Hazaaron Khwaishein Aisi

ಮಿರ್ಜ಼ಾ ಗಾಲಿಬ್ ರ ಬಹು ಪ್ರಚಲಿತ ಗಝ಼ಲ್ Hazaaron khwahishen aisi ke har khwahish pe dam nikle.. ಈ ಶೀಶ್ರಿಕೆನ್ನು ಬೇನ್ನು ಹತ್ತಿ ಹೋದಾಗ ಕಂಡದ್ದು 2003 ರಲ್ಲಿ ತೆರೆಕಂಡ ಸಿನೇಮಾ “Hazaaron Khwaishein Aisi” ಹೇಳಿ ಕೇಳಿ ವಾರಾಂತ್ಯ ಏನಾದ್ರು ಕಂಟೆಂಟ್ ಇಲ್ದೆ ಇದ್ರೆ ಹೆಂಗೆ ಅಂತ ನೋಡಿದ್ದು..

ಈ ಆದರ್ಶ, ಸಿದ್ಧಾಂತ, ಎಡ, ಬಲ, ಇಜ಼ಮ್ಮು, ಇಷ್ಟು ಗಳನ್ನೆಲ್ಲ ಹಿಂದೆ ಬಿಟ್ಟ ಬಂದಂಥವನಿಗೆ ವಿಶಯಾಧಾರಿವ ವಸ್ತುನಿಷ್ಠತೆಗಿಂತ ಪಾತ್ರದ ಹಿಂದಿರುವ ಮನಸ್ಥಿತಿ ಬಗ್ಗೆ ಹೆಚ್ಚು ಒತ್ತು ಕೊಟ್ಟು ಸಿನೇಮಾ ನೋಡಿದಾಗ ಅನ್ಸಿದ್ದು The heart breaks quietly under the weight of unspoken wishes… ಎಲ್ಲಿಂದೆಲ್ಲಿಗಾದ್ರೂ ಹೋದ್ರೂ ಮನುಷ್ಯನ ಮೂಲವೃತ್ತಿ ಪ್ರೀತಿ ಅಷ್ಟೇ ಆ ಆ್ಯಂಗಲ್ಲಿನಿಂದ ಈ ಸಿನೇಮಾ ನೋಡಿದಾಗ ಹೊಸ ಬಗೆಯ ಸ್ವಾದ ಸಿಗಬಹುದು.

1970ರ ದಶಕದ ಭಾರತದ ತುರ್ತು ಪರಿಸ್ಥಿತಿ ಮತ್ತು ನಕ್ಸಲ್ ಚಳುವಳಿಯ ಹಿನ್ನೆಲೆಯಲ್ಲಿ ಈಡೀ ಸಿನೇಮಾದ ಕಥೆ ಮೂಡಿಬಂದಿದ್ದು. ಕೇವಲ ರಾಜಕೀಯ ಕಥೆಯನ್ನಷ್ಟೆ ಅಲ್ಲದೆ, ಮನುಷ್ಯನ ಸಹಜ ಆಸೆಗಳು ಮತ್ತು ಸಿದ್ಧಾಂತಗಳ ನಡುವಿನ ಸಂಘರ್ಷವನ್ನು ಚನ್ನಾಗಿ ಚಿತ್ರಿಸುತ್ತದೆ. ಸಿದ್ಧಾರ್ಥ್, ಗೀತಾ ಮತ್ತು ವಿಕ್ರಮ್ ಎಂಬ ಮೂರು ಪಾತ್ರಗಳ ಮೂಲಕ ಕ್ರಾಂತಿ, ಪ್ರೀತಿ ಮತ್ತು ಅಧಿಕಾರದ ಹಪಾಹಪಿಯನ್ನು ಸಿನಿಮಾ ವಿವರಿಸುತ್ತದೆ.

ಸಮಾಜವನ್ನು ಬದಲಿಸಬೇಕೆಂಬ ಆದರ್ಶವಾದಿ ಸಿದ್ಧಾರ್ಥ್, ಅವನಿಗಾಗಿ ಹಂಬಲಿಸುವ ಗೀತಾ ಮತ್ತು ಗೀತಾಳ ಪ್ರೀತಿಗಾಗಿ ವ್ಯವಸ್ಥೆಯ ಹೊಲಸು ದಾರಿಯನ್ನೇ ಹಿಡಿಯುವ ವಿಕ್ರಮ್‌.. ಈ ಮೂವರ ಪಯಣ ಅಂತಿಮವಾಗಿ ವಿಧಿಯ ಅಣಕದಂತೆ ಕೊನೆಗೊಳ್ಳುತ್ತದೆ. ಎಡಪಂಥೀಯ ಚಳುವಳಿಯ ವೈಫಲ್ಯ ಮತ್ತು ಬದಲಾವಣೆಗಾಗಿ ಹಂಬಲಿಸುವ ಹುಚ್ಚು ಮನಸ್ಸು ಅಂತಿಮವಾಗಿ ಹೇಗೆ ಕ್ರೂರ ವಾಸ್ತವದ ಮುಂದೆ ಮಂಡಿಯೂರುತ್ತದೆ ಎಂಬುದನ್ನು ಸಿನಿಮಾ ಬಹಳ ಮಾರ್ಮಿಕವಾಗಿ ತೋರಿಸುತ್ತದೆ.

‘ಬಾವರಾ ಮನ್ ದೇಖನೆ ಚಲಾ ಏಕ್ ಸಪ್ನಾ’ ಎಂಬ ಹಾಡು ಇಡೀ ಚಿತ್ರದ ಸಾರಾಂಶದಂತಿದ್ದು, ಸಮಾಜದ ಕ್ರೂರ ವ್ಯವಸ್ಥೆಯ ನಡುವೆಯೂ ಒಂದು ಸಣ್ಣ ಭರವಸೆ ಅಥವಾ ಪ್ರೀತಿಯ ಸ್ಪರ್ಶಕ್ಕಾಗಿ ತುಡಿಯುವ ಜೀವದ ಸಂಕಟವನ್ನು ಧ್ವನಿಸುತ್ತದೆ. ಇಂದಿನ ಕಾಲಘಟ್ಟದಲ್ಲೂ ಈ ಚಿತ್ರವು ಪ್ರಸ್ತುತವೆನಿಸುವುದು ಅದರ ಪ್ರಾಮಾಣಿಕ ಕಥೆಗಾರಿಕೆ ಮತ್ತು ಪ್ರತಿಯೊಬ್ಬರೂ ತಮ್ಮ ಬದುಕಿನ ಯಾವುದೋ ಒಂದು ಹಂತದಲ್ಲಿ ವ್ಯವಸ್ಥೆಗೆ ಬಲಿಯಾಗುವ ಅಸಹಾಯಕತೆಯನ್ನು ಬಿಂಬಿಸಿರುವ ಕಾರಣಕ್ಕಾಗಿ.

ನೋಡಬಹುದು…

Leave a Comment

Your email address will not be published. Required fields are marked *

Scroll to Top