ಹಾರರ್ ಕಾಮಿಡಿ ಇಂದ ಹಾರರ್ ನಾ ತಗ್ದು ಬರೀ ಕಾಮಿಡಿ ಸಿನೇಮಾ ಅಂತ ನೋಡಿದ್ರೆ ಒಂದು ಸಾರಿ ನೋಡುವ ಕೆಟೆಗರಿಗೆ ಹಾಕಬಹುದಾದ ಕಂಟೆಂಟ್.
ಕೌಟುಂಬಿಕ ಮನರಂಜನಾಭರಿತ ಚಿತ್ರ. ಹೊಸ ಬಗೆಯ ಕಥೆಯನ್ನ ಬರೆಯೊದಕ್ಕೆ ಟ್ರೈ ಮಾಡಿದ್ದು ಇಷ್ಟವಾಯ್ತು. ಇನ್ನೂ ವರ್ಕ ಮಾಡಿದ್ರೆ ಚಂದಾ ಇರ್ತಿತ್ತು.
ಚಿಕ್ಕವರಿದ್ದಾಗ ಡಿಡಿಯಲ್ಲಿ ಬರ್ತಿದ್ದ ಅಲಿಫ್ ಲೈಲಾದ ಒಂದ್ಯಾವ್ದೊ ಎಪಿಸೋಡ್ ನೋಡಿದಹಾಗೆ ಅನಸ್ತು.
ಆಯುಷ್ಮಾನ್ ಖುರಾನಾ ಮತ್ತು ನವಾಜುದ್ದೀನ್ ಸಿದ್ದಿಕಿ ಅವರೊಂದಿಗೆ, ಪರೇಶ್ ರಾವಲ್ ಅವರ ಪಾತ್ರ ಮೆಚ್ಚುಗೆಗೆ ಹೇಗೆ ಪಾತ್ರವಾಗಿದೆಯೊ ಅದೆ ಥರಾ ರಶ್ಮಿಕಾ ಮಂದಣ್ಣಳ ನಟನೆ as usual ಅಷ್ಟಕ್ಕಷ್ಟೆ.
Maddock ನಿರ್ಮಾಣ ಸಂಸ್ಥೆಯು ‘ಸ್ತ್ರೀ’ ಮತ್ತು ‘ಭೇಡಿಯಾ’ ನಂತಹ ಯಶಸ್ವಿ ಚಿತ್ರಗಳಿರುವ MHCU (Maddock Horror Comedy Universe) ಗೆ ಈ ಚಿತ್ರವನ್ನು ಸೇರಿಸಿ, ಕ್ಯಾಮೆಓಗಳ ಮೂಲಕ ಭವಿಷ್ಯದ ಭಾಗಗಳಿಗೆ ಉತ್ತಮ ಅಡಿಪಾಯ ಹಾಕಿದೆ. ಒಟ್ಟಾರೆಯಾಗಿ, Maddock ನಿರ್ಮಾಣ ಸಂಸ್ಥೆ ಎಂದಿನಂತೆ ನಿರಾಶೆಗೊಳಿಸದೆ, ಯಶಸ್ವಿ ಹಾರರ್-ಕಾಮಿಡಿ ಸರಣಿಯನ್ನು ಮುಂದುವರೆಸಿದೆ.
ಚಿತ್ರದ ಇನ್ನೊಂದು ಅಂಶ ಅಂದ್ರೆ ಮೂರ್ ಮೂರ್ ಹಿರೋಯಿನ್ ಗಳ ಐಟಮ್ ಸಾಂಗು… ಸಿನೇಮಾದ ಅಷ್ಟು ಇಷ್ಟು ಯಶಸ್ಸಿಗೆ ಇದು ಕೂಡಾ ಕಾರಣ ಆಗಿರಬಹುದು.
ಒಟ್ಟಾರೆಯಾಗಿ ಒಂದು ಸಾರಿ ನೋಡಬಹುದಾದಂತಹ ಸಿನೇಮಾ.


