Fateh

ಕಳೆದು ಒಂದು ಅಥವಾ ಎರೆಡು ತಿಂಗಳಿನಿಂದ ಫೋನ್‌ ಮಾಡುವಾಗಲ್ಲೊಮ್ಮೆ ಸೈಬರ್‌ ಕ್ರೈಮ್‌ ನಿಂದ ಜಾಗೃತರಾಗಿರಿ ಅಂತ ಬರುವ ಧ್ವನಿ ಅದೆಷ್ಟು ಜನರಿಗೆ ಕಿರಿಕಿರಿ ಮಾಡಿದೆ ಅಂತ ಎಲ್ಲರಿಗೂ ಗೊತ್ತು, ಆದರೆ ಈ ಸೈಬರ್‌ ಕ್ರೈಮ್‌ ನಿಂದಾಗಿ ಅದೆಷ್ಟು ಲಕ್ಷ ಜನರು ವಂಚಿತರಾಗಿದ್ದಾರೆ ಮತ್ತು ಅದರ ಹಿಂದಿರುವ ಸರ್ಕಾರದ ಜವಾಬ್ದಾರಿ ಅರ್ಥವಾಗಬಹುದು. ಸುಮ್ನೆ ತಂತ್ರಜ್ಞಾನ ಹಾಗು ಸೈಬರ್‌ ಕ್ರೈಮ್‌ ನ ಕುರಿತಾದ ಕಥೆಗಳ ಬಗ್ಗೆ ಗೂಗಲ್‌ ಮಾಡಿದ್ರೆ facts and fingers ಸಿಗಬಹುದು.

ಇದೆ ಕಥೆಯನ್ನ ಇಟ್ಟುಕೊಂಡು ಮುಂಬರುವ ದಿನಗಳಲ್ಲಿ ಇನ್ನೂ ಏನೇನು ಅನಾಹುತಗಳಾಗಬಹುದು ಅನ್ನೊ ಸೂಕ್ಷ್ಮತೆಯನ್ನ ತಿಳಿಸುವ ಸಿನೇಮಾ “ಫತೇಹ್”.

ತನ್ನ 51 ನೇ ವಯಸ್ಸಿನಲ್ಲು ಫಿಟ್‌ & ಬೋಲ್ಡ್‌ ಆಗಿ ಕಂಡಂಥ ಸೋನು ಸೂದ್‌ ನಟಿಸಿ ನಿರ್ದೇಶಿಸಿದ ಚೊಚ್ಚಲ ಸಿನೇಮಾ ಇದು. ಪಕ್ಕಾ ಮಾಸ್‌ ಹಾಗೂ ಎಂಟೆರ್ಟೆನಮೆಂಟ್‌ ಚಿತ್ರ. ಕಥೆಯನ್ನ ಬರೆದ ರೀತಿ ಹಾಗೂ ಬೆಫಾಂ ದಾಢಸಿ ಸ್ಟಂಟ್‌ ಸೀನ್‌ ಗಳು ಚಿತ್ರವನ್ನ ಎಲ್ಲೂ ಬೋರ್‌ ಹೊಡೆಸೊದಿಲ್ಲ.

ನಸಿರುದ್ದೀನ್‌ ಷಾ ಹಾಗೂ ವಿಜಯ್‌ ರಾಜ಼್ ಖಳನಾಯಕ ಪಾತ್ರದಲ್ಲಿ ನಟಿಸಿದ್ದು ಇಷ್ಟವಾಯ್ತು. ಇವರ ಜೊತೆ ಸಾಥ್‌ ಕೊಡೊದಕ್ಕೆ ಜಾಕ್ವೆಲಿನ್ ಫೆರ್ನಾಂಡಿಸ್. ಒಟ್ಟಾರೆಯಾಗಿ ಸಿನೇಮಾ ಕಾಸ್ಟಿಂಗ್‌ ಸೂಪರ್.

2025 ರ ಮೊದಲ ಬಾಲಿವುಡ್‌ ನ ಚಂದನ ಸಿನೇಮಾ..

ನೋಡಬಹುದು..

Leave a Comment

Your email address will not be published. Required fields are marked *

Scroll to Top