹ ಹೇಳಿದ್ದಾರೆ.

ನಾಟಕ ಮುಗಿಯುವಾಗ ಆ ನಾಲ್ಕು ಜನ ಪಶ್ಚಾತ್ತಾಪ ಪಡೋದನ್ನ ನೋಡಿದ್ರೆ, “ನಾವೂ ಕೂಡ ಜೀವನದಲ್ಲಿ ಯಾರಿಗಾದರೂ ಈ ತರಹ ನೋವು ಕೊಟ್ಟಿದ್ದೀವಾ?” ಅಂತ ನಮಗೇ ಅನ್ಸೋಕೆ ಶುರುವಾಗುತ್ತೆ. ಒಟ್ಟಿನಲ್ಲಿ ಹೇಳಬೇಕಂದ್ರೆ, ಇದು ಕೇವಲ ನಾಟಕ ಅಲ್ಲ, ಪ್ರತಿಯೊಬ್ಬರೂ ಒಮ್ಮೆಯಾದ್ರೂ ನೋಡಿ ಕಲಿಯಬೇಕಾದ ಮನುಷ್ಯತ್ವದ ಪಾಠ.

Leave a Comment

Your email address will not be published. Required fields are marked *

Scroll to Top