2018 ರಲ್ಲಿ ತೆರೆಕಂಡಿದ್ದ ಸ್ತ್ರೀ 1 ಕ್ಕೆ ಹೋಲಿಸಿದರೆ ಸಿನೇಮಾದಲ್ಲಿ ಹಾಸ್ಯ ಪ್ರಧಾನ ಸನ್ನಿವೇಶಗಳು ಹೆಚ್ಚಾಗಿ ಕಂಡು ಬಂದಿವೆ ಒಂಥರಾ ಸರಾಸರಿಯ ಸಿನೇಮಾ.
ಈ ನಡುವೆ ಬಾಲಿವುಡ್ ನ ಹಾರರ್ ಸಿನೇಮಾಗಳಲ್ಲಿ ಈ ದೆವ್ವಗಳ ಪ್ರಖರತೆ ಸಿಕ್ಕಾಪಟ್ಟೆ ಕಡಿಮೆಯಾಗಿಬಿಟ್ಟಿದ್ದು ಈ ಕಡೆ ಭಯಾನೂ ಆಗೋದಿಲ್ಲ ಆ ಕಡೆ ಕಾಮಿಡಿನೂ ಆಗೋದಿಲ್ಲ. ಕಥೆಯು ಮೊದಲ ಭಾಗದದ ಥರನೆ ಇದ್ದುದರಿಂದ ಅಷ್ಟು ತಾಜಾ ಮಜವನ್ನ ಕೊಡಲಿಲ್ಲ.
ಚಿತ್ರವನ್ನು ಹಿಡಿದಿಟ್ಟು ಕೊಂಡ ಅಂಶಗಳೆಂದರೆ ಶ್ರದ್ಧಾ ಕಪೂರ್, ರಾಜ್‌ಕುಮಾರ್ ರಾವ್, ಪಂಕಜ ತ್ರಿಪಾಠಿ ಹಾಗೂ ಅಭಿಶೇಕ್ ಬ್ಯಾನರ್ಜಿ ಅವರುಗಳ ಅಭಿನಯ.
ತಮನ್ನಾಳ ಐಟಮ್ ಸಾಂಗು, ಗೆಸ್ಟ್ ಅಪಿಯರೆನ್ಸ್ ನಲ್ಲಿ ಕಾಣುವ ಅಕ್ಷಯ ಕುಮಾರ್ ಹಾಗೂ ವರುಣ್ ಧವನ್ ನ ಪಾತ್ರಗಳಿದ್ದರೂ ಸಿನೇಮಾ ಪ್ರೇಕ್ಷಕನನ್ನ ಹಿಡಿದಿಟ್ಟುಕೊಳ್ಳಳು ಹರಸಾಹಸ ಮಾಡಬೇಕಾಯ್ತು.
ಒಂದ್ ಸಾರಿ ನೋಡಬಹುದು…


