From the makers of Tumbbad..ಅಂತ ತಿಳಿದ ದಿನದಿಂದಲೂ ಒಂದು ಬಗೆಯ ಕ್ಯೂರಿಯಸ್ ಆಗಿದ್ದೆ and no doubt its fulfilled the curiosity.
ಹೊಸ ಬಗೆಯ ಕಥೆಯೊಂದಿಗೆ ನಟ ನಿರ್ಮಾಪಕ ಸೋಹಂ ಶಾ ತೆರೆಯ ಮೇಲೆ ಕಂಡಿದ್ದಾರೆ.
ಅತ್ಯಂತ ರೋಚಕ ಮತ್ತು ಕುತೂಹಲಕಾರಕ ಚಿತ್ರ, ಪ್ರೇಕ್ಷಕರನ್ನು ಪ್ರತಿ ಫ್ರೇಮ್ ನಲ್ಲೂ ಎಂಗೇಜ್ ಮಾಡಿಸುವಂಥ ಕಥೆ. ಸಿಕ್ಕಾ ಪಟ್ಟೆ ಚನ್ನಾಗಿರೊ ಹಿನ್ನಲೆ ಸಂಗೀತ, ತೀವ್ರ ಸಸ್ಪೆನ್ಸ್ ಆಧಾರಿತ ಸೀನ್ ಗಳು ಚಿತ್ರಕ್ಕೆ ಗಟ್ಟಿತನವನ್ನ ತಂದು ಕೊಟ್ಟಿದೆ ಅಂತ ಅನಸ್ತು.
ಯಾವುದೇ ಅಶ್ಲೀಲತೆ ಇಲ್ಲದೆ, ಸಂಪೂರ್ಣ ಕುತೂಹಲಭರಿತವಾದ ಅನುಭವ.
ಸೋಹಂ ಶಾ ಸಿಂಗಲ್ ಮ್ಯಾನ್ ಆರ್ಮಿ ಥರಾ ಕಾಣಿಸಿಕೊಂಡಿದ್ದು ಅವರ ಅದ್ಭುತ ಅಭಿನಯವೇ ಈ ಚಿತ್ರದ ಹೈಲೈಟ್. ಅವರ ನಟನೆ ಪ್ರೇಕ್ಷಕರನ್ನು ತಾವೇ ಕಥೆಯ ಭಾಗವೆನಿಸುವಂತೆ ಮಾಡುತ್ತದೆ. ಚಿತ್ರದಲ್ಲಿ ಕ್ಯಾಮೆರಾ ಕಾರ್ಯ, ಎಡಿಟಿಂಗು, ಮತ್ತು ಕಥೆಯ ಮೇಲಿರುವ ಪ್ರಜ್ಞಾಪೂರ್ವಕ ಪ್ರಯೋಗ ಚಿತ್ರವನ್ನು ವಿಭಿನ್ನವಾಗಿಸಿದೆ.
ಚಿತ್ರದ ಕೊನೆಯ 30 ನಿಮಿಷಗಳು ಸಕ್ಕಾತ್ತಾಗಿ ಬಂದದ್ದು ಈ ನೇಲ್ ಬೈಟಿಂಗ್ ಅಂತಾ ಕರೆಯುತ್ತಾರಲ್ಲ ಹಂಗಿದೆ. ಬದುಕಿನ ಪ್ರತಿ ಸೆಕೆಂಡು ಯಾವ ಥರಾ ಮುಖ್ಯವಾಗುತ್ತದೆ ಅನ್ನೊದನ್ನ ಹಂಗೆ ನೆನಪಿಸಿಕೊಟ್ಟಂಘಾಯ್ತು.
ಥ್ರಿಲ್ಲರ್ ಸಿನೇಮಾಗಳು ಇಷ್ಟವಾಗುವ ಕೆಟೆಗೆರಿಗೆ ನೀವು ಸೇರಿದ್ದರೆ.
ಕ್ರೇಜಿ ಸಿನಿಮಾವನ್ನು ತಪ್ಪದೇ ವೀಕ್ಷಿಸಿ!


