ತುಂಬಾ ದಿನ ಆದಮೇಲೆ ಸಿನಿಮಾ ನೋಡೋಕೆ ಅಂತ ಹೋದರೆ ಸಿಕ್ಕಿದ್ದು ಬರೀ ಆಕಳಿಕೆ (ಬೋರ್).
ತೊಂಬತ್ತರ ದಶಕದ ಸಿನಿಮಾಗಳಂತೆ, ಪ್ರೀತಿಗಾಗಿ ಇದನ್ನ ಮಾಡುತ್ತೇನೆ, ಅದನ್ನ ಮಾಡುತ್ತೇನೆ ಅಂತೆಲ್ಲ ಕೈಗೆ ಚಾಕು ಇರಿದುಕೊಳ್ಳುವುದು, ಇಲ್ಲವೇ ಪ್ರೇಯಸಿಯ ಪ್ರೀತಿ ಸಿಗದ ಕಾರಣ ಬಾರ್‌ನ ಖಾಯಂ ನಿವಾಸಿಯ ಮೆಂಬರ್‌ಶಿಪ್ ತೆಗೆದುಕೊಳ್ಳುವಂತಹ ಗಂಡುಗಳ ಬದುಕನ್ನು ಹೋಲುವ ಚಿತ್ರದ ಕಥೆ ಇದು.
ವಾರಕ್ಕೊಂದು ಬಗೆಯಂತೆ ಸಂಬಂಧಗಳಲ್ಲಿ ಹೊಸ ಹೊಸ ‘ಟರ್ಮಿನಾಲಜೀಸ್’ (Terminologies) ಗಳನ್ನು ಹುಡುಕುವ ಈಗಿನ ಜಮಾನಕ್ಕೆ ಈ ಪರಿಶುದ್ಧ ಪ್ರೀತಿ-ಗೀತಿ ಹೇಗೆ ಅರ್ಥ ಆಗಬೇಕು? ಈಗೇನಿದ್ದರೂ ಕುತೂಹಲ ಇಲ್ಲದ ಪ್ರೀತಿ, ಪಕ್ಕಾ ಸ್ವೇಚ್ಛೆಯ ಮೇಲೆ ಬದುಕು (ಸರಿ ಕೂಡ ಇರಬಹುದು…). ಮುಖ್ಯ ಏನು ಅಂದರೆ, ಕಥೆ ಬರೆಯುವವರಿಗೆ ಸಮಾಜದ ‘ರಿಕ್ವೈರ್‌ಮೆಂಟ್’ (requirement) ಮೇಲೂ ಕಣ್ ಹಾಯಿಸೋಕಾಗಲ್ವಾ? ಇನ್ನೂ ‘ಓವರ್ ರಿಯಾಕ್ಟೆಡ್’ (overreacted) ಆದ ಕಥೆಗಳನ್ನೇ ನಂಬಿಕೊಂಡು ಕೂತಿದ್ದಾರಲ್ಲ!
ಸಿಕ್ಕಾಪಟ್ಟೆ ಹೈಪ್ ಮಾಡಿದ್ರು, ಆದರೆ ಸಿನಿಮಾ ಸಾಧಾರಣವಾಗಿದೆ. ಸಿನಿಮಾದಲ್ಲಿ ಒಂದೇ ಚೆನ್ನಾಗಿರುವ ಅಂಶ ಎಂದರೆ ಸಂಗೀತ ಮತ್ತು ಹಾಡುಗಳು. ಒಟ್ಟಾರೆಯಾಗಿ, ನಿಮಗೆ ಬೇರೆ ಆಯ್ಕೆಗಳಿಲ್ಲದಿದ್ದರೆ, ಇದೊಂದು ಒಂದು ಬಾರಿ ನೋಡಬಹುದಾದ ಸಿನಿಮಾ.
#EkDeewaneKiDEEWAANIYAT


