ಪುತ್ರ ಪುರನೊಂದೊಗೆ ಸಂಧಾನ ಮಾಡಿಕೊಂಡ ಯಯಾತಿ ಕೊನೆಯವರೆ ಯೌವ್ವನ ವ್ಯವಸ್ಥೆಯಲ್ಲಿರಬೇಕು ಅಂತ ಅಂದುಕೊಂಡ ಭಾವ ಹಾಗೂ ಈಗೀನ ಈ ಮೊಡೆಲ್ಲು, ಸಿನೇಮಾ ರಂಗದ ಚಿತ್ರ ನಟಿಯರು ಹಾಗೂ ಚೈತನ್ಯಕ್ಕಿಂತ ದೇಹಕ್ಕೆ ಹೆಚ್ಚು ವ್ಯಾಮೊಹಗೊಂಡಿರುವ ಜೀವಿಗಳ ಬದುಕನ್ನ ಕ್ರಿಸ್ಪ್ ಆಗಿ ತೋರಿಸಲಾಗಿದೆ ಈ ಸಿನೇಮಾದಲ್ಲಿ.
ನಿಸ್ಸಂದೇಹವಾಗಿ ಈ ಥರದ ಕಥೆ ಹಿಂದೆಂದಿಗೂ ಬಂದಿಲ್ಲ. ವಿಚಿತ್ರವಾದ ಕಲ್ಪನೆಯ ಕಥೆ ಹಾಗೂ ಅದಕ್ಕೆ ತಕ್ಕಂಥ ಸಿನೇಮ್ಯಾಟೊಗ್ರಾಫಿ.
ಈ ಸಿನೇಮಾದಲ್ಲಿ ಎಲ್ಲವೂ ಇದೆ. ಹದಿಹರೆಯದ ಹುಡುಗಿಯ ಮೈಮಾಟ, ಅವಳ ಅವಶ್ಯಕತೆಗಿಂತ ಹೆಚ್ಚಿನ ಸೆಕ್ಸಿ ಡ್ಯಾನ್ಸು.. ಕ್ಯಾಮೆರಾಮೆನ್ ಪುಣ್ಯಾತ್ಮನಿಗೆ ನಮೊನಮಃ.. ಎಲ್ಲೆಲ್ಲಿ ಝೂಮ್ ಮಾಡಿ ತೋರಿಸಿದ್ದಾನೆಂದರೆ ಗಣಿತದ ರೇಖೆಗಳೇ ಬೇಡಾ..ಅದನ್ನ ಬಿಟ್ಟು ವಾಕರಿಕೆ, ಕಣ್ಣೀರು, ವಿಸ್ಮಯ, ಅಸಹ್ಯ, ದುಃಖ ಮತ್ತು ಭಯವನ್ನು ನಿಜವಾಗಿಯೂ ಕೆರಳಿಸುವ ದೃಶ್ಯಗಳು ಚಲನಚಿತ್ರವು ಎಲ್ಲ ನಿರೀಕ್ಷೆಗಳನ್ನು ಮೀರಿಸಿದೆ.
ಯವ್ವನ ಹಾಗೂ ಪ್ರತಿಷ್ಠೆ ಅನಾವರತವಗಿರಬೇಕು ಅನ್ನೊ ಖಯಾಲಿಯಿಂದ ಮಾಡೆಲ್ ಒಬ್ಬಳು ತೆಗೆದುಕೊಳ್ಳುವ ಒಂದು ಕೆಮಿಕಲ್ ದಿಂದಾಗಿ ದಕ್ಕುವ ಸುಂದರತೆ, ವಯ್ಯಾರ, ಪಾಪುಲ್ಯಾರಿಟಿ ಹಾಗೂ ಇವುಗಳಿಗೆ ತಕ್ಕ ಪ್ರತಿಫಲ.
ಯಪ್ಪಾ! ನೋಡೊಕ್ಕಾಗಲ್ಲ ಕೊನೆಕೊನೆಯಲ್ಲಿ.
ಮನುಷ್ಯನ ಮನುಷ್ಯನೊಂದಿಗಿನ ಅಹಂಕಾರಗಳ ಯುದ್ಧ..
ಭೂತ, ದೆವ್ವ, ನೆಗೆಟಿವ್ ಎನರ್ಜಿ ಈ ಥರದ ಕಾನ್ಸೆಪ್ಟ್ ಇಲ್ಲದ ಡಾರ್ಕ್ ಹಾರರ್ ಸಿನೇಮಾ.. ಸೀದಾ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ.
ಹೊಸ ಬಗೆಯ ಸಿನೇಮಾಗಳನ್ನು ಇಷ್ಟ ಪಡುವವರು ನೋಡಬಹುದು ಒಮ್ಮೆ.


