1993 ರಲ್ಲಿ ಹೊಸ ದೆಹಲಿಯಲ್ಲಿ ನಡೆದ ಈ ಚಲನಚಿತ್ರವು ವಿದೇಶಿ ಗೂಢಚಾರ ಎಂದು ಆರೋಪಿಸಲ್ಪಟ್ಟ ಕಿವುಡ-ಮೂಕ ಯುವಕನನ್ನು (ಇಶ್ವಾಕ್ ಸಿಂಗ್) ಎಂಬಾತನ ಮೇಲೆ ನಡೆಯುವ ಕಥೆ. ಈ ವಿಚಾರಣೆಯ ಸಮಯದಲ್ಲಿ ಭಾರತ ಸರ್ಕಾರಕ್ಕೆ ವ್ಯಾಖ್ಯಾನ ನೀಡಲು ಸಂಕೇತ ಭಾಷಾ ತಜ್ಞರನ್ನು (ಅಪರ್ಶಕ್ತಿ ಖುರಾನಾ) ಕರೆತರಲಾಗುತ್ತದೆ.
ಗೂಢಚಾರನ ಇಂಟ್ರಾಗೇಷನಿನ್ನ ಸಮಯದಲ್ಲಿ ನಿಗೂಢತೆಗಳು ತೆರೆದುಕೊಳ್ಳುತ್ತಿದ್ದಂತೆ, ರಾಷ್ಟ್ರದ ಗೌರವವನ್ನು ಹಾಳುಮಾಡುವ ಒಂದಷ್ಟು ಷಂಡ್ಯಂತ್ರಗಳು, ಅದರೊಂದಿಗಿನ ಅಪರಾಧ, ಬೇಹುಗಾರಿಕೆ, ದೊಡ್ಡವರ ಕೈವಾಡಗಡಗಳು ಹಾಗೂ ಇವೆಲ್ಲವನ್ನು ಹೊರತುಪಡಿಸಿದ ವಾಸ್ತವ ಸತ್ಯಗಳು ಸಿನೇಮಾವನ್ನ ಕೊನೆಯವರೆಗೂ ಹಿಡಿದಿಟ್ಟುಕೊಳ್ಳಲು ಸಹಾಯ ಮಾಡಿದ್ದಂತು ನಿಜ.
ಸಿನೇಮಾ ಪಕ್ಕಾ ಕಾಲ್ಪನಿಕವಾಗಿದ್ದು ಸತ್ಯ ಘಟನೆಗಳನ್ನಾಧರಿಸಿಲ್ಲ ಅನ್ನೊದು ಸಿನೇಮಾ ಮುಗಿದ ಮೇಲೆ ಗೂಗಲ್ ಮಾಡಿದಾಗ ಗೊತ್ತಾಯ್ತು.
ಬೇರೆ ಏನು ಕಂಟೆಂಟ್ ಇಲ್ದೆ ಇದ್ರೆ ಒಮ್ಮೆ ನೋಡಬಹುದು.


