Jurassic World – Rebirth

ಸುಮಾರು ಎರಡು ದಶಕಗಳಿಂದ ಒಂದೇ ಥೀಮ್ ಇಟ್ಟುಕೊಂಡು ಸಿನಿಮಾ ಮಾಡುವುದು ಕಷ್ಟ. ಯಾಕೆಂದರೆ, ಅದೇ ಸಾಗರದಾಚೆಗಿನ ಅರಣ್ಯ, ಅದೇ ಡೈನೋಸಾರ್‌ಗಳು, ಅಲ್ಲಿಂದ ಸರ್ವೈವ್ ಆಗಿ ಬರುವುದು… ಇವೆಲ್ಲವನ್ನೂ ನೋಡಿ ಪ್ರೇಕ್ಷಕರು ಸಿನಿಮಾವನ್ನು ಊಹಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಈಗಿನ ಮಕ್ಕಳಿಗೆ ಕುತೂಹಲವೂ ಅಷ್ಟಕ್ಕಷ್ಟೇ. ಇನ್ನು, ನಮ್ಮಂಥವರು ಮೊದಲಿನಿಂದಲೂ ಕಲ್ಟ್ ಥರ ಫಾಲೋ ಮಾಡಿಕೊಂಡು ಬಂದಂಥ ಅಚ್ಚುಮೆಚ್ಚಿನ ಕಥಾವಸ್ತು ಎಂದು ಸಿನಿಮಾ ನೋಡುತ್ತೇವೆ.

ಇರಲಿ… ಮತ್ತೊಮ್ಮೆ ಜುರಾಸಿಕ್ ಲೋಕಕ್ಕೆ ಕರೆದೊಯ್ಯುವ ಸಿನಿಮಾ ತೆರೆಕಂಡಿದೆ. ಈ ಬಾರಿಯ ವಿಶೇಷತೆ ಎಂದರೆ, ವಿಜ್ಞಾನಿಗಳ ಡೈನೋಸಾರ್‌ಗಳ ಮೇಲಿನ ಪ್ರಯೋಗಗಳ ವೈಫಲ್ಯದ ನಂತರ ಜನಿಸಿದ/ಮ್ಯೂಟಂಟ್ ಆಗಿ ಪರಿವರ್ತನೆಗೊಂಡ ಹೊಸ ಬಗೆಯ ಡೈನೋಸಾರ್‌ಗಳನ್ನು ತೆರೆಯ ಮೇಲೆ ನೋಡುವುದು (ಡೈನೋಸಾರ್‌ಗಿಂತ ನನಗೆ ಏಲಿಯನ್ಸ್ ಥರ ಭಾಸವಾದವು ಈ ಹೊಸ ಬಗೆಯ ಡೈನೋಸಾರ್‌ಗಳು 😃) ಹಾಗೂ ಸ್ಕಾರ್ಲೆಟ್ ಜೋಹಾನ್ಸನ್ (ನತಾಷಾ (ಅವೆಂಜರ್ಸ್), ಬ್ಲಾಕ್ ವಿಡೋ) ಅವರನ್ನು ಜುರಾಸಿಕ್ ಲೋಕದಲ್ಲಿ ನೋಡುವುದು.

ಕಥೆ ಹೇಗಿದೆಯೋ ಅತ್ಲಾಗಿರ್ಲಿ, ಆದರೆ ಚಿತ್ರದ ಗ್ರಾಫಿಕ್ಸ್, ವಿಎಫ್‌ಎಕ್ಸ್, ಸೆಟ್‌ಗಳು, ಸೌಂಡ್‌, ಸಾಹಸ ಎಲ್ಲವೂ ಚೆನ್ನಾಗಿ ಮೂಡಿಬಂದಿವೆ. ಅಡ್ವೆಂಚರ್‌ಗಾಗಿ ಮಕ್ಕಳನ್ನು ಥಿಯೇಟರ್‌ಗೆ ಕರೆದುಕೊಂಡು ಹೋಗಿ ಬರಬಹುದು. ಎಲ್ಲೂ ಬೋರ್ ಆಗದಂತಹ ಚಿತ್ರವಿದು.

Leave a Comment

Your email address will not be published. Required fields are marked *

Scroll to Top