Jaat (2025)

ಪಕ್ಕಾ ಭೇಫಾಮ್‌ ಧಾಡಸಿ ಸೌಥ್‌ ಇಂಡಿಯನ್‌ ಚಲನ ಚಿತ್ರ..

ದೊಡ್ಡ ದೊಡ್ಡ ಬ್ಯಾನರ್ರು, ದೊಡ್ಡ ದೊಡ್ಡ ಹಿರೋಗಳನ್ನ ಸೈಡ್‌ ಹಾಕಿ ಪಕ್ಕಾ ಎಂಟೆರಟೇನ್ಮೆಂಟ್‌ ಸಿನೇಮಾ ಅಂತ ಕರೆಸಿಕೊಳ್ಳೊ ಎಲ್ಲಾ ಅಂಶಗಳು ಸಿನೇಮಾದಲ್ಲಿ ಇವೆ.

ಸನ್ನಿ ಡಿಯೋಲ್ ಅಭಿಮಾನಿಗಳಿಗೆ ಖಂಡಿತವಾಗಿ ಮೈನವಿರೇಳಿಸುವ ಸಿನೇಮಾ. ತಮ್ಮ 2.5 ಕಿಲೋ ಕೈಯಿಂದ ಮರಳಿ ಬಂದ ಸನ್ನಿ ಡಿಯೋಲ್ ತಮ್ಮ ಶಕ್ತಿಶಾಲಿ ಹಾಜರಾತಿಯಿಂದ ಮತ್ತೊಮ್ಮೆ 90ರ ದಶಕದ ಚಿತ್ರಗಳನ್ನು ನೆನಪಿಗೆ ತರೋದಂತು ಗ್ಯಾರೆಂಟಿ. ಅವರ ಅಭಿನಯದಲ್ಲಿನ ಶಿಸ್ತು, ಡೈಲಾಗ್ ಡೆಲಿವರಿ, ಅಲ್ಲಲ್ಲಿ ಬೇಕಾದ ‌ಪಾತ್ರದ ಗಂಭೀರತ, ಸ್ಟಂಟ್ಸ್ ಎಲ್ಲವೂ ಸೂಪರ್.

ಚಿತ್ರದ ಇನ್ನೊಂದು ಮುಖ್ಯವಾದ ಅಂಶವೆಂದರೆ ನೆಗೆಟಿವ್‌ ರೋಲ್‌ ಗಳು.. ಕಾಸ್ಟಿಂಗ್‌ ಸಕ್ಕತ್ತಾಗಿ ಮಾಡಿದ್ದಾರೆ.. ರಣದೀಪ್‌ ಹೂಡಾ ಅಂತೂ ಯಪ್ಪ!

ಚಿತ್ರದ ಕಥಾವಸ್ತು ಸೌಥ್‌ ಸಿನೇಮಾಗಳಲ್ಲಿ ಈ ಮುಂಚೆ ನೋಡಿದ ಹಾಗಿದೆ ನಾರ್ಮಲಿ ಬಾಲಿವುಡ್‌ ನವ್ರು ಈ ತರಹದ ಕಥೆಗಳನ್ನ ಬಳಸೋದು ಕಮ್ಮಿ. ಬಳಸಿದ್ರೂ ಅದೇನೊ ಸೌಥ್‌ ಸಿನೇಮಾ ಅಂತ ಅನ್ನಿಸಿಕೊಳ್ಳೊದಿಲ್ಲ. ಬಟ್ “ಜಾಟ್”‌ ಅಂತೂ ಪಕ್ಕಾ ಸೌಥ್‌ ಸಿನೇಮಾನೆ..

ಇಲ್ಲಿಯ ಜನರಿಗೆ ಬೇಕಾದ ಎಲ್ಲ ಬಗೆಯ ಪದಾರ್ಥಗಳೂ ಸಿನೇಮಾದಲ್ಲಿವೆ.

ಸನ್ನಿ ಸರ್ ಮತ್ತೆ ಫಾರ್ಮ್‌ಗೆ ಬಂದಿದ್ದಾರೆ ಅವರಿಗೋಸ್ಕರ ಒಮ್ಮೆ ಸಿನೇಮಾ ನೋಡಿದರೆ ತಪ್ಪಿಲ್ಲ.

#jaatmovie

Leave a Comment

Your email address will not be published. Required fields are marked *

Scroll to Top