Uff What a Movie…!
ಬಹಳ ದಿನದ ನಂತರ ‘ಪ್ರೀತಿ’ ಅನ್ನೊ ಕಾನ್ಸೆಪ್ಟ್ ನ ಮೇಲೆ ಸಿನೇಮಾ ಮುಗಿದಾಗ ಕಣ್ಣಲ್ಲಿ ನೀರಿತ್ತು..
ಇಂಥಾ ಚಿತ್ರಗಳನ್ನ ಮಡೋದಕ್ಕೆ ಏನ್ ಧಾಡಿ ಬಾಲಿವುಡ್ ನವ್ರಿಗೆ.
‘ಪ್ರೀತಿ’ ಹಂಗೆ..
‘ಪ್ರಿತಿ’ ಹಿಂಗೆ..
ಅಂತೆಲ್ಲ ನೂರೆಂಟು ಓವರ್ ರೇಟೆಡ್ ಶಬ್ದಗಳನ್ನ ಬಳ್ಸಿ ಬಳ್ಸಿ ವಾಕರಿಕೆ ತರ್ಸಿಬಿಟ್ಟಿದ್ದರ ನಡುವೆ ಓ! ಪ್ರೀತಿ ಅನ್ನೊದು ಹಿಂಗೂ ಇರಬಹುದು ಅನ್ನೊದನ್ನ ಚಂದದ ಕಥೆಯ ಮೂಲಕ ಧನುಷ್, ಕ್ರಿತಿ ತೆರೆಯ ಮೇಲೆ ಬಂದಿದ್ದಾರೆ.
ಅದೇನೊ ವೈನ್ ಕುಡಿದಾಗ ನಶೆ ಹಗುರವಾಗಿ ತೆಲೆಗೆ ಏರತ್ತಂತೆ ಹಂಗೆ ಸಿನೇಮಾದ ಕಥೆ, ಅದರ ಭಾವನಾತ್ಮಕತೆಯ ಧಾಟಿ ಪ್ರೇಕ್ಷಕನ್ನ ಯಾವಾಗ ಆವರಿಸಿಕೊಂಡು ಬಿಡತ್ತೆ ಅಂತ ಗೊತ್ತೇ ಆಗಲ್ಲ. ಎಲ್ಲೂ ಬೋರ್ ಹೊಡೆಸದ ಸ್ಟೋರಿ.
ಕಥೆ ಕಾಲ್ಪನಿಕ ಆಗೀದ್ರೂ ಪಾತ್ರಗಳು ಹೇಳುವ ಕಥೆ ನೈಜತೆಗೆ ಅಲ್ಲಲ್ಲಿ ಕನೆಕ್ಟ ಮಾಡಿಕೊಳ್ಳಬದು ಅಂತ ಅನ್ಸತ್ತೆ.
ಧನುಷ್ ನ ಆ್ಯಕ್ಟಿಂಗ್ ಬಗ್ಗೆ ಏನು ಹೇಳೋದು ದೈತ್ಯ ರೂಪದ ಅಭಿನಯ ಅವನದು, ಅಷ್ಟೇ ಸಪೋರ್ಟಿಂಗ್ ಸಾಥ್ ಕೃತಿ ಕೊಟ್ಟಿದ್ದಾಳೆ. ಇವರಿಬ್ಬರಷ್ಟೇ ಮುಖ್ಯ ಪಾತ್ರ ಪ್ರಕಾಶ ರಾಜ್ ಅವರದ್ದು. ಎಲ್ರೂ ಮಸ್ತ! ಸಿನೇಮಾದ ಇನ್ನೊಂದು ಜೀವ ಅಂದ್ರೆ ಡೈಲಾಗ್ಸ್.. ಏನ್ ಸಕ್ಕತ್ತಾಗಿ ಬರೆದಿದ್ದಾರ ಗುರು..
ಪ್ರೀತಿ, ಲವ್ವು ಅಂತೆಲ್ಲ ಕೈ ಮೇಲೆ ಹಚ್ಚೆ ಹಾಕ್ಸಿಕೊಂಡ್ವರಿಗೆ..
ಪುಸ್ತಕದ ಕೊನೆಯ ಹಾಳೆಯಲ್ಲಿ ಹೆಸರು ಬರೆದವರಿಗೆ ಹೆಚ್ಚು ಇಷ್ಟ ಆಗಿ ಇನ್ನುಳಿದ ನಮ್ಮಂಥವರಿಗೆ ಅವರಿಗಿಂತ ಚಂಚೂರು ಕಡಿಮೆ ಇಷ್ಟವಾಗಬಹುದು.
ನೋಡಬಹುದು..


