Mitti – Ek Nayi Pehchaan

Mitti - Ek Nayi Pehchaan

ದಿನಗಳಲ್ಲಿ ನೋಡಿದ ಚಂದದ ಸಿರೀಜ಼್. ಸುಮ್ ಸುಮ್ನೆ ಒಂದು ಕಥೆಯನ್ನ ನಾವೂ ಮಾಡಬೇಕು ಒಂದಷ್ಟು ಕೋಟಿ ದುಡ್ಡು ಗಳಿಸಬೇಕು ಅನ್ನೊ ಉದ್ದೇಶದಿಂದ ಮಾಡಿದ ಶೋ ಅಲ್ಲ ‘ಮಿಟ್ಟಿ – ಏಕ್ ನಯೀ ಪೆಹ್ಚಾನ್’ ನೆಲದ ಬಗ್ಗೆ, ಕೃಷಿ ಮತ್ತು ಗ್ರಾಮೀಣ ಜೀವನದ ಗೌರವವನ್ನ ಹೆಚ್ಚು ಮಾಡುವಂಥಹ ಕಥೆ.

ಇಲ್ಲಿ ಯಾವೂದು ಅತೀಯಾಗಿ ಚಿತ್ರಿಸಿಲ್ಲ ಎಲ್ಲವೂ ಸಹಜ ಚಿತ್ರಣ. ತಾತನ ಸಾವಿನಿಂದ ನೋವುಂಡ ರಾಘವ್ ತನ್ನ ತಾತನ ಗ್ರಾಮಕ್ಕೆ ಮರಳುತ್ತಾನೆ. ತಾತನ ಆರ್ಥಿಕ ಸಂಕಷ್ಟ ಮತ್ತು ಕೃಷಿಯಲ್ಲಿನ ವಿಫಲ ಪ್ರಯತ್ನಗಳನ್ನು ಅರಿತು, ನಗರದ ಸುಖಮಯ ಜೀವನ, ಕೆಲಸ ಮತ್ತು ಪ್ರೀತಿಯನ್ನು ತ್ಯಜಿಸಿ ಹಳ್ಳಿಯಲ್ಲೇ ಉಳಿದು, ಆಧುನಿಕ ಕೃಷಿಯ ಮೂಲಕ ಸಾಲ ತೀರಿಸಿ, ಗ್ರಾಮಕ್ಕೆ ಹೊಸ ಭವಿಷ್ಯ ನೀಡಲು ಹೊರಡುತ್ತಾನೆ.

ʼಸ್ವದೇಸ್‌ʼ ಸಿನೇಮಾದ ಥರ ಕಥೆ ಕಂಡರೂ It has its won shade towards storyline ಕಾಣಬಹುದು. ಸರಣಿಯ ಬರವಣಿಗೆ ಕೆಲವು ಕಡೆ ಗೆಸ್‌ ಮಾಡಬಹುದಾದರೂ, ಅದರ ಪ್ರಾಮಾಣಿಕತೆ ಮತ್ತು ಹೃದಯಸ್ಪರ್ಶಿ ಕಥೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಕೃಷಿಯಲ್ಲಿ ಎದುರಾಗುವ ಸವಾಲುಗಳು, ಪ್ರಕೃತಿಯ ಅನಿಶ್ಚಿತತೆ ಮತ್ತು ಸ್ಥಳೀಯ ಬೆಂಬಲದ ಕೊರತೆಯನ್ನು ಸೂಕ್ಷ್ಮವಾಗಿ ತೋರಿಸುತ್ತದೆ. ರಾಘವ್‌ಗೆ ಸಮಸ್ಯೆಗಳು ಸುಲಭವಾಗಿ ಬಗೆಹರಿಯುವಂತೆ ತೋರಿದರೂ, ಕಥೆಯ ಒಟ್ಟಾರೆ ಮನವರಿಕೆ ಮತ್ತು ಮಣ್ಣಿನೊಂದಿಗಿನ ಭಾವನಾತ್ಮಕ ಸಂಬಂಧವನ್ನು ಶೋ ಯಶಸ್ವಿಯಾಗಿ ಮೂಡಿಸುತ್ತದೆ.

ನೋಡಿ.. ಚನ್ನಾಗಿದೆ.

Leave a Comment

Your email address will not be published. Required fields are marked *

Scroll to Top