ಯಾಕೊ ಈ ಸೀಸನ್ನಿನಲ್ಲಿ ಒಂದೊಳ್ಳೆ ಚಿತ್ರ ಕಣ್ಣಿಗೆ ಬೀಳ್ತಿಲ್ಲ ಮಾರ್ರೆ!!
ಫಿರ್ ಆಯಿ ಹಸೀನ್ ದಿರ್ಲುಬಾ ಕ್ಕೂ ಇದು ಅನ್ವಯ ಆಯ್ತು ನಿರೀಕ್ಷೆ ಇಟ್ಟುಕೊಂಡಷ್ಟು ಇಷ್ಟವಾಗ್ಲಿಲ್ಲ. ನಿರ್ದೇಶಕ ಮೊದಲ ಚಿತ್ರದಲ್ಲಿ ಬಳಸಿದ ಟ್ವಿಸ್ಟ್‌ಗಳನ್ನು ಮತ್ತೆ ಬಳಸಿರುವುದರಿಂದ ಕಥಾಹಂದರವು ಊಹಿಸಲು ಸಾಧ್ಯವಾಗುತ್ತದೆ ಮತ್ತು ಬೋರ್ ಹೊಡ್ಸತ್ತೆ.
ಸನ್ನಿ ಕೌಷಲ್ ರ ಅಭಿಮನ್ಯುವಿನ ಪಾತ್ರ ನಿರ್ವಹಣೆ, ಹಳೆಯ ಘಟನೆಗಳಿಂದ ಆಕಾರ ಪಡೆದ ಅವನ ಪ್ರೀತಿ, ಮನೋವಿಕೃತಿ ಹೊಂದಿರುವ ನಟನೆ ಅಲ್ಲಲ್ಲಿ ಚಿತ್ರವನ್ನ ಹಿಡಿದಿಟ್ಟುಕೊಳ್ಳತ್ತೆ ಇನ್ನು ವಿಕ್ರಾಂತ್ ಮೆಸ್ಸಿ, ಜಿಮ್ಮಿ ಶೇರ್ಗಿಲ್ ಅಷ್ಟಕ್ಕಷ್ಟೆ ಅನ್ಸಿದ್ರು…ಫುಲ್ ಸಪ್ಪೆ ಸಪ್ಪೆ ಸಿನೇಮಾ.
ತಾಪ್ಸಿ ಪನ್ನುವುಗಿರುವ ನಟನೆಯ ಸಾಮರ್ಥ್ಯವನ್ನು ಮಿಸ್ ಯ್ಯೂಸ್ ಮಾಡಿದ್ದು ಎದ್ದು ಕಾಣ್ಸತ್ತೆ. ಸಿನೇಮಾದುದ್ದಕ್ಕು ಅವಳು ತನ್ನ ಸೆರಗನ್ನ ಸರಿ ಮಾಡುವುದರಲ್ಲೆ ಚಿತ್ರ ಮುಗದಿದ್ದು ಗೊತ್ತೆ ಆಗ್ಲಿಲ್ಲ. ಅವಷ್ಯಕವಿಲ್ಲದ ಗ್ಲಾಮರ್ ತೋರಿಸೊದಕ್ಕೆ ಹೋಗಿ ಚಿತ್ರವನ್ನ ಝೀರೊ ಇಂಟ್ರೇಸ್ಟ್ ಮಾಡ್ಬಿಟ್ಟಿದ್ದಾರೆ.
ನಂಗಂತು ಇಷ್ಟವಾಗ್ಲಿಲ್ಲ.
ಪುಣ್ಯಕ್ಕೆ ಓಟಿಟಿ ಯಲ್ಲಿ ನೋಡಿದ್ದು ಒಳ್ಳೆದಾಯ್ತು ![]()


