Raid 2 (2025)
ಚಿತ್ರದ ಟ್ರೆಲರ್ ನೋಡಿದಾಗಿನಿಂದ ಸಿನೇಮಾ ತೆರೆಕಾಣುವವರೆಗೂ ನಿರೀಕ್ಷೆ ಇಟ್ಟುಕೊಂಡಿದ್ದ ಒಂದಷ್ಟು ಸಿನೇಮಾಗಳಲ್ಲಿ ರೇಡ್ 2 ಕೂಡ ಒಂದು
ಆದರೆ…
ನಿಜ ಹೇಳಬೇಕೆಂದರೆ, Disappoit ಮಾಡಿಬಿಡ್ತು.. ಎರಡನೇ ಭಾಗಕ್ಕಿಂತ ಮೊದಲ ಭಾಗವೇ ಚನ್ನಾಗಿತ್ತು. ಚಿತ್ರದ ಟ್ರೇಲರ್ ಜನರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಮಾಡಿದ ಹೈ ಡ್ರಾಮಾ ಅಂತ ಅನಸ್ತು.
ಒಂದೊಳ್ಳೆ ತಾರಾಗಣ, ಯೋಗ್ಯವಾದ ಕಥಾವಸ್ತು ಮತ್ತು ಹಿನ್ನೆಲೆ ಸಂಗೀತ ನಿಮ್ಮನ್ನು ಅಲ್ಲಲ್ಲಿ ಹಿಡಿದಿಟ್ಟುಕೊಳ್ಳುತ್ತದೆ, ಆದರೆ ದ್ವಿತೀಯಾರ್ಧವು ನಿಜವಾಗಿಯೂ ಸಿಕ್ಕಾಪಟ್ಟೆ ಸ್ಲೋ ಗುರು.
ಚಿತ್ರದಲ್ಲಿ ಬರುವ ಥ್ರಿಲ್ಲಿಂಗ್ ಪಾರ್ಟ್ ಗಳನ್ನ ಮೊದಲೆ ಊಹಿಸಬಹುದಾದಂತಿವೆ. ಅಜಯ್ ದೇವಗನ್ ಎಂದಿನಂತೆ ಗಂಭೀರವಾದ ಪೊಲೀಸ್/ಅಧಿಕಾರಿ ಪಾತ್ರವನ್ನು ಚನ್ನಾಗಿ ನಿರ್ವಹಿಸಿದ್ದಾರೆ ಅದನ್ನ ಈ ಮುಂಚೆ ಅನೇಕ ಚಿತ್ರಗಳಲ್ಲಿ ಕಂಡಿದ್ದೇವೆ. ಬಹಳ ಸಮಯದ ನಂತರ ರಿತೇಶ್ ದೇಶಮುಖ್ ಅವರನ್ನು ದೊಡ್ಡ ಪರದೆಯ ಮೇಲೆ ನೋಡುವುದು ಅದ್ಭುತವಾಗಿದೆ ಮತ್ತು ತಮನ್ನಾ ಭಾಟಿಯಾಳ ಐಟಂ ಹಾಡು ಎಂದಿನಂತೆ ಪ್ರೇಕ್ಷರಲ್ಲಿ ಹುರುಪು ತರಿಸುತ್ತದೆ. ವಾಣಿ ಕಪೂರ್ ಪಾತ್ರ ಓಕೆ ಓಕೆ.
ಇದು ಕೆಟ್ಟ ಚಿತ್ರವೇನಲ್ಲ, ಚಿತ್ರದ ನಿರ್ದೇಶಕರು ಪ್ರಯತ್ನ ಪಟ್ಟಿದ್ದಾರೆ, ಆದರೆ ಸಿಕ್ಕಿದ್ದು ಅದೇ ಹಳೆಯ ಸರಕು. ಮೊದಲ ಭಾಗಕ್ಕಿಂತ ವಿಭಿನ್ನವಾದದ್ದನ್ನು ನಿರೀಕ್ಷಿಸಬೇಡಿ. ನಿಮಗೆ ಮೊದಲನೆಯದು ಇಷ್ಟವಾದಲ್ಲಿ, ಇದು ಒಂದು ಬಾರಿ ನೋಡಬಹುದಾದ ಚಿತ್ರ.


