Perfect Days

This world is mathematically perfect ಅಂತ ಅದೆಷ್ಟೊ ಸಂತರ ಪ್ರವಚನದಲ್ಲಿ ಕೇಳಿದ್ದು ನೆನಪಿದೆ, ಬಟ್ ಒಂದು ಡೌಟು ಯಾವಾಗ್ಲೂ ಕಾಡ್ತಾ ಇರತ್ತೆ.
ಮನುಷ್ಯನಿಗೆ ಯಾವುದು ಬೇಕು ಎಲ್ಲವೂ ನಮ್ಮ ಬಳಿ ಇದ್ದಾಗಲು ಏಕೆ ಮನಸ್ಸು ಶಾಂತ ಸ್ಥಿತಿಗೆ ಬರೋದಿಲ್ಲ .. ಏನದಕ್ಕೆ ಬೇಕಾಗಿರೋದು? ಮತ್ತದೆ.. ಬೇಕಾಗಿರೋದು ಸಿಕ್ಕಾಗಲಾದ್ರು ಶಾಂತ ಸ್ಥಿತಿಗೆ ತಲಪುತ್ತಾ?

ಈ ತರಹದ ನೂರೆಂಟು ಪ್ರಶ್ನೇಗಳನ್ನು ತಲೆಲಿಟ್ಟುಕೊಂಡು ದಿನಗಳು ಉರುಳುತ್ತಿರುವ ಸಂದರ್ಭದಲ್ಲಿ ಕಣ್ಣಿಗೆ ಬಿದ್ದ ಸಿನೇಮಾ “ಪರ್ಫೆಕ್ಟ್ ಡೇಸ್”.

ಜಪಾನ್ ನ ಟೋಕಿಯೊ ಶಹರದಲ್ಲಿ ಟಾಯ್ಲೆಟ್ ಕ್ಲೀನ್ ಮಾಡುವ ಸಂತನಂತಿರುವ ವ್ಯಕ್ತಿಯ ದಿನನಿತ್ಯದ ಸ್ಫೂರ್ತಿಯ ಬಿಡಾರಗಳನ್ನು ಒಂದು ಕಡೆ ಗುಡ್ಡೆ ಹಾಕಿ ಸಿನೇಮಾ ಮಾಡಿದ್ದಾರೆ.

ಪ್ರಕೃತಿ, ಸಂಗೀತ, ಪುಸ್ತಕ, ಇವೆಲ್ಲದಕ್ಕಿಂತ ಹೆಚ್ಚಾಗಿ ನಾಯಕನಿಗೆ ತನ್ನ ಕೆಲಸದ ಮೇಲಿರುವ ಶ್ರದ್ಧೆ ಹಾಗೂ ತನ್ನ ಬದುಕನ್ನ ಒಂದು ಲಯದಲ್ಲಿಟ್ಟಿಕೊಳ್ಳಬೇಕೆಂದ ಉತ್ಕಟವಾದ ಹಪಹಪಿ ಎಲ್ಲವೂ ಇದೆ.

ದಿನ ಬೆಳಗಾದರೆ ಎದುರಾಗುವ ನೂರೆಂಟು ಸಮಸ್ಯೆಗಳ ಹೊರತಾಗಿಯೂ ಬದುಕನ್ನ ಹೇಗೆ ಪರ್ಫೆಕ್ಟ್ ಆಗಿ ಇಟ್ಟುಕೊಳ್ಳಬಹುದು ಅನ್ನೊ ಸುಂದರವಾದ ಸಂದೇಶವನ್ನ ನಿರ್ದೇಶಕರು ಕೊಟ್ಟಿದ್ದಾರೆ.

ಸಾಯೋದ್ರಲ್ಲಿ ಒಂದಷ್ಟು ಸಿನೇಮಾಗಳನ್ನ ನೋಡಲೇಬೇಕು ಅನ್ನೊ ಲಿಸ್ಟ್ ಗೆ ಸೇರಿಸಿಕೊಳ್ಳಬಹುದುದಾದ ಸಿನೇಮಾ. ಹಾ! ಆಸ್ಕರ್ ಗೆ ಬೆಸ್ಟ್ ಫಿಲ್ಮ್ ಅನ್ನೊ ಕೆಟೆಗೆರಿಯಲ್ಲಿ ನಾಮಿನೇಟ್ ಕೂಡಾ ಆಗಿತ್ತು.

ನೋಡಿ ಒಮ್ಮೆ… ಚನ್ನಾಗಿದೆ.

Leave a Comment

Your email address will not be published. Required fields are marked *

Scroll to Top