Little Trouble Girls

Little Trouble Girls | Slovenia | 2025

Little Trouble Girls ಕೇವಲ ಒಂದು ಸಿನಿಮಾ ಮಾತ್ರವಲ್ಲ; ಇದು ಧರ್ಮ, ನೈತಿಕತೆ ಮತ್ತು ಅಧಿಕಾರ ವ್ಯವಸ್ಥೆಯೊಳಗೆ ಸಿಲುಕಿರುವ ಒಬ್ಬ ಬಾಲಕಿಯ ಆಂತರಿಕ ಯುದ್ಧದ ಚಿತ್ರಣವೂ ಹೌದು. 16ರ ಹರೆಯದ ಲೂಸಿಯಾಳ ಲೈಂಗಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಚಿತ್ರದಲ್ಲಿ ಅತ್ಯಂತ ಸೂಕ್ಷ್ಮತೆಯಿಂದ ಚಿತ್ರಿಸಲಾಗಿದೆ..

ಕಟ್ಟುನಿಟ್ಟಾದ ಕ್ಯಾಥೋಲಿಕ್ ವಾತಾವರಣವು ಅವಳ ಸಹಜ ಕುತೂಹಲಗಳನ್ನು ಹತ್ತಿಕ್ಕುವಾಗ, ಲೂಸಿಯಾ ತನ್ನೊಳಗಿನ ಪ್ರಶ್ನೆಗಳಿಗೆ ಉತ್ತರ ಹುಡುಕಲು ತನ್ನ ಸಂಗೀತ ಶಿಕ್ಷಕನ ಸಾಮೀಪ್ಯವನ್ನು ಅಶಿಸುತ್ತಾಳೆ. ಶಿಸ್ತಿನ ಹೆಸರಿನಲ್ಲಿ ನಡೆಯುವ ಆತನ “ಸೌಮ್ಯ” ವರ್ತನೆ ನಿಧಾನವಾಗಿ ಅಧಿಕಾರ ದುರ್ಬಳಕೆಯ ಭಯಾನಕ ಮುಖವನ್ನು ತೋರಿಸುತ್ತದೆ. ಚಿತ್ರ ಇಲ್ಲಿ ಯಾವುದೇ ತ್ವರಿತ ತೀರ್ಪು ನೀಡದೆ, ಪ್ರೇಕ್ಷಕರನ್ನೇ ಅಸೌಕರ್ಯದೊಳಗೆ ತಂದೊಡ್ಡುತ್ತದೆ.

ಲೂಸಿಯಾಳ ಮುಗ್ಧ ಅನ್ವೇಷಣೆ ಒಂದು ಕಡೆ ಅವಳ ಸ್ವಯಂ-ಗುರುತಿಸುವಿಕೆಗೆ ದಾರಿ ಮಾಡಿಕೊಡುತ್ತದಾದರೂ, ಮತ್ತೊಂದು ಕಡೆ ಸಮಾಜದ ದ್ವಂದ್ವ ಮಾನದಂಡಗಳನ್ನು ಪ್ರಶ್ನಿಸುತ್ತದೆ. ಮಿತವಾದ ಸಂಭಾಷಣೆ, ಚಂದದ ಫ್ರೇಮಿಂಗ್, ಚಿತ್ರದ ಸಂಗೀತ ಮತ್ತು ಮೌನದ ಸಂಭಾಷಣೆಯ ಬಳಕೆ ಚಿತ್ರದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ.

ಒಟ್ಟಿನಲ್ಲಿ, Little Trouble Girls ನಿಧಾನಗತಿಯಲ್ಲಿದ್ದರೂ ಮನ ತಟ್ಟುವ, ಧೈರ್ಯವಂತಿಕೆ ಹೊಂದಿದ ಸಿನಿಮಾ.

Leave a Comment

Your email address will not be published. Required fields are marked *

Scroll to Top