ಕಳೆದ ತಿಂಗಳು ಬೆಂಗಳೂರಿಗೆ ಹೋದಾಗ ನನ್ ತಂಗಿ ತನ್ ಮೋಬೈಲಿನಿಂದಾನೆ ಹಾಲನ್ನ ತರ್ಸಿದ್ದು ನೋಡಿ ಬೆರಗಾಗಿ ಕೇಳಿದ್ದೆ ಅಲ್ವಾ ಬೆಳಗೆದ್ದು ಹಾಲನ್ನಾದರು ತರೋದಕ್ಕೆ ನಾಲ್ಕಾರು ಹೆಜ್ಜೆ ಹಾಕಬಹುದಲ್ವಾ ಅಂತ. ಅದಕ್ಕವಳು ಹೋಗ್ರಣ್ಣ ಇವರ ಆಫೀಸು ಮಗನ ಸ್ಕೂಲು ಇವೆಲ್ಲದರ ಮಧ್ಯೆ ಎಲ್ಲಾಗತ್ತೆ ಅಂತ.
ಕಾಲ ಬದಲಾದ ಹಾಗೆ ಎಲ್ಲವೂ ಬದಲಾಗೋದು ಸಹಜತೆ..
ಆದರೆ 1976 ರಲ್ಲಿ ಗುಜರಾತಿನಲ್ಲಿ ʼಕ್ಷೀರ ಕ್ರಾಂತಿʼ/ʼಶ್ವೇತ ಕ್ರಾಂತಿʼಯನ್ನು ಮಾಡಿದ ವರ್ಗಿಸ್ ಕುರಿಯನ್ನರ ಕಾಲದಲ್ಲಿ ಹೆಂಗಿದ್ದೀರಬಹುದೆಂದು ನಿನ್ನೆ ಶ್ಯಾಮ್ ಬೆನ್ಗಲ್ ರ “ಮಂಥನ್” ಸಿನೇಮಾ ನೋಡಿದ ಮೇಲೆ ಗೊತ್ತಾಯ್ತು.
ಜಾತಿ, ಧರ್ಮ, ಮೇಲು-ಕೀಳು, ವಸಾಹಾತುಷಾಹಿ ಇಂಥಾ ನೂರೆಂಟು ಪಿಡುಗುಗಳು ಇದ್ದ ಕಾಲಘಟ್ಟದಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಹಾಲು ಹಾಗೂ ಹಾಲಿನ ಪದಾರ್ಥಳ ಸಹಕಾರ ಸಂಘ ಮಾಡಿ ಸಮಾಜವನ್ನ ಬೆಸೆಯಲು
ಮಾಡಿದ್ದು ಕೈಂಕರ್ಯ ಅಷ್ಟಿಟ್ಟಲ್ಲ.
ಅದಕ್ಕೇನೆ ಈ ಮಂಥನ ಸಿನೇಮಾಕ್ಕೊಂದು ರೆಕಾರ್ಡ್ ಕೂಡಾ ಇದೆ. ಭಾರತದ ಮೊದಲ Crowd funding ಮೂಲಕ ತೆಗೆಯಲಾದ ಸಿನೇಮಾ. ಐದು ಲಕ್ಷ ರೈತರು ತಲಾ ಎರಡೆರೆಡು ರೂ. ಕೊಟ್ಟು ಸಿನೇಮಾವನ್ನ ನಿರ್ದೆಶನ ಮಾಡ್ಸಿದ್ರಂತೆ.
ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಸುಧಾರಣೆಯ ಆಧುನಿಕ ಆಲೋಚನೆಗಳೊಂದಿಗೆ ಹೋರಾಡುತ್ತಿರುವ ಸ್ವತಂತ್ರ ಸಮಾಜವನ್ನ ಪ್ರದರ್ಶಿಸಿದ ಮೊದಲ ಹಿಂದಿ ಚಲನಚಿತ್ರ ʼಮಂಥನ್ʼ ಎಂದರೆ ತಪ್ಪಾಗ್ಲಿಕ್ಕಿಲ್ಲ.
ಸಿನೇಮಾದಲ್ಲಿ ಗಿರಿಶ್ ಕಾರ್ನಾಡ್, ಸ್ಮೀತಾ ಪಾಟೀಲ್, ನಸೀರುದ್ದೀನ್ ಷಾ, ನಮ್ಮ ಅನಂತನಾಗ್, ಅಮ್ರಿಶ್ ಪುರಿ ಇಂಥಾ ದೈತ್ಯ ತಾರಾಗಣ ಹೊಂದಿದ್ದು ಆವತ್ತಿನ ಕಾಲದ ಹೋರಾಟವನ್ನು ತುಂಬಾ ಚನ್ನಾಗಿ ಸ್ಕ್ರೀನ್ ಮೇಲೆ ಮೂಡಿ ತೋರಿಸಿದ್ದಾರೆ. ಒಂದು ಚಿಕ್ಕ ಹಳ್ಳಿಯಲ್ಲಿ ನೂರೆಂಟು ದಬ್ಬಾಡಳಿತಕ್ಕೆ ಸಿಲುಕಿಕೊಂಡ ಹಳ್ಳಿಯ ಮುಗ್ಧ ಜನರನ್ನ ಒಬ್ಬ ಪಶು ವೈದೈ ಯಾವ ರೀತಿ ಬದಲಾಯಿಸುತ್ತಾನೆ ಅನ್ನೊವ ಕಥೆ.
ಶ್ಯಾಮ್ ಬೆನ್ಗಲ್ ರಿಗೆ ಹದಿನೆಂಟು ನ್ಯಾಷನಲ್ ಅವಾರ್ಡ್ ಬಂದಿದ್ವು ಅನ್ನೊ ಒಂದು ಮಾತಿಗೆ ಅವರ ಸಿನೇಮಾಗಳ ಮೇಲೆ ಒಂದು ಕಣ್ಣು ಹಾಸಿಸಬೇಕೆಂಬ ಮನದಾಸೆ ಮೂಡಿದೆ.
ಕ್ಲಾಸಿಕ್ ಕಲ್ಟ್ ಸಿನೇಮಾ ಇಷ್ಟ ಪಡೋರು ನೋಡಲೇಬೇಕಾದ ಸಿನೇಮಾ.
#Manthan#ShyamBenegal#GirishKarnad#SmitaPatil#NaseeruddinShah


