ಮಿರಾಯ್ (2025)
ಪಕ್ಕಾ ಮಾಸ್ ಸಿನಿಮಾ. ಮಕ್ಕಳನ್ನು ಕರ್ಕೊಂಡು ಹೋದರೆ ಅವರು ಖಂಡಿತಾ ಎಂಜಾಯ್ ಮಾಡ್ತಾರೆ ಅಂತ ಆರಾಮವಾಗಿ ಹೇಳಬಹುದು.
ಸಿನಿಮಾ ಪೌರಾಣಿಕ ಮತ್ತು ಐತಿಹಾಸಿಕ ಅಂಶಗಳ ಜೊತೆಗೆ ಈಗಿನ ಕಾಲಕ್ಕೂ ಹೊಂದಿಕೊಳ್ಳುವಂತೆ ಕಥೆ ಮಾಡಲಾಗಿದೆ. ರಾಮಾಯಣ, ಜಟಾಯು, ಸಂಪಾತಿ, ಕಳಿಂಗ, ಅಶೋಕ ಹಾಗೂ ಧರ್ಮ-ಅಧರ್ಮದಂತಹ ಉಲ್ಲೇಖಗಳು ಚಿತ್ರದುದ್ದಕ್ಕೂ ಬರುವುದರಿಂದ ಪ್ರೇಕ್ಷಕರನ್ನು ಒಂದು ಹೊಸ ಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಸಂಶಯವಿಲ್ಲ.
‘ಹನುಮಾನ್’ ಚಿತ್ರದ ಯಶಸ್ಸಿನ ನಂತರ ನಾಯಕ ತೇಜ ಸಜ್ಜಾ ಈ ಚಿತ್ರದಲ್ಲಿ ಸೂಪರ್ ಅಭಿನಯಿಸಿದ್ದಾರೆ. ಚಿತ್ರದ ದೊಡ್ಡ ಆಕರ್ಷಣೆ ಅದರ ಅತ್ಯುತ್ತಮ ಗ್ರಾಫಿಕ್ಸ್ ಮತ್ತು ಸಂಗೀತ. ಇದು ಪ್ರೇಕ್ಷಕರನ್ನು ಒಂದು ಕಾಲ್ಪನಿಕ ಲೋಕಕ್ಕೆ ಕರೆದೊಯ್ಯುತ್ತದೆ. ಇವೆಲ್ಲದರ ಜೊತೆಗೆ ಕಥೆ ಹೆಣೆದಿರುವ ರೀತಿ ಕೂಡ ಚೆನ್ನಾಗಿದೆ.
ಒಟ್ಟಾರೆಯಾಗಿ, ‘ಮಿರಾಯ್’ ಸಿನಿಮಾ ಉತ್ತಮ ಕಥೆ, ಅದ್ಭುತ ದೃಶ್ಯಗಳು ಮತ್ತು ಪ್ರಭಾವಶಾಲಿ ನಟನೆಯಿಂದ ಕೂಡಿದ್ದು, ವೀಕ್ಷಕರಿಗೆ ಒಂದು ರೋಮಾಂಚಕಾರಿ ಅನುಭವವನ್ನು ನೀಡುತ್ತದೆ.


