Marco

ಮಾರ್ಕೆಟ್‌ ನಲ್ಲಿ ಸಿಕ್ಕಾಪಟ್ಟೆ ಹೈಪ್‌ ಆದ ಸಿನೇಮಾವನ್ನ ನೋಡಿ ಮುಗಿಸುವುದರೊಳಗೆ ಕಣ್ನುಗಳೆಲ್ಲ ಕೆಂಪಾಗಿ ಬಿಟ್ವು…

ಬಿಗ್ ಬಡ್ಜೆಟ್ ಸಿನಿಮಾಗಳಿಗೆ ಬೇಕಾದ ಎಲ್ಲ ಬಗೆಯ ಪದಾರ್ಥಗಳನ್ನು ಸಿನೇಮಾದಲ್ಲಿ ಇವೆ. . ಉಣ್ಣಿ ಮುಕುಂದನ್ ಅವರ ಸ್ಕ್ರೀನ್ ಪ್ರಜ್ಞೆ ಮತ್ತು ಸ್ಟೈಲಿಶ್ ಅಭಿನಯ ಈ ಚಿತ್ರವನ್ನು ಪ್ರೇಕ್ಷಕನನ್ನು ಕಟ್ಟಿಹಾಕುವ ಪ್ರಮುಖ ಅಂಶವಾಗಿದೆ. ಹೀರೊನ ಮುಖಭಾವ, ದೇಹಭಾಷೆ, ಮತ್ತು ಯಪ್ಪ ಅಂತನಿಸುವ ಆಕ್ಷನ್ ದೃಶ್ಯಗಳು ಕಣ್ಣುಮೆಚ್ಚುವಂತಿವೆ ಇದರ ಜೊತೆಗೆ ರವಿ ಬಸ್ರೂರರ ಪೈಪೋಟಿಯ ಸಂಗೀತ ಚಿತ್ರವನ್ನು ಮುನ್ನಡೆಸಿದೆ..

ಆದರೆ,

ಚಿತ್ರದ ತುಂಬ ತೀವ್ರ ಹಿಂಸಾತ್ಮಕ ದೃಶ್ಯಗಳು ಮತ್ತು ಬಿಟ್ಟು ಬಿಡದ ರೀತಿಯ ರಕ್ತಪಾತದ ದೃಷ್ಯಗಳು ಹೊಗ್ತಾ ಹೊಗ್ತಾ ವಾಕರಿಕೆ ಬರೋ ಥರಾ ಮಾಡಿದ್ದಂತು ನಿಜಾ. ಈ ಪರಿಯ ಹಿಂಸಾತ್ಮತೆ ತೆರೆಯ ಮೇಲೆ ತೊರೊಸಿ ಏನನ್ನ ಹೇಳೊಕ್ಕೆ ಹೊರಟಿದ್ದಾರೆ ಏನೊ.. ಸಿನೇಮಾದ ಪ್ರಭಾವ ಸಮಾಜ ಮೇಳೆ ಬೀಳತ್ತೆ ಅನ್ನೊ ಮಿನಿಮಮ್‌ ಕಾಮನ್‌ ಸೆನ್ಸ್‌ ಇಲ್ಲದ ಸಿನೇಮಾ

ಅಥೋರಿಟಿಗಳು.

ನೊಡ್ಬೇಕೊ ಬೆಡ್ವೊ ನಾನು ಹೇಳೊದಿಲ್ಲ.

Online ನಲ್ಲಿ ರಿವಿವ್‌ ಓದಿ ಸಿನೇಮಾ ನೋಡಿ..

ಬಾಕಿ ನಿಮ್ಮ ವಿವೇಚನೆಗೆ ಬಿಟ್ಟಿದ್ದು.

Not Recommended for weak hearted people.

#MarcoMovie

Leave a Comment

Your email address will not be published. Required fields are marked *

Scroll to Top