ಒಂದು ಹತ್ತು ಹನ್ನೆರಡು ವರುಷಗಳ ಹಿಂದಿರಬಹುದು ಬೆಂಗಳೂರಿನ ಆಸಿಪಾಸಿನ ಒಂದು ಹೆಣ್ಣು ಮಕ್ಕಳ ಸಂಸ್ಕೃತ ರೆಸಿಡೆನ್ಸಿಯಲ್ ಶಾಲೆಗೆ ಹೋದಾಗ ಅಲ್ಲಿನ ಆಚರಣೆ, ಶಿಸ್ತು, ಭಾಷೆ, ಸಂಸ್ಕಾರಕ್ಕೆ ಮರುಳಾಗಿ ಬಿಟ್ಟಿದ್ದೆ. ಅಲ್ಲಿನ ಶಿಕ್ಷಕರ ಜೊತೆ ಮಾತಾಡ್ತಾ ಕುಳಿತಾಗ ಅವರಂದ ಮಾತು ಇನ್ನೂ ತೆಲೆಯಲ್ಲಿ ಹಂಗೆ ಇದೆ.
ನೋಡಿ ಸರ್.. ಇಲ್ಲಿರಬೇಕಾದ್ರೆ ನಮ್ಮ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಯಾವೂದನ್ನೂ ಕಡಿಮೆ ಮಾಡೊಲ್ಲ. ಮಕ್ಕಳೂ ಸಹಿತ ಅದನ್ನ ಅಚ್ಚುಕಟ್ಟಾಗಿ ಪಾಲಿಸ್ತಾರೆ ಆದರೆ ಇಲ್ಲಿಂದಾಚೆಗೆ ಹೊರಗೆ ಬಿದ್ರೆ ಪ್ರಾಪಂಚಿಕದ ರುಚಿ ಯಾವ ಪರಿ ಇವರುಗಳಿಗೆ ಹತ್ತತ್ತೆ ಅಂದ್ರೆ ಅದಾಗಲೇ ನಾಲ್ಕೈದು ಮಕ್ಕಳು ʼಲವ್ ಜಿಹಾದʼ ಗೆ ಬಲಿಯಾಗಿದ್ದಾರೆ ಅಂತ..
ಒಂದು ಕ್ಷಣ ಯೋಚನೆ ಮಾಡಲು ಪ್ರೇರೆಪಿಸಿದ ಮಾತು…
ಹೌದಲ್ವ..
ಅತೀಯಾದ ಸಾಂಪ್ರದಾಯಿಕ ಕಟ್ಟುಪಾಡುಗಳಲ್ಲಿ ಇರುವ ಜೀವ ಪ್ರಾಪಂಚಿಕ ಸ್ವಾತಂತ್ರ್ಯಕ್ಕೆ ಬಲಿಯಾಗೋದು ಸಹಜ.
ನಿನ್ನೆ ನೋಡಿದ ಫರಾನಾ ಸಿನೇಮಾದಲ್ಲೂ ಅದೇ ಕಥೆ..
ಧರ್ಮ, ಸಮಾಜ, ಸಂಸ್ಕಾರಗಳ ಕಟ್ಟುಪಾಡುಗಳಲ್ಲಿ ಸಿಲುಕಿಕೊಂಡು ಸ್ವಾತಂತ್ರ್ಯ ಹುಡುಕುವ ಭರದಲ್ಲಿ ಅವಳಿಗಾದ ಅನುಭವ ಅಷ್ಟಿಷ್ಟಲ್ಲ.
ಯಾವುದನ್ನ ಎಷ್ಟು ಮಾಡುಬೇಕು..
ಎಷ್ಟು ಬಿಡಬೇಕು ಅನ್ನೊ ಎರಡು ಪ್ರಶ್ನೇಗಳಲ್ಲಿ ಅರ್ಥೈಸಿಕೊಂಡವನಿಗೆ ಗೆಲುವು ಹೆಚ್ಚು ಅನ್ನೊ ಮಾತಿನಿಂದ ಸಿನೇಮಾ ಮುಗ್ಸಿದ್ದು ಇಷ್ಟವಾಯ್ತು.
ಒಂದ್ ಸಾರಿ ನೋಡಬಹುದು…


