Not Recommended for those who don’t want History to be remembered.
ಚಿತ್ರದ ಸೆಕೆಂಡ್ ಹಾಫ್ ಮೈನವಿರೇಳಿಸೊದಂತು ಗ್ಯಾರೆಂಟಿ… ಅದಕ್ಕೊಸ್ಕರ ಸಿನೇಮಾ Must Watch!
ವಿದ್ಯಾನಂದ ಜೀ ಅವರ “ಭಾರತ ದರ್ಶನ” ಉಪನ್ಯಾಸದಲ್ಲಿ ಮರಾಠಾ ಸಾಮ್ರಾಜ್ಯದ ಬಗ್ಗೆ ಉಲ್ಲೇಖಿಸುತ್ತಾ ಹೇಳಿದ ಮಾತು.. “ಶಿವಾಜಿ ಮಹಾರಾಜರ ಬಳಿ ಇದ್ದವರು ಒಂದೊಂದು ರಣಸಿಂಹಗಳಂತಿದ್ದರು..”. ಆ ಮಾತನ್ನ ನೆನಪಿಸುವ ಹಾಗೆ ವಿಕ್ಕಿ ಕೌಶಲ್ ನ ಸಂಭಾಜಿ ಪಾತ್ರ ಇವತ್ತು ಕಣ್ಣಿಗೆ ರಾಚುವ ಹಾಗಿತ್ತು… ಅದರಲ್ಲೂ ಸಿನೇಮಾದ ಕ್ಲೈಮಾಕ್ಸ್ ಯಪ್ಪ!! ಒಂದು ಸಿಂಹವನ್ನ ಪಳಗಿಸಿ ಕಟ್ಟಿ ಹಾಕುವ ಪರಿಯ ಥರಾ ಸಂಭಾಜಿ ಮಹಾರಾಜರನ್ನು ಕಟ್ಟಿ ಹಾಕಿದ್ದು. ಆ ಗತ್ತು, ಆ ಕಣ್ಣು, ಆ ದೇಹದಾಢ್ಯ, ಹಿಂದವೀ ಸ್ವರಾಜ್ಯದ ಪ್ರತಿ ಇದ್ದ ಆರಾಧನೆ.. ಎಲ್ಲವೂ ಕಣ್ಣು ಕಟ್ಟಿದ ಹಾಗಿತ್ತು.
ಅದೇ ಥರಾ ಔರಂಗಜೇಬನ ಪಾತ್ರದಲ್ಲಿ ಕಾಣಿಸಿಕೊಂಡ ಅಕ್ಷಯ್ ಖನ್ನಾ ಪಾತ್ರವೂ ಸೂಪರ್. ಪಾತ್ರಕ್ಕೆ ಬೇಕಾದ ಗಂಭೀರತೆ ಇಷ್ಟ ಆಯ್ರು..
ಇಷ್ಟವಾಗದ ಎರಡು ಸಂಗತಿಗಳೆಂದರೆ..
ಮೊದಲನೆಯದು ಯಸೂಬಾಯಿ ಪಾತ್ರವನ್ನ ಮಂದಣ್ಣ ಬದಲು ಇನ್ಯಾರಿಗಾದರು ಕೊಟ್ಟಿದ್ರೆ ಚನ್ನಾಗಿರ್ತಿತ್ತು.. ಎರಡನೆಯದು ಚಿತ್ರದ ಸಂಗೀತವ್ನ ರೆಹೆಮಾನ್ ನ ಬದಲಾಗಿ ಅಜೇಯ್-ಅತುಲ್ ಎಂಬ ದಿಗ್ಗಜರಿಗೆ ಕೊಟ್ಟಿದ್ರೆ ಇನ್ನೂ ಚನ್ನಾಗಿರ್ತಿತ್ತು. ಮಹಾರಾಷ್ಟ್ರ, ಮರಾಠಾ ಸಂಸ್ಕೃತಿ, ಭಾಷೆ, ಗೌರವ default ಆಗಿ ಅವರಲ್ಲಿ ಬಂದಿರತ್ತೆ ಹಿಂಗಾಗಿ ಅವರಿದ್ದರೆ ಇನ್ನೂ ಚನ್ನಾಗಿರ್ತಿತ್ತು.
ಒಟ್ಟಾರೆಯಾಗಿ..
ಇತಿಹಾಸದ ಪುಟಗಳಲ್ಲಿ ಅತಿ ಕಡಿಮೆ ಜಾಗ ಪಡೆದಿದ್ದ ಚತ್ರಪತಿ ಸಂಭಾಜಿ ಮಹಾರಾಜರ ಮಹಾನ್ ಕಥೆಯನ್ನು ಪಾರದರ್ಶಕವಾಗಿ ಮತ್ತು ತೀಕ್ಷ್ಣತೆಯಿಂದ ಚಿತ್ರಕಥೆಗೆ ತರುವಲ್ಲಿ ಚಿತ್ರ ಯಶಸ್ವಿಯಾಗಿದೆ.
ವಿಕ್ಕಿ ಕೌಶಲ್ ತನ್ನ ಸರ್ವಶ್ರೇಷ್ಠ ನಟನೆಯೊಂದಿಗೆ, ಶೌರ್ಯ, ಧರ್ಮ, ರಾಷ್ಟ ಪ್ರೇಮ ಮತ್ತು ಶಿವಾಜಿ ಮಹಾರಾಜರೆಡೆಗಿನ ಭಕ್ತಿಯನ್ನು ಅತ್ಯುತ್ತಮ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ಸಂಬಾಜಿ ಮಹಾರಾಜನ ಧೀರತೆಯನ್ನು ಹಾಗೂ ಅವರ ಬಲಿದಾನವನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.


