ದೊಡ್ಡ ಪರದೆಗೆಂದೆ ಚಿತ್ರಿಸಿಲಾದ ಸಿನೇಮಾ ದೇವರಾ. ಇಷ್ಟು ಗ್ರ್ಯಾಂಡ್ ಆಗಿ ತೋರಿಸೋ ಭರದಲ್ಲಿ ಕಥೆಯ ಕಡೆಗೆ ಗಮನ ಕೊಡಲಿಲ್ಲವೆನೊ ಅಂತ ಅನಸ್ತು. ಕಥೆ, ಕಥಾವಸ್ತುವಿನ ಕೊರತೆ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ‘ದೇವರ’ ಒಂಥರಾ ಮಲ್ಟಿವರ್ಸ್ ಕಥೆಯಾಗಿದ್ದು ಒಂದು ಕಥೆಯನ್ನ ಇನ್ನೊಂದಕ್ಕೆ ಲಿಂಕ್ ಮಾಡೊಕ್ಕೆ ಹೋಗಿ ಗೊಂದಲ ಸೃಷ್ಟಿಸಿದೆ.
ಪ್ರೇಕ್ಷಕರಿಗೆ ಸಿನೇಮಾ ಕುತೂಹಲ ಮೂಡುವ ಹಾಗಿರಬೇಕು ವಿನಃ ಕನ್ಫೂಸ್ ಮಾಡಬಾರದು.
ಸೈಫ್ ಅಲಿ ಖಾನ್ ನ ಅಭಿನಯ ಓಕೆ ಓಕೆ. ಸ್ತ್ರೀ ಪಾತ್ರಗಳು ಊಟಕ್ಕೆ ಉಪ್ಪಿನಕಾಯಿ ಥರ ಇದ್ದು ಸಾಂದರ್ಭಿಕ ಆಕರ್ಷಣೆಯನ್ನು ಹೊರತುಪಡಿಸಿ ಕಥೆಗೆ ಪೂರಕ ಅನಸ್ಲಿಲ್ಲ. ಜಾನ್ಹವಿ ಕಪೂರ್ ಳ ಪಾತ್ರವು ಕಥಾವಸ್ತುವಿಗೆ ಯಾವುದೇ ರೀತಿಯ ಅರ್ಥಪೂರ್ಣ ಕೊಡುಗೆಯನ್ನು ನೀಡಿಲ್ಲ ಹೀಗಾಗಿ ನಿರಾಶಾದಾಯಕ ಪ್ರಯತ್ನ.
ನೀವು ಎನ್.ಟಿ.ಆರ್ ರ ಅಭಿಮಾನಿಯಾಗಿದ್ದರೆ ಸಿನೇಮಾ ಇಷ್ಟ ಆಗದೆ ಇರೋದಿಲ್ಲ.. ಅವರೊಬ್ಬರೆ ಸಿನೇಮಾವನ್ನ ಕಾಪಾಡಿದ್ದು. ಅದರ ಜೊತೆಗೆ ಅನಿರುದ್ಧರ ಬಿ.ಜಿ.ಎಮ್ ಹಾಗೂ ಸಂಗೀತ. ಇಷ್ಟು ಬಿಟ್ಟಿ ಬೇರೆ ಏನೂ ಇಲ್ಲ.
ಕೊನೆಯಲ್ಲಿ ಬಾಹುಬಲಿ ಸಿನೇಮಾ ಥರ ಸಸ್ಪೆನ್ಸ್ ಇಟ್ಟು ಭಾಗ ಎರಡಕ್ಕೆ ಮುಂದಿನ ಕಥೆಯನ್ನ ಬಿಟ್ಟಿದ್ದಾರೆ…
One time movie..


