Khauf

ಖೌಫ್ ಒಂದು ಹೊಸ ಥರದ ಹಾರರ್‌ ಹಾಗೂ ಥ್ರಿಲ್ಲಿಂಗ್‌ ಸೀರೀಸ್, ಶುರು ಮಾಡಿದ ಮೇಲೆ ಮುಗಿಸೋ ತನಕ ಅದೇ ಬಗೆಯ ಗ್ರಿಪ್ಪಿಂಗ್‌ ಕಥೆಯನ್ನ ಹಿಡಿದುಕೊಂಡು ಬಂದಿದೆ. ಕಥೆಯು ಯಾವ ಯಾವ ರೀತಿಯಿಂದ ತಿರುಗಿಕೊಳ್ಳತ್ತೆ ಅನ್ನೊದರ ಬಗ್ಗೆ ಕೊನೆಯ ಎಪಿಸೋಡ್‌ ವರೆಗೂ ಗೊತ್ತೆ ಆಗಲ್ಲ ಆ ಥರ ಕಥೆಯನ್ನ ಹೆಣೆದಿದ್ದಾರೆ. – ಇಷ್ಟ ಆಯ್ತು

ಸುಮ್ನೆ ಜನಗಳಿಗೆ ಹೆದರಿಸೋದಕ್ಕೆ ಸಿನೇಮಾ ಮಾಡಿಲ್ಲ. ಅದರ ಬದಲಾಗಿ ನಮ್‌ ನಮ್‌ ಊರುಗಳಲ್ಲಿ ಎಲ್ಲೊ ಕೇಳಿರಬಹುದಾದ ಅಥವಾ ಊಹಿಸಿಕೊಳ್ಳಬಹುದಾದಂಥಹ ಸಿನೇಮಾ.

ಮೋನಿಕಾ ಪನ್ವಾರ್ ಮಧು ಆಗಿ ಸಕ್ಕತ್ತಾಗಿ ನಟನೆ ಮಾಡಿದ್ದಾರೆ. ಮಹಿಳೆಯರ ಹಾಸ್ಟೆಲ್​ನಲ್ಲಿ ನಡೀತಿರೋ ಭಯಾನಕ ಸಂಗತಿಗಳನ್ನ ಕಣ್ಣಿಗೆ ಕಟ್ಟೋ ಹಾಗೆ ತೋರಿಸಿದ್ದಾರೆ. ಈ ಸೀರಿಜ಼್ ನಲ್ಲಿ ಮಹಿಳೆಯರು ಈ ಹೊಸ ಝಮಾನಾದಲ್ಲಿ ಹೇಗೆ ಬದುಕಬೇಕು, ಪುರುಷಪ್ರಧಾನ ಪದ್ಧತಿ ಹೆಂಗಿರುತ್ತೆ ಅನ್ನೋದನ್ನ ಭಯಾನಕ ಕಥೆಯ ಜೊತೆ ಮಿಕ್ಸ್ ಮಾಡಿ ಹೇಳಿದ್ದಾರೆ. ರಜತ್ ಕಪೂರ್ ರ ನಟನೆ ಎಂದಿನಂತೆ ಪ್ರಾಮಿಸಿಂಗ್‌ ಆಗಿ ಮೂಡಿ ಬಂದಿದೆ.

ಖೌಫ್ ಯಾಕೆ ಇಷ್ಟವಾಗತ್ತೆ ಅಂದ್ರೆ, ಇದು ಒಂದು ಭಯಾನಕ ಕಥೆನ ಸಾಮಾಜಿಕ ಸಮಸ್ಯೆಗಳ ಜೊತೆ ಬೆರೆಸತ್ತೆ. ಮಹಿಳೆಯರು ಅನುಭವಿಸೋ ಕಷ್ಟಗಳು, ಮಾಟ ಮಂತ್ರ, ಮತ್ತೆ ಪ್ರತಿದಿನ ಹೆಂಗಸರು ಹೆದರಿಕೊಂಡು ಬದುಕೋ ವಿಷಯಗಳನ್ನ ಚರ್ಚಿಸಲಾಗಿದೆ. ಕಥೆ ನಿಧಾನವಾಗಿ ಸಾಗಿದ್ರೂ, ನೋಡೋಕೆ ಚಂದಾಗಿದೆ. ನೆಟ್ಟಿಗರು ಕಥೆ ಸ್ವಲ್ಪ ಎಳೆಯೋ ತರ ಇದೆ ಅಂದಿದಾರೆ. ಆದ್ರೂ, ಟೈಮ್‌ ಸಿಕ್ರೆ ಒಮ್ಮೆ ನೋಡಬಹುದಾದತಂಹ ಸಿರೀಜು಼.

#khaufonprime

Leave a Comment

Your email address will not be published. Required fields are marked *

Scroll to Top