ನಾವಾಯಿತು, ನಮ್ಮದಾಯಿತು ಎಂದು ಬಾವಿ ಕಪ್ಪೆಯಂತೆ ಬದುಕುತ್ತಿರುವ ಡಿಂಕ್ ಫ್ಯಾಮಿಲಿಸ್ (DINK – Double Income No Kids) ನ ಟ್ರೆಂಡ್ ಇರುವ ಈ ಕಾಲದಲ್ಲಿ, ನಮ್ಮತನ, ನಮ್ಮ ಊರು, ಒಳ್ಳೆಯತನ ಇವೆಲ್ಲವೂ ಡಿಕ್ಷನರಿ ಪದಗಳಾಗಿ ಹೋಗುತ್ತಿರುವ ಈ ಸಮಯದಲ್ಲಿ, ‘ಟೂರಿಸ್ಟ್ ಫ್ಯಾಮಿಲಿ’ ಚಲನಚಿತ್ರವು ಮುಂದೊಂದು ದಿನ ಒಂದು ಮುಖ್ಯ ರೆಫರೆನ್ಸ್ ಪಾಯಿಂಟ್ ಆದರೂ ಆಗಬಹುದು.
ಸಕ್ಕತ್ ಚಂದದ ಅನುಭವ ಕೊಡುವ ಸಿನಿಮಾ. ಮೊದಲ ಫ್ರೇಮ್‌ನಿಂದಲೇ, ನಿರ್ದೇಶಕರು ಕುಟುಂಬದ ಬಂಧಗಳು, ಅನಿರೀಕ್ಷಿತ ಸ್ನೇಹಗಳು, ಮತ್ತು ಹೊಸ ಸ್ಥಳಗಳನ್ನು – ಹಾಗೆಯೇ ನಮ್ಮನ್ನೇ ನಾವು – ಕಂಡುಕೊಳ್ಳುವ ಸಂತೋಷವನ್ನು ಸಂಭ್ರಮಿಸುವ ಅನುಭವಗಳನ್ನು ಕೊಡುವ ಕಥೆಯನ್ನು ಚಂದದ ರೀತಿಯಲ್ಲಿ ಹೆಣೆದಿದ್ದಾರೆ.
ನಟರ ಅಭಿನಯಗಳು ನಿಜಕ್ಕೂ ಹೃದಯಸ್ಪರ್ಶಿಯಾಗಿವೆ. ಪ್ರತಿಯೊಬ್ಬ ನಟರೂ ತಮ್ಮ ಪಾತ್ರಗಳಿಗೆ ಪ್ರಾಮಾಣಿಕತೆ ಮತ್ತು ಆಕರ್ಷಣೆಯನ್ನು ತಂದಿದ್ದಾರೆ.
ನಿಮ್ಮ ಕುಟುಂಬದೊಂದಿಗೆ ಕೂತು ಒಂದು ಒಳ್ಳೆಯ ಸಿನಿಮಾ ನೋಡಬೇಕಿದ್ದರೆ, ‘ಟೂರಿಸ್ಟ್ ಫ್ಯಾಮಿಲಿ’ ಹೈಲಿ ರೆಕಮೆಂಡೆಡ್!


