ವಾವ್! ಕೇವಲ ನಾನಿಯ ಸ್ವಾಗ್‌ಗೋಸ್ಕರ ಒಂದ್ ಸಲ ನೋಡ್ಬೇಕು. ನ್ಯಾಚುರಲ್ ಸ್ಟಾರ್ ನಾನಿ ಅಂತ ಪ್ರೀ ಕ್ರೆಡಿಟ್ಸ್‌ನ ಟೈಟಲ್ ಅಲ್ಲಿ ಬಂದಾಗ ಸೌಮ್ಯ, ಸೂಕ್ಷ್ಮವಾಗಿ ನಾನಿ ಇರ್ತಾರೆ ಅಂತ ಅಂದ್ಕೊಂಡ್ರೆ.. ಯಪ್ಪ! ಈ ಸಿನೇಮಾನಲ್ಲಿ ಬೇರೆನೇ ಭಾವ ಭಂಗಿಯಲ್ಲಿ ನಾನಿ ಕಾಣಿಸಿಕೊಂಡಿದ್ದಾರೆ.
ಕಿಲ್, ಮಾರ್ಕೊ ಸರಣಿಗೆ ಸೇರಿಸಬಹುದಾದ ಸಿನೇಮಾ ಇದು.
ಸಿನೇಮಾವನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವ ಎಲ್ಲ ಬಗೆಯ ಪದಾರ್ಥಗಳು ಸಿನೇಮಾದಲ್ಲಿ ಕಂಡುಬಂದಿವೆ.
ಹೇಗೆ ಸರಣಿ ಕೊಲೆಗಳ ಹಿಂದೆ ಅಡಗಿರುವ ಮಾಫಿಯಾ ಕೆಲಸ ಮಾಡುತ್ತದೆ, ಅದರ ಹಿಂದಿರುವ ಕೈಗಳು ಯಾರು ಅಂತ ನಾನಿ ಎಳೆ ಎಳೆಯಾಗಿ ಬಿಡಿಸಿಕೊಂಡು ಹೋಗುವುದನ್ನು ಕಥೆಯಲ್ಲಿ ಸಕ್ಕತ್ತಾಗಿ ಪೋಣಿಸಿದ್ದಾರೆ.
ಇನ್ನು ಹಿನ್ನೆಲೆ ಸಂಗೀತ, ಫೈಟ್ಸ್, ಲೈಟ್ಸ್, ಮೇಕಪ್‌ಗಳ ಬಗ್ಗೆ ಮಾತಾಡೋದೇ ಬೇಡ. ಎಲ್ಲವೂ ಅದ್ಭುತ. ನಮ್ಮ ಶ್ರೀನಿಧಿ ಶೆಟ್ಟಿ ಕ್ಯೂಟ್ ಕ್ಯೂಟ್ ಆಗಿ ಸಿನೇಮಾದಲ್ಲಿನ ಗ್ಲಾಮರ್ ಅನ್ನು ತುಂಬಿದ್ದಾರೆ.
ಮಾಸ್ ಸಿನೇಮಾಗಳ ಫ್ಯಾನ್ ಆಗಿದ್ದರೆ ಒಮ್ಮೆ ನೋಡಿ.


