The Eternaut

The Eternaut (2025)

ಹೌದು, ಮನುಷ್ಯ ಸಂಘಜೀವಿ.

ಎಲ್ಲವೂ ಸುಖವಾಗಿರುವಾಗ ವೈಯಕ್ತಿಕವಾಗಿ ಯಾವುದೇ ತೊಂದರೆ ಇಲ್ಲದಿರಬಹುದು, ಆದರೆ ಅನಿರೀಕ್ಷಿತವಾಗಿ ಏನಾದರೂ ಸಂಕಷ್ಟ ಎದುರಾದಾಗ ಸಹಾಯಕ್ಕೆ ಜನರು ಬೇಕೇ ಬೇಕು. ಒಮ್ಮೆ ಕರೋನಾ ಕಾಲದ ಪರಿಸ್ಥಿತಿಯನ್ನು ನೆನಪಿಸಿಕೊಳ್ಳಿ, ನಾವು ಹೇಗೆಲ್ಲಾ ಪರದಾಡಿದೆವು ಅಂತ.

ಈ ಮಾತು ಯಾಕೆಂದರೆ, ನಾನು ನಿನ್ನೆ ನೆಟ್‌ಫ್ಲಿಕ್ಸ್‌ನಲ್ಲಿ ಅಚಾನಕ್ಕಾಗಿ ನೋಡಿದ ವೆಬ್ ಸೀರೀಸ್ ‘ದಿ ಎಟರ್ನಾಟ್’ ಮತ್ತೊಮ್ಮೆ ಕರೋನಾ ದಿನಗಳನ್ನು ನೆನಪಿಸಿತು.
ಇಡೀ ಭೂಮಿಯ ವಾತಾವರಣದಲ್ಲಿ ಹಠಾತ್ತಾಗಿ ಬದಲಾವಣೆಯಾಗಿ, ಮಂಜಿನಂತಹ ಏನೋ ಆಕಾಶದಿಂದ ಮಳೆಯಂತೆ ಸುರಿದು, ಸಂಪರ್ಕಕ್ಕೆ ಬಂದವರನ್ನು ಕೊಂದುಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಅನ್ಯಗ್ರಹ ಜೀವಿಗಳ ಕರಾಮತ್ತೋ ಅಥವಾ ಇನ್ನೇನು ನಿಗೂಢತೆಯೋ ಎಂಬ ಸಸ್ಪೆನ್ಸ್ ಅನ್ನು ಕೊನೆಯ ಎಪಿಸೋಡ್‌ವರೆಗೂ ಕಾಪಾಡಿಕೊಂಡು ಬಂದಿದ್ದಾರೆ.

50ರ ದಶಕದ ಪ್ರಸಿದ್ಧ ಕಾಮಿಕ್ ಕೃತಿಯನ್ನು ಆಧರಿಸಿದ ಈ ಸೀರೀಸ್ ಮಾಡಿದ್ದಾರೆ ಅಂತ ಗೂಗಲ್ ಮಾಡಿದಾಗ ಗೊತ್ತಾಯ್ತು,
ಮೂಲ ಕೃತಿಯ ಸಾರವನ್ನು ಉಳಿಸಿಕೊಂಡು ಆಧುನಿಕ ಕಾಲಕ್ಕೆ ಹೊಂದಿಕೊಂಡು ಕಥೆಯ ಮಾಡೋದು ಕಷ್ಟ ಆದರೆ ಈ ಸಿರಿಸ್ ಅದಕ್ಕೆ ಅಪವಾದ ಅನ್ನೊವಹಾಗೆ ಮಾಡಿದ್ದಾರೆ ಅಂತ ಒಂದಷ್ಟು ಕಾಮಿಕ್ ಓದಿದವರು ಬರೆದಿದ್ದಾರೆ ಇದ್ರೂ ಇರಬಹುದು.

‘ದಿ ಎಟರ್ನಾಟ್’ ಕೇವಲ ವೈಜ್ಞಾನಿಕ ಕಾದಂಬರಿಯಲ್ಲ, ಬದಲಾಗಿ ಮಾನವ ಸಂಬಂಧಗಳು, ಬದುಕುಳಿಯುವ ಹೋರಾಟ ಮತ್ತು ಭಾವನಾತ್ಮಕ ಸವಾಲುಗಳನ್ನು ಎದುರಿಸುವ ಒಂದು ಆಳವಾದ ಮತ್ತು ಶ್ರೇಷ್ಠ ಸೈ-ಫೈ ಕಥೆಯಾಗಿದೆ.

ಮೊದಲ ಸೀಸನ್‌ ಅನ್ನು ಇದ್ದಕ್ಕಿದ್ದಂತೆ ಮುಗಿಸಿದ್ದಾರೆ, ಈಗ ಎರಡನೇ ಸೀಸನ್‌ಗಾಗಿ ಕಾಯುತ್ತಿದ್ದೇನೆ.

ಒಟ್ಟಾರೆಯಾಗಿ, ಸೈ-ಫೈ ಕಾನ್ಸೆಪ್ಟ್‌ಗಳನ್ನು ಇಷ್ಟಪಡುವವರಿಗೆ ಇದು ಖಂಡಿತವಾಗಿಯೂ ಇಷ್ಟವಾಗುವ ಸೀರೀಸ್.

Leave a Comment

Your email address will not be published. Required fields are marked *

Scroll to Top