ಸಬರಮತಿ ಅಂತ ಹೆಸರು ಕೇಳಿದೊಡನೆ ಕಣ್ಮುಂದೆ ಬರೊ ಎರಡು ಸಂಗತಿಗಳಲ್ಲಿ ಒಂದು ಗಾಂಧೀಜಿಯವರ ಆಶ್ರಮ ಹಾಗೂ ಇನ್ನೊಂದು ಇತಿಹಾಸದಲ್ಲಿ ಕರಾಳ ದಿನಕ್ಕೆ ಸಾಕ್ಷಿಯಾದ ‘ಗೋಧ್ರಾ’.
‘ಸಬರಮತಿ ರಿಪೋರ್ಟ್’ ಈ ಚಲನಚಿತ್ರವು ಎರಡನೇ ವಿಷಯವಾದ ಗೋಧ್ರಾ ಅಥವಾ ಗೋಧ್ರಾ ಹತ್ಯಾ ಕಾಂಡದ ಸುತ್ತ ನಡೆಯುವ ಕಥೆಯ ಸಿನೇಮಾ.
ಇದು ಕೇವಲ ಒಂದು ಸಿನಿಮಾ ಅಲ್ಲ – ಇತಿಹಾಸದ ಪುಟಗಳನ್ನು ಕೆದುಕಿದಾಗ ನಿಜವಾಗಲು ಆವತ್ತು ಆಗಿದ್ದೆನು? ಇದರ ಹಿಂದಿದ್ದ ‘ಕೈ’ ಗಳು ಯಾರ್ಯಾರದ್ದು?
ಸುಸಜ್ಜಿತವಾಗಿ ನಡೆದ ಘಟನೆಯ ಪರಿಸ್ಥಿತಿ ಹೆಂಗಿತ್ತು ಅನ್ನೊದನ್ನ ಎಳೆ ಎಳೆಯಾಗಿ ಡಾಕ್ಯೂಮೆಂಟ್ ಥರಾ ಮಾಡಿದ್ದಾರೆ.. ಇಷ್ಟ ಆಯ್ತು..
ಚಿತ್ರದಲ್ಲಿ ಆವತ್ತು ನಡೆದ ಘಟನೆಗಳ ವಿಡಿಯೊ ತುಣುಕುಗಳನ್ನ ಹಂಗಂಗೆ ತೆಗೆದುಕೊಂಡದ್ದು ನೋಡೊದಕ್ಕೆ ಕಷ್ಟವಾಯ್ತು. ಗೋಧ್ರಾ ಸನ್ನಿವೇಶದಲ್ಲಿ ನಮ್ಮನ್ನಗಲಿದವರಿಗೆ ಗೌರವ ಸಲ್ಲಿಸುವ ಶ್ರದ್ಧಾಂಜಲಿಯಂತಿದೆ ಈ ಸಿನೇಮಾ.
ವಿಕ್ರಾಂತ್ ಮೆಸ್ಸಿಯ ನಟನೆ ಸಿನೇಮಾಕ್ಕೆ ಜೀವ ತುಂಬಿದ ಹಾಗಿದೆ. ನಿಜವಾದ ಪತ್ರಕರ್ತನಿಗೆ ಸಮಾಜದ ಜೊತೆಗಿರುವ ಜವಾಬ್ದಾರಿಗಳನ್ನು ಈ ಸಿನೇಮಾ ಎತ್ತಿ ತೋರೊ ಹಾಗಿದೆ. ಚಿತ್ರದ ಇನ್ನೊಂದು ಶಕ್ತಿಯುತವಾದ ಅಂಶ ಎಂದರೆ ಹಿನ್ನಲೆ ಸಂಗೀತ.
ನೋಡಿ ಒಂದು ಸಲ..


