A typical Director Shankar’s Movie..
ಒಂದಿಂಚೂ ಆ ಕಡೆ ಈ ಕಡೆ ಇಲ್ಲ…
ಕಳೆದ ಇಷ್ಟು ವರ್ಷಗಳಲ್ಲಿ ಮೇಲ್ನೊಟಕ್ಕೆ ಕಥೆಗಳು ಬೇರೆ ಬೇರೆ ಅಂತ ಅನ್ನಿಸಿದರೂ ಕಥೆ ಒಳಗಿನ ಅಂಶ ಅದೇ ಸಮಾಜ, ಭ್ರಷ್ಟಾಚಾರ, ರಾಜಕೀಯ ಇವೆಲ್ಲವುಗಳಿಗೆ ಮಸಾಲಾ ಎಂಬಂತೆ ಒಂದಷ್ಟು ರೊಮ್ಯಾನ್ಸು ಇವುಗಳ ಸುತ್ತ ಸುತ್ತುವ ಕಥೆಯ ಪ್ಯಾಟರ್ನು ಶಂಕರ್ ಅವ್ರದ್ದು ಅದನ್ನ ತಪ್ಪು ಚಾಚದೆ ಈ ಸಿನೇಮಾದಲ್ಲು ಮುಂದುವರೆಸಿದ್ದಾರೆ ಅನ್ನೊದು ಖೇದ್ ಕಿ ಬಾತ್.
ಗೇಮ್ ಚೇಂಜರ್ ಒಂದು ರಾಜಕೀಯ ಹಿನ್ನೆಲೆಯುಳ್ಳ ಭಾರಿ ಪ್ರಮಾಣದ ಕಮರ್ಷಿಯಲ್ ಸಿನೇಮಾ. ಪ್ರೇಕ್ಷಕರಿಗೆ ಮನಂರಂಜನೆ ಮಾತ್ರ ಕೊಡೊದಕ್ಕೆ ಸಾಧ್ಯ ಇದರಿಂದ ಸಮಾಜದಲ್ಲಿ ಏನಾದ್ರು ಬದಲಾವಣೆ ಆಗತ್ತೆ ಅಂತನ್ನೊದು ಸುಳ್ಳು. ಹಂಗೆ ಬದಲಾಗಬೇಕಿದ್ರೆ ಈ ಹಿಂದೆ ಬಂಧಂಥ ಅವರ ಸಾಲಾದ ಸಿನೇಮಾಗಳ ಸಾಕಾಗಿದ್ವು.
ಚಿತ್ರದಲ್ಲಿ ರಾಮ್ ಚರಣ್ ಅವರ ಪ್ರದರ್ಶನವೇ ಪ್ರಮುಖ ಆಕರ್ಷಣೆಯಾಗಿದ್ದು ತಮ್ಮ ಪಾತ್ರವನ್ನ ಚನ್ನಾಗಿ ನಿಭಾಯಿಸಿದ್ದಾರೆ.
ಈ ತೆಲಗು ಸಿನೇಮಾಗಳ ಟಿಪಿಕಲ್ ಸ್ಲೋ ಮೋಷನ್ ಫೈಟ್ ಸೀನ್ಗಳು ಅದಕ್ಕೊಂದಷ್ಟು ಭರ್ಜರಿ ಹಿನ್ನಲೆ ಸಂಗೀತ ಒಂದ್ ನಾಲ್ಕಾರು ಗಾಡಿ, ಟ್ರಕ್ಕು ಆಕಾಶಕ್ಕೆ ಏಗರೋದು ಇವೆಲ್ಲ as usual ಸಿನೇಮಾದಲ್ಲಿ ಇವೆ ಮತ್ತು ಕಥೆ ಕೂಡಾ ಈ ಮುಂಚೆ ಅದೆಷ್ಟೊ ಸಾರಿ ಕೇಳಿದ ಹಾಗೆ ಭಾಸವಾಯ್ತು.
Not up to the mark..
ಅದ್ರಲ್ಲೂ VFX ಗಳಂತು ಸಿಕ್ಕಾ ಪಟ್ಟೆ ಕೆಟ್ದಾಗಿ ತೋರಿಸಿದ್ದಾರೆ.
ಒಟ್ಟಾರೆಯಾಗಿ, ಗೇಮ್ ಚೇಂಜರ್ ರಾಮ್ ಚರಣ್ ನ ಸಾಮಾರ್ಥವನ್ನು ಮಿಸ್ ಯ್ಯೂಸ್ ಮಾಡಿದ ಸಿನೇಮಾ. ಕಿಯಾರಾ ಅದ್ವಾನಿ ಊಟದಲ್ಲಿ ಉಪ್ಪಿನಕಾಯಿ ಥರಾ ಅಷ್ಟಕ್ಕಷ್ಟೇ.
Not Recommended in theaters ಓಟಿಟಿ ಗೆ ಬಂತು ಅಂದ್ರೆ ನೋಡಬಹುದು.


