ಬೇಡಾಗಿತ್ತು ಸಿನೇಮಾ ಮಾಡೋದು..
ಸಮಾಜದಲ್ಲಿ ಸುದ್ದಿಯಲ್ಲಿರಬೇಕು ಅಂತನ್ನೊ ವಿಚಾರಕ್ಕೆ ಮಾಡಿದ ಸಿನೇಮಾ ಥರಾ ಇದೆ. & more over ನೆಸೆಸ್ಸೆರಿ ಇರ್ಲಿಲ್ಲ – ಅದಕ್ಕೆ ತಕ್ಕಂತೆ ಹೇಳ್ ಹೆಸರಿಲ್ಲದೆ ಪ್ಲಾಪ್ ಸಹ ಆಘೋಯ್ತು.
ತಾಜ್ ಮಹಲ್ ಹಿಂದೂ ಕಟ್ಟಿದ್ದಾ ಮುಸ್ಲಿಂ ಕಟ್ಟಿದ್ದಾ ಅಂತನ್ನೊ ವಿವಧ ಓಪೆನಿಯನ್ ಗಳಾಚೆ ಅದೊಂದು ಪ್ರಾಕೃತಿಕ ಸೌಂದರ್ಯ ಅದನ್ನ ಕಟ್ಟಿದ್ಯಾರು ಅಂತ ಸಮಾಜಾನೇ ತೀರ್ಮಾನಿಸಲಿ ಅಂತನ್ನೊ Final Statement (ಚಿತ್ರದಲ್ಲಿ) ಇಷ್ಟವಾಯ್ತು. ಇದಕ್ಕೆ ಚಿತ್ರದ ಕೊನೆಯಲ್ಲಿ ಅನೇಕ ongoing case ಗಳ ರೆಫರನ್ಸು ಸಹ ಕೊಟ್ಟಿದ್ದಾರೆ.
ಇರ್ಲಿ.. ಕಥೆಯಲ್ಲಿ ಏನಾದ್ರೂ ಗ್ರಿಪ್ ಆದ್ರು ಬೇಕಲ್ವಾ..
ಇತಿಹಾಸ ಅಂತ ಟ್ಯಾಗ್ ಮಾಡಿದ್ರೆ ಈಗೀನ ಜನಕ್ಕೆ ಇಷ್ಟ ಆಗತ್ತೆ ಅನ್ನೊ ಮೈಂಡ್ ಸೆಟ್ಟಿನ ಝ಼ಮಾನಾ ಬದಲಾಗಿದೆ.
ಸಿನೇಮಾ ಮಾಡ್ರಿ ಸತ್ಯಾ ಸತ್ಯತೆಗಳು ಕಾಲದಲ್ಲಿ ಹೊರಗೆ ಬರ್ಲೆಬೇಕು
ಆದರೆ ಸಿನೇಮಾ ಮಾಧ್ಯಮದಿಂದ ಅದನ್ನ ತೋರಸ್ತಿದ್ದೀರಿ ಅಂದ್ರೆ ಅದಕ್ಕೆ ಒಂದಷ್ಟು ಮಾನದಂಡಗಳು ಇರ್ಬೇಕಲ್ವಾ..
ನಂಗಂತು ಇಷ್ಟ ಆಗ್ಲಿಲ್ಲ.


