ಮುಂದಿನ ಸರಣಿ ಯಾವಾಗ ಬಿಡುಗಡೆಯಾಗುತ್ತೆ ಅನ್ನುವೊಂದಷ್ಟು ನಿರೀಕ್ಷೆಯ ವೆಬ್‌ಸೀರೀಸ್‌ಗಳಲ್ಲಿ ಪಾತಾಲ್ ಲೋಕ್ ಕೂಡ ಒಂದು. ಮೊದಲನೆ ಸರಣಿಯ ಮೂಲಕ ಪ್ರೇಕ್ಷಕರ ಮನ ಗೆದ್ದ ಈ ವೆಬ್‌ಸೀರೀಸ್, ಎರಡನೇ ಸರಣಿಯಲ್ಲೂ ಜನರಿಗೆ ಇಷ್ಟವಾಗುವಂತೆ ವಿಭಿನ್ನ, ತೀವ್ರ ಮತ್ತು ಆಕರ್ಷಕ ಕಥಾವಸ್ತುವನ್ನು ಉಣಬಡಿಸಿದೆ.
ಮೊದಲ ಸರಣಿಯ ಕಥೆಗೆ ಯಾವುದೇ ನೇರ ಸಂಬಂಧ ಇಲ್ಲದಿದ್ದರೂ, ಈ ಸರಣಿಯನ್ನು ಸಂಪೂರ್ಣ ಹೊಸ ಕಥೆಯ ಮೂಲಕ ಕಟ್ಟಿಕೊಡಲಾಗಿದೆ. ಆರಂಭದಿಂದ ಕೊನೆಯವರೆಗೂ ಎಲ್ಲೂ ಬೋರ್ ಆಗದಂತೆ ಕತೆಗೂ, ಪಾತ್ರಗಳಿಗೂ ಚುರುಕಿನ ನಿರೂಪಣೆಯನ್ನು ಕೊಟ್ಟಿರುವುದು ಪ್ರೇಕ್ಷಕರನ್ನು ಕಟ್ಟಿ ಹಾಕುತ್ತದೆ.
ನಾಗಾಲ್ಯಾಂಡ್‌ನಲ್ಲಿನ ರಾಜಕೀಯ ಹುನ್ನಾರ, ವರ್ಗಭೇದ, ಮತ್ತು ಅಲ್ಲಿನ ಜನರ ಶೋಷಣೆಯ ವಾಸ್ತವಿಕತೆಗಳನ್ನು ಕತೆಗಾರರು ಬಹಳ ಸೂಕ್ಷ್ಮತೆಯಿಂದ ಅರ್ಥೈಸಿದ್ದಾರೆ. ಸ್ಥಳೀಯ ವಾಸ್ತವಿಕೆಗಳ ಜೊತೆ ಕತೆಯನ್ನು ನಯವಾಗಿ ಜೋಡಿಸಿರುವುದು ಈ ಸರಣಿಯ ಬಲವಾಗಿದೆ.
ಜೈದೀಪ್ ಅಹ್ಲಾವತ್ ಅವರ ಹಠಿರಾಮ್ ಚೌಧರಿ ಪಾತ್ರವು ಸೀರಿಯಸ್ ನಿಂದ ಕೂಡಿದ್ದರು ಅವರ ಮಾನವೀಯತೆಯ ದೃಷ್ಟಿಕೋನ ಪ್ರತಿ ದೃಶ್ಯದಲ್ಲೂ ಕಂಡುಬುತ್ತದೆ.
ಒಟ್ಟಾರೆ, ಪಾತಾಲ್ ಲೋಕ್ 2 ಅತ್ಯುತ್ತಮ ನಿರೂಪಣೆ, ತೀಕ್ಷ್ಣ ಕಥಾವಸ್ತು, ಮತ್ತು ಮೌಲಿಕವಾದ ಸಾಮಾಜಿಕ ಸಂದೇಶಗಳೊಂದಿಗೆ “ನೋಡಲೇ ಬೇಕಾದ” ವೆಬ್‌ಸೀರೀಸ್ ಆಗಿದೆ.


