“ಮುಕ್ಕಾಂ ಪೋಸ್ಟ್ ದೇವಾಚ ಘರ್” – ಒಂದು ಅಪ್ಪಟ ಆಪ್ತತೆಯ ಅನುಭವ!
ಎಲ್ಲ ಇಲ್ಲದರ ನಡುವೆ ಬದುಕು ಕಟ್ಟಿಕೊಳ್ಳೊವ ಬಗೆಯನ್ನ ಪುಟ್ಟ ಹುಡುಗಿಯ ಮುಖಾಂತರ ತೋರಿಸಿದ ಸಿನೇಮಾ. ಪುಟ್ಟಿ ಜಿಜಾ (ಮೈರಾ ವೈಕುಲ್) ಇಷ್ಟ ಆಗದೆ ಇರೊದಿಲ್ಲ.
ಈಗಷ್ಟೇ ವೀಕ್ಷಿಸಿದ “ಮುಕ್ಕಾಂ ಪೋಸ್ಟ್ ದೇವಾಚ ಘರ್” ಎಂಬ ಮರಾಠಿ ಚಲನಚಿತ್ರವು ನಿಜಕ್ಕೂ ಸಕ್ಕತ್ತಾಗಿ ಅನಸ್ತು.. ದೊಡ್ಡ ದೊಡ್ಡ ಕಾಸ್ಟು, ಸೆಟ್ಟು, ಕಿವಿ ಅರಚುವ ಸಂಗೀತ, ಲಾರ್ಜರ್ ದ್ಯಾನ್ ಲೈಫು ಇವೆಲ್ಲ ಯಾವೂದೂ ಇಲ್ಲದ ಪಕ್ಕ ಸೂಕ್ಷ್ಮ ಸಂವೇದನೆಗಳ ಭಾವಗಳನ್ನು ಎತ್ತಿತೋರಿಸುವ ಚಿತ್ರ. ಹೇಳಿ ಕೇಳಿ ಮರಾಠಿ ಮೋವ್ಹಿ ಅವರ ಭಾಷೆ, ಸಂಸ್ಕಾರ, ಮಾತು, ಕಥೆ ಎಲ್ಲವೂ ಡಿಫಾಲ್ಟ್ ಆಗಿ ಚಂದ ಇದ್ದೆ ಇರತ್ತೆ ಹಿಂಗಾಗಿ ಸಿನೇಮಾ ಇಷ್ಟವಾಗೋದಂತು ನಿಜ.
ಅಲ್ಲಲ್ಲಿ ಬೋರ್ ಹೊಡೆಸ್ತಿದೆ ಅಂತ ಅನ್ಕೊಂಡ್ರು ಕೊನೆಯಲ್ಲಿ ಇವೇ ಭಾವಗಳು ಬದುಕಿಗೆ ಸಹಾಯ ಮಾಡತ್ವೆ ಅನ್ನೊ ಸಮಝಾಯಿಸಿ ನಮಗೆ ನಾವೇ ಕೊಟ್ಟೊಂಡು ಬಿಡೊ ಮನಸ್ತಿತಿಗೆ ಮತ್ತೆ ನಾವೇ ಬಂದು ಬಿಡ್ತಿವಿ ಇದು ಚಿತ್ರದ ಹೈಲೈಟ್.
ಚಿತ್ರದ ಪ್ರತಿಯೊಂದು ಪಾತ್ರವೂ ಅದ್ಭುತವಾಗಿದೆ, ಅದರಲ್ಲೂ ಜಿಜಾ ಪಾತ್ರವನ್ನು ನಿರ್ವಹಿಸಿದ ಮೈರಾ ಅದ್ಭುತ ಅಭಿನಯ ನೀಡಿದ್ದಾಳೆ. ಆಕೆಯ ಮುಗ್ಧತೆ, ಸಂಭಾಷಣೆಗಳ ಶೈಲಿ ನಿಜಕ್ಕೂ ಮನೋಜ್ಞವಾಗಿದೆ. ಚಿತ್ರ ನೋಡುವಾಗ ನೀವು ನಗ್ತಿರಿ, ಕಣ್ಣೀರಿಡುತ್ತೀರಿ ಮತ್ತು ಚಿತ್ರ ಮುಗಿದಾಗ ಒಂದು ಸ್ಪೂರ್ತಿದಾಯಕ ಭಾವವನ್ನ ಹೊಂದಿರುತ್ತಿರಿ ಅಂತ ಖಾರ್ತಿಯಾಗಿ ಹೇಳಬಹುದು.
ಮಕ್ಕಳು ಮತ್ತು ವಯಸ್ಕರು ಜೊತೆಗೂಡಿ ಆನಂದಿಸಬಹುದಾದ ಈ ಚಿತ್ರವು ಜೀವನದ ಮೌಲ್ಯಯುತ ಪಾಠವನ್ನು ಕಲಿಸಲು ಸಹಾಯ ಮಾಡತ್ತೆ.


