ಯಾರೇನೆ ಅಂದುಕೊಳ್ಳಲಿ, ಹಿಮ್ಮತ್ ಸಿಂಗ್ ಪಾತ್ರದ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ. ಇನ್ನೂ ಹತ್ತು ಸರಣಿಗಳು ಬಂದರೂ, ಈ ಕಥೆಗಳ ನಿರೂಪಣೆ ಇಷ್ಟವಾಗುವುದಂತೂ ಖಚಿತ. ಬಹಳ ದಿನದಿಂದ ಬಕಪಕ್ಷಿಯಂತೆ ಕಾಯುತ್ತಿದ್ದ ನನಗೆ ಈ ಸರಣಿ ನಿಜಕ್ಕೂ ಸಿಕ್ಕಾಪಟ್ಟೆ ಇಷ್ಟವಾಯ್ತ ಸೋ ಬಿಂಜ್ ವಾಚ್ ಮಾಡಿ ಮುಗಿಸಿದ್ದಾಯ್ತು.
ನೀವು ಮೊದಲ ಸೀಸನ್‌ನ ‘ಸ್ಪೆಷಲ್ ಆಪ್ಸ್’ ಅನ್ನು ಇಷ್ಟಪಟ್ಟಿದ್ದರೆ, ಈ ಸೀಸನ್ ನಿಮಗೆ ಖಂಡಿತ ಇಷ್ಟವಾಗುತ್ತದೆ. ಮುಖ್ಯವಾಗಿ ಕೆ. ಕೆ. ಮೆನನ್ ಅವರ ಪಾತ್ರದ ಸಲುವಾಗಿ! ಎಂಥಾ ನಟನೆ ಮಾರಾಯಾ, ಅವರ ಅಭಿನಯಕ್ಕೆ ಫಿದಾ ಆಗದೆ ಇರಲಾರಿರು ಯಾರು.
ಈ ಬಾರಿ ಸರಣಿಯು ಸೈಬರ್ ವಾರ್ ನ ಥೀಮ್‌ನೊಂದಿಗೆ ಹೊರಬಂದಿದ್ದು, ಕಥೆಯು ಕೊನೆಯ ಎಪಿಸೋಡ್‌ವರೆಗೂ ಸಸ್ಪೆನ್ಸ್ ಉಳಿಸಿಕೊಳ್ಳುತ್ತದೆ. ಅಲ್ಲಲ್ಲಿ ಒಂದಷ್ಟು ಅನಗತ್ಯ ಪ್ರಸಂಗಗಳನ್ನ ಎಳೆದರೂ, ಅದು ಅಷ್ಟು ಬೇಸರ ಮೂಡಿಸುವುದಿಲ್ಲ.
ಒಟ್ಟಾರೆಯಾಗಿ, ನೀವು ಸ್ಪೈ ಥ್ರಿಲ್ಲರ್‌ಗಳನ್ನು ಇಷ್ಟಪಡುವವರಾಗಿದ್ದರೆ ಮತ್ತು ಕೆ. ಕೆ. ಮೆನನ್ ಅವರ ಅಭಿಮಾನಿಯಾಗಿದ್ದರೆ, ‘ಸ್ಪೆಷಲ್ ಆಪ್ಸ್ 2.0’ ಅನ್ನು ಖಂಡಿತ ನೋಡಬಹುದು.


