ಸೋಷಿಯಲ್ ಮೀಡಿಯಾಲಿ ಈ ಸಿನೇಮಾದ ಕಂಟೆಂಟು ದಿನಕ್ಕೆ ಹತ್ತಿಪ್ಪತ್ರ ಥರಾ ರೆಕಮೆಂಡೆಷನ್ ಬಂದು, ಥೇಟರ್ ನಲ್ಲಿ ರೀ ರಿಲಿಜ಼್ ಆಗಿ ಜನರ ಮೆಚ್ಚುಗೆ ಪಡೆದು, ನನ್ನಿಂದ ಅಧೇಗೆ ಮಿಸ್ ಆಗಿತ್ತು ಅಂತ ಯೋಚನೆಯಲ್ಲಿದ್ದೆ. ಕೊನೆಗೂ ನಿನ್ನೆ ಕಾಲ ಕೂಡಿ ಬಂತು .. and its not disappointed.
Imtiaz ali’s underrated gem. – Laila Majnu.
ಲೈಲಾ ಮಜ್ನು ಹಾಗು ಇನ್ನುಳಿದ ಒಂದಷ್ಟು ಪ್ರೇಮ/ಪ್ರೇಮಿಗಳ ಕಥೆಗಳನ್ನು ಇತಿಹಾಸ ಆವಾಗಾವಾಗ ಉಲ್ಲೇಖ ಮಾಡುತ್ತದೆ ಅಂತಾದರೆ ಅಲ್ಲೊಂದು ಉತ್ಕಟತೆಯ ಭಾವ ಇದ್ದೆ ಇರತ್ತೆ ಈ ಸಿನೇಮಾದಲ್ಲೂ ಹಂಗೆ; ಹೆಸರಿಗೆ ತಕ್ಕಂಥಾ ಭಾವ, ತ್ಯಾಗ, ಕಾಯುವಿಕೆ, ನಿಶ್ಕಲ್ಮಶ ಪ್ರೀತಿ ವಗೇರೆ ಎಲ್ಲವೂ ಇದೆ.
ಲೈಲಾ ಹಾಗೂ ಕೈಸ್ ಬಟ್ ರ ಬದುಕಿನ ಬಗೆಗಿನ ಹೋರಾಟ, ಪ್ರತಿ ಘಳಿಗೆಯ ಒದ್ದಾಟ, ಒಬ್ಬರ ಬಗೆಗಿನ ಇನ್ನೊಬ್ಬರ ಪ್ರೀತಿ ಎಲ್ಲವೂ ಸಿನೇಮಾದಲ್ಲಿ ಎ ದ್ದು ಕಾಣ್ಸತ್ತೆ.
ಈ ಪರಿಶುದ್ಧವಾದ ಪ್ರೀತಿ ಅಂತ ಯಾವುದನ್ನ ಕರೆಯುತ್ತಾರೆ ಅದನ್ನ ಮೈಲಿಗೆ ಮಾಡಿಸಿಕೊಟ್ಟಿಲ್ಲ ಸಿನೇಮಾದಲ್ಲಿ. ಹೀಗಾಗಿ ಸಿನೇಮಾ ಇಷ್ಟವಾಗುತ್ತದೆ. ಚಿತ್ರದ ಎರಡನೆ ಭಾಗವನ್ನ ಯೋಚಿಸಿ ನೋಡಿದರೆ ದುಃಖ ಹಂಗಂಗೆ ಉಕ್ಕಿ ಬರತ್ತೆ… If you feel it!
ಇನ್ನುಳಿದಂತೆ ಕಾಶ್ಮೀರವನ್ನು ಯಾವೂದೇ ಅಜೆಂಡಾ ಅಥವಾ ರಾಜಕೀಯ ನಿರೂಪಣೆಗಳಿಲ್ಲದೆ ಒಂದು ಸಿನೇಮಾದಲ್ಲಿ ನೋಡುವುದೇ ಚಂದ. ಅದರಲ್ಲೂ ಹಾಡುಗಳು, ಹಿನ್ನಲೆ ಸಂಗೀತಾ ಎಲ್ಲವೂ ಸೂಪರ್.
ಇಮ್ತಿಯಾಜ್ ಏನು ಹೇಳೊದಕ್ಕೆ ಹೊರಟಿದ್ದಾರೆ ಅವರ ಧಾಟಿಯಲ್ಲಿ ಅದು ೧೦೦% ಪೂರಕವಾಗಿದೆ ಅಂತ ಅನಸ್ತು..


