Homebound )2025)
ಈ ವರ್ಷದ ಅತ್ಯಂತ ಡಿಸ್ಟರ್ಬಿಂಗ್ ಸಿನಿಮಾ…
‘ಮಸಾನ್’ (Massan) ಚಿತ್ರದ ನಿರ್ಮಾಪಕರಿಂದ – ಇಷ್ಟು ಸಾಕಿತ್ತು..So ಸಿನಿಮಾದ ಟ್ರೇಲರ್, ಹಿಂದಿನ ಕಥೆ ಏನನ್ನೂ ಊಹಿಸದೆ ಸಿನಿಮಾ ನೋಡುವುದಕ್ಕೆ. ಮತ್ತು 2026 ರಆಸ್ಕರ್ಗೆ ಸೇರ್ಪಡೆಯಾಗಿದೆ ಎಂದರೆ, ಇದು ಖಂಡಿತವಾಗಿಯೂ ಸೂಕ್ತವಾದ ಸಿನಿಮಾ.
ಏನು ಸಿನಿಮಾ ಗುರು! ಕೊನೆಯ ಅರ್ಧ ಗಂಟೆಯ ಸಿನಿಮಾ ನೀಡಿದ ಎಮೋಷನ್ ತೀರಾ ಭಾರವಾಗಿತ್ತು.
ಇದು ಸಿನಿಮಾ ಅಲ್ಲ, ಪಕ್ಕಾ ಎಮೋಷನ್ನು.
‘ಹೋಂಬೌಂಡ್’ ಮನರಂಜನೆಗಾಗಿ ಮಾಡಿದ ಸಿನಿಮಾ ಅಲ್ಲ. ನಮ್ಮ ಸಮಾಜದ ಕಠಿಣ ಸತ್ಯಗಳನ್ನು, ಸರ್ಕಾರದ ವೈಫಲ್ಯವನ್ನು ಹಾಗೂ ಸಾಮಾನ್ಯ ಜನರ ಬದುಕಿನ ಹೋರಾಟವನ್ನು ಯಥಾವತ್ತಾಗಿ ತೋರಿಸುವ ಡಾಕ್ಯುಮೆಂಟರಿ. ಚಿತ್ರ ಮುಗಿದ ಮೇಲೆ, ನಾವು ಬದುಕುತ್ತಿರುವ ಅಸ್ತಿತ್ವದ ಬಗ್ಗೆ ತಲೆಯಲ್ಲಿ ಒಂದಷ್ಟು ಪ್ರಾಮಾಣಿಕ ಪ್ರಶ್ನೆಗಳನ್ನು ಹುಟ್ಟುಹಾಕುವಂಥ ಕಥೆ.
ಚಿತ್ರದ ಇನ್ನೊಂದು ಮುಖ್ಯ ಅಂಶವೆಂದರೆ ನಟ-ನಟಿಯರ ಅಭಿನಯ. ಇಶಾನ್ ಕಟ್ಟರ್ ಮತ್ತು ವಿಶಾಲ್ – ಇಬ್ಬರ ಅಭಿನಯಕ್ಕೆ ಸೆಲ್ಯೂಟ್! ಎಷ್ಟು ಚೆನ್ನಾಗಿ ನಟಿಸಿದ್ದಾರೆ. ಜಾಹ್ನವಿ ಕಪೂರ್ ಅವರ ಪಾತ್ರವೂ ಅತ್ಯಂತ ಸಹಜವಾಗಿ ಮೂಡಿಬಂದಿದೆ.
‘ಹೋಂಬೌಂಡ್’ ಒಂದು ನೋಡಲೇಬೇಕಾದ ಚಿತ್ರ. ಇದು ಕೇವಲ ಸಿನಿಮಾ ಅಲ್ಲ, ಇದು ಒಂದು ಅನುಭವ.


