ಪ್ರತಿ ಬಾರಿಯೂ ಕಾತುರದಿಂದ ನಿರೀಕ್ಷಿಸುವ ವೆಬ್ ಸರಣಿಗಳ ಪಟ್ಟಿಯಲ್ಲಿ “ದೆಹಲಿ ಕ್ರೈಂ” ಖಂಡಿತಾ ಸೇರುತ್ತದೆ. ತನ್ನ ಮೊದಲ ಎರಡು ಸೀಸನ್‌ಗಳಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದ ನಂತರ, ಈ ಮೂರನೇ ಸರಣಿಯ ಮೂಲಕ ಮತ್ತೊಂದು ಸೂಕ್ಷ್ಮ ಹಾಗೂ ಗಂಭೀರ ಸಾಮಾಜಿಕ ಪ್ರಾಬ್ಲೆಮ್ ಅನ್ನು ಪ್ರೇಕ್ಷಕರ ಮುಂದಿಡಲಾಗಿದೆ.
ಈ ಬಾರಿ ಸರಣಿಯು ಮಾನವ ಕಳ್ಳಸಾಗಣೆಯ ಗಹನವಾದ ಕಥಾವಸ್ತುವಿನ ಕಾರಣದಿಂದ ಮತ್ತು ಸ್ಟ್ರಾಂಗ್ ನಿರೂಪಣೆಯಿಂದ ಪ್ರೇಕ್ಷಕರನ್ನು ಕಟ್ಟಿಹಾಕುವ ಎಲ್ಲ ಸಾಮಗ್ರಿಯನ್ನು ಹೊಂದಿದೆ. ಎಂದಿನಂತೆ, ಡಿಸಿಪಿ ವರ್ತಿಕಾ ಚತುರ್ವೇದಿ (ಶೆಫಾಲಿ ಶಾ) ಮತ್ತು ಅವರ ಪ್ರಾಮಾಣಿಕ ತಂಡವು ಈ ಜಟಿಲ ಜಾಲವನ್ನು ಭೇದಿಸಲು ನಡೆಸುವ ಕಾರ್ಯಾಚರಣೆಯು ಅತ್ಯಂತ ರೋಚಕವಾಗಿ ಮೂಡಿಬಂದಿದೆ. ಕೆಲವೊಂದು ಕಡೆ ಸರಣಿ ನಿಧಾನವೆಂದು ಅನಿಸಿದರೂ, ಕಥೆಯ ಮೇಲಿನ ಹಿಡಿತವನ್ನು ಎಲ್ಲೂ ತಪ್ಪಿಸದೆ, ಪ್ರೇಕ್ಷಕರಿಗೆ ಬೇಸರವಾಗದಂತೆ ನೋಡಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ನಟನೆಯ ವಿಚಾರಕ್ಕೆ ಬಂದರೆ, ಶೆಫಾಲಿ ಶಾ ಎಂದಿನಂತೆ ಪ್ರಬುದ್ಧತೆ ಪಾತ್ರ ನಿರ್ವಹಿಸಿದ್ದಾರೆ. ಆದರೆ, ಈ ಸೀಸನ್‌ನ ಮುಖ್ಯ ಆಕರ್ಷಣೆ ಎಂದರೆ ನಕಾರಾತ್ಮಕ ಪಾತ್ರದಲ್ಲಿ ಮಿಂಚಿರುವ ಹೂಮಾ ಖುರೇಷಿ ಅವರ ಅಭಿನಯ. ತಮ್ಮ ಪಾತ್ರಕ್ಕೆ ಅಗತ್ಯವಾದ ಕ್ರೌರ್ಯ ಮತ್ತು ಸೂಕ್ಷ್ಮತೆಯನ್ನು ಅತ್ಯುತ್ತಮವಾಗಿ ನೀಡಿದ್ದು, ಈ ಪಾತ್ರಕ್ಕೆ ಒಂದು ಹೆಚ್ಚಿನ ರೆಟಿಂಗ್ ಕೊಡಬಹುದು.
ಒಟ್ಟಾರೆಯಾಗಿ, ‘ದೆಹಲಿ ಕ್ರೈಂ ಸೀಸನ್ 3’ ಮಾನವ ಕಳ್ಳಸಾಗಣೆಯಂತಹ ಅತ್ಯಂತ ಗಂಭೀರ ವಿಷಯವನ್ನು ಸಮಾಜದ ಕನ್ನಡಿಯಂತೆ ನಿರೂಪಿಸುವಲ್ಲಿ ಯಶಸ್ವಿಯಾಗಿದೆ.
ನೋಡಬಹುದು.


