Bengal Files

ಚಿತ್ರವನ್ನು ನೋಡಲು ಧೈರ್ಯ ಬೇಕೆ ಬೇಕು ಗುರು. ಬರಿ ಮೂರು ಗಂಟೆಗಳ ಸಿನಿಮಾ ಎಂದು ಹೋದರೆ ಅಷ್ಟು ಸೂಕ್ತ ಅನ್ನಿಸೋದಿಲ್ಲ. ಇತಿಹಾಸದಲ್ಲಿ ನಿಜವಾಗಿಯೇ ನಡೆದ ಘಟನೆಗಳು ಪರದೆ ಮೇಲೆ ಬರುವಾಗ ಅಚ್ಚರಿ, ಗಾಬರಿ ಮತ್ತು ನೋವು ಸಹಜವಾಗಿ ಆಗತ್ತೆ, ಅದನ್ನ ಜೀರ್ಣಿಸಿಕೊಳ್ಳೊ ಶಕ್ತಿ ಇದ್ರೆ ಮಾತ್ರ ಸಿನೇಮಾ ನೋಡಿ. ಇಲ್ಲ ಅಂದ್ರೆ ಬೇಡ…

ಸ್ವಾತಂತ್ರ್ಯದ ಹೋರಾಟದ ಕಾಲಘಟ್ಟದಲ್ಲಿ ನಡೆದ ಘಟನೆಗಳಿಗೆ ದೇಶ ಕಟ್ಟಬೇಕಾದ ಬೆಲೆ ಎಷ್ಟಿತ್ತು ಎಂಬ ಪ್ರಶ್ನೆ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿಸುವಂಥಾ ಕಥೆ. ‘ದಿ ಕಾಶ್ಮೀರ್ ಫೈಲ್ಸ್’ ನಂತೆ, ಈ ಚಿತ್ರವೂ ಇತಿಹಾಸದಲ್ಲಿ ಮರೆಮಾಚಿದ ಅಧ್ಯಾಯಗಳನ್ನು ತೆರೆದಿಡುತ್ತದೆ. ಎಲ್ಲರಿಗೂ ದೇಶ ವಿಭಜನೆಯ ಕಾಲಘಟ್ಟದಲ್ಲಿ ಏನು ನಡೆದಿತ್ತು ಅಂತ ಗೊತ್ತಿದ್ರೂ ಅದನ್ನ ಆಳವಾಗಿ ಚರ್ಚೆಯ ವಿಷಯ ಅಂತ ನಾವು ಯಾವತ್ತೂ ನೋಡಲಿಲ್ಲ.

ಅಂಥಾ ಇಂಟೆನ್ಸ್ ಕಥೆಯನ್ನ ಈ ಸಿನೇಮಾದಲ್ಲಿ ಕಾಣಬಹುದು.

ಇತಿಹಾಸದ ಪುಟಗಳನ್ನು ತಿರುಗಿಸಿದಾಗ, ನಮ್ಮ ನಾಯಕರ ತಪ್ಪುಗಳು ಬಹಿರಂಗವಾಗುತ್ತವೆ. ಅದನ್ನು ಇಂದಿನ ಸನ್ನಿವೇಶಗಳೊಂದಿಗೆ ಹೋಲಿಸುವಾಗ ಸಿನೇಮಾ ಕಹಿಯಾದರೂ ನಡೆದದ್ದು ಏನು ಎಂಬುದರ ಬಗ್ಗೆ ಕಲ್ಪನೆ ಬರುತ್ತದೆ. ಅಷ್ಟಕ್ಕಾಗಿಯೇ ಒಂದಷ್ಟು ಜನ ಸಿನೇಮಾವನ್ನ ನೋಡದೆ ಸುಖಾ ಸುಮ್ನೆ ವಿರೋಧಿಸುತ್ತಿದ್ದಾರೆ ಅಂತ ಗೊತ್ತಾಗತ್ತೆ.

ಚಿತ್ರದ ರಿಸರ್ಚು, ಫ್ಯಾಕ್ಟ್ ಚೆಕ್ಕು ಮತ್ತು ಕಾಸ್ಟಿಂಗು ಎಲ್ಲವೂ ಪರ್ಫೆಕ್ಟ್ . ನಾಯಕ ದರ್ಶನ್ ಕುಮಾರ್ ತಮ್ಮ ಪಾತ್ರವನ್ನು ಅತ್ಯಂತ ಚಂದದ ರೀತಿಯಲ್ಲಿ ನಿರ್ವಹಿಸಿದ್ದಾರೆ. ಇಂಥ ಗಂಭೀರ ವಿಷಯಗಳ ಸಿನಿಮಾಗಳನ್ನು ಆಯ್ಕೆಮಾಡುವಲ್ಲಿ ನಟ ದರ್ಶನ ಸದಾ ಮುಂಚೂಣಿಯಲ್ಲಿರುತ್ತಾರೆ.

ಚಿತ್ರದಲ್ಲಿ ಅನೇಕ ದೃಶ್ಯಗಳು ಮನಸ್ಸಿಗೆ ತೀವ್ರವಾಗಿ ಹತ್ತತ್ವೆ.. ಇವು ಕೇವಲ ಪರದೆ ಮೇಲಿನ ಕಲ್ಪನೆ ಮಾತ್ರವಲ್ಲ, ಇತಿಹಾಸದಲ್ಲಿ ಇದಕ್ಕಿಂತ ನೂರರಷ್ಟು ಹೆಚ್ಚು ಕ್ರೂರವಾಗಿ ನಡೆದು ಹೋಗಿದೆ. ಅದರ ಆಯ್ದ ಒಂದಷ್ಟನ್ನ ಕಥೆಯಲ್ಲಿ ತೋರಿಸಿದ್ದಾರಂತೆ..

ಒಟ್ನಲ್ಲಿ, ಬೆಂಗಾಲ್ ಫೈಲ್ಸ್ ಸಿಕ್ಕಾಪಟ್ಟೆ ನೋವು ಉಂಟುಮಾಡುವ ಆದರೆ ನೋಡಲೇಬೇಕಾದ ಸಿನೇಮಾ.

Leave a Comment

Your email address will not be published. Required fields are marked *

Scroll to Top