ಅದೇಕೆ ಈ ಸಿನೆಮಾ ಆಗ ನೋಡ್ಲಿಲ್ಲ ನಾನು..? ಛೇ!
ಇರ್ಲಿ ದೇರ್ ಆಯಿ.. ದುರುಸ್ತ್ ತೋ ಆಯಿ!
Sanam Teri Kasam (2016)ನ ಮರುಪ್ರದರ್ಶನ ನನ್ನಂಥ ಅನೇಕ ಪ್ರೇಕ್ಷಕರಿಗೆ, ವಿಶೇಷವಾಗಿ ಸೂಕ್ಷ ಸಂವೇದನೆಗಳ ಭಾವ ಇದ್ದವರಿಗೆ ಇಷ್ಟವಾಗದೆ ಇರಲಾರದು.
ಈ ಚಿತ್ರ ಮತ್ತೊಮ್ಮೆ ದೊಡ್ಡ ಪರದೆಯಲ್ಲಿ ಸಂಭ್ರಮಿಸುವುದಕ್ಕೆ ಸಾಕ್ಷಿಯಾಗುತ್ತಿದೆ.
ಮಾರ್ಕೆಟ್ನಲ್ಲಿ ಈಗೀಗ ಅನೇಕ ಮಾತುಗಳು ಕೇಳಿ ಬರುತ್ತಿವೆಲ್ವ ಈಗೀನ ಪೀಳಿಗೆಗೆ ಭಾವನೆಗಳೇ ಇಲ್ಲ, ಭಾವುಕತೆ ಅರ್ಥ ಇವರುಗಳಿಗೆ ಅರ್ವಾಥವಾಗದು ಅಂತೆಲ್ಲ! ಆದರೆ, ಇಂದು ಥಿಯೇಟರ್ನಲ್ಲಿ ಸಿನೆಮಾ ಮುಗಿದಾಗ, ಕನಿಷ್ಠ 20% ಜನರು ಈಗಿನವರೆ ಇದ್ದರು. ಮಜಾ ಅಂದ್ರೆ ಏನಂದರೆ ಸಿನೇಮಾ ಮುಗಿದಾಗ ಎಲ್ಲರೂ ಭಾವುಕರಾಗಿದ್ದರು!
ಈ ಚಿತ್ರಕ್ಕೆ ಮಿಲೆನಿಯಲ್ಸ್ ಮಾತ್ರವಲ್ಲ, ಹೊಸ ಪೀಳಿಗೆಯ ಪ್ರೇಕ್ಷಕರೂ ಅದ್ಭುತ ಪ್ರತಿಕ್ರಿಯೆ ನೀಡುತ್ತಿದ್ದಾರೆ. 2016ರಲ್ಲಿ ಚಿತ್ರಮಂದಿರದಲ್ಲಿ ನೋಡಲು ತಪ್ಪಿಸಿಕೊಂಡವರು ಈಗ ಅದನ್ನು ದೊಡ್ಡ ಪರದೆ ಮೇಲೆ ಅನುಭವಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಡುಗಳು, ಸೌಂಡ್ಟ್ರ್ಯಾಕ್, ಕಥೆ—ಇವೆಲ್ಲವೂ ಇಂದಿಗೂ ಅದೇ ಮಾಯೆ ಉಳಿಸಿಕೊಂಡಿವೆ. ಇದನ್ನು ಅನುಭವಿಸಿದವನೇ ಇದರ ಮೌಲ್ಯವನ್ನು ಅರ್ಥಮಾಡಿಕೊಳ್ಳಬಲ್ಲ!
ನೋಡಿ… ಮಿಸ್ ಮಾಡ್ಕೋಬೇಡಿ!
Indar❤️💔


