ವರ್ಷದ ಕೊನೆಯಲ್ಲಿ ಒಂದಷ್ಟು ಚಂದದ ಸಿನಿಮಾಗಳನ್ನು ನೀಡುವ ಮೂಲಕ ಬಾಲಿವುಡ್ ತನ್ನ ಘನತೆಯನ್ನು ಉಳಿಸಿಕೊಂಡಂತಿದೆ.
ಸೂಕ್ಷ್ಮ ಸಂವೇದನೆ ಇರುವವರಿಗೆ ಮಾತ್ರ ಈ ಸಿನಿಮಾ ಇಷ್ಟವಾಗಬಹುದು; ಇಲ್ಲದಿದ್ದರೆ ಕಷ್ಟ.
ಹೌದು, ‘ಗುಸ್ತಾಖ್ ಇಷ್ಕ್’ ಚಿತ್ರವನ್ನು ನಿಸ್ಸಂದೇಹವಾಗಿ ಉತ್ತಮ ಸಿನಿಮಾಗಳ ಸಾಲಿಗೆ ಸೇರಿಸಬಹುದು. ಇಡೀ ಸಿನಿಮಾ ಕಣ್ಣಮುಂದೆ ಕಟ್ಟಿಹಾಕುವ ಒಂದು ದೃಶ್ಯಕಾವ್ಯದಂತಿದೆ. ಇಂದಿನ ವೇಗದ ಜಮಾನಕ್ಕೆ ಇಂತಹ ಸಿನಿಮಾಗಳು ಹಿಡಿಸಲಿಕ್ಕಿಲ್ಲ. ಏಕೆಂದರೆ, ಇಲ್ಲಿರುವುದು ತೊಂಬತ್ತರ ದಶಕದ ‘ಶಾಯರಿ’ಯಂತಹ ನಿಧಾನಗತಿಯ ಪ್ರೀತಿಯ ಪರಿಕಲ್ಪನೆ.
ಕಥೆಯಲ್ಲಿರುವ ಪಾತ್ರಗಳಿಗೂ ಆಧುನಿಕತೆಯ ಯಾವುದೇ ಗದ್ದಲವಿಲ್ಲ. ಉರ್ದು ಸಾಹಿತ್ಯ ಮತ್ತು ಶಾಯರಿಗಳ ಮೂಲಕ ಕಥೆಯನ್ನ ಅತ್ಯಂತ ಸೂಕ್ಷ್ಮವಾಗಿ ಹೆಣೆಯಲಾಗಿದೆ.
ವಿಶಾಲ್ ಭಾರದ್ವಾಜ್ ಅವರ ಸಂಗೀತ ಮತ್ತು ಗುಲ್ಜಾರ್ ಅವರ ಸಾಹಿತ್ಯವು ಈ ಚಿತ್ರದ ಪ್ರೇಮಕಥೆಗೆ ಜೀವ ತುಂಬಿದ್ದು, ವಾತಾವರಣವನ್ನು ಮತ್ತಷ್ಟು ರೋಮ್ಯಾಂಟಿಕ್ ಆಗಿ ರೂಪಿಸಿವೆ.
ಪ್ರೀತಿಯನ್ನು ಅದರ ಅತ್ಯಂತ ಶುದ್ಧ, ಕಲಾತ್ಮಕ ಮತ್ತು ಕಾವ್ಯಾತ್ಮಕ ರೂಪದಲ್ಲಿ ಆರಾಧಿಸುವ ಈ ಚಿತ್ರವು, ಭಾವನೆಗಳನ್ನೇ ಉಸಿರಾಗಿಸಿಕೊಂಡಿರುವ ಒಂದು ಚಂದದ ಅನುಭವವಾಗಿದೆ.
ಚಿತ್ರದ ಅತ್ಯಂತ ಬಲವಾದ ಅಂಶವೆಂದರೆ ನಸೀರುದ್ದೀನ್ ಶಾ ಮತ್ತು ವಿಜಯ್ ವರ್ಮಾ ಅವರ ಅಭಿನಯ. ಹಿರಿಯ ಕವಿಯ ಪಾತ್ರದಲ್ಲಿ ನಸೀರುದ್ದೀನ್ ಶಾ ಅವರು ಗಂಭೀರ ಮತ್ತು ಪರಿಪಕ್ವ ಅಭಿನಯವನ್ನು ನೀಡಿದ್ದಾರೆ. ವಿಜಯ್ ವರ್ಮಾ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದು, ಭಾವನಾತ್ಮಕ ದೃಶ್ಯಗಳಲ್ಲಿ ಉತ್ತಮವಾಗಿ ನಟಿಸಿದ್ದಾರೆ. ಫಾತಿಮಾ ಸನಾ ಶೇಖ್ ಅವರ ಅಭಿನಯವು ಪಾತ್ರಕ್ಕೆ ತಕ್ಕಮಟ್ಟಿಗೆ ಹೊಂದಿಕೆಯಾಗಿದೆ.
ನೂಡಬಹುದು.


