Vijay 69

ಬದುಕಿಗೆ ಚಿಕ್‌ ಮಟ್ಟದ ಹುರುಪನ್ನ ತುಂಬುವ ಕಥೆ. Age is just a Number ಅಂತ ದಿನಕ್ಕೆ ನಾಲ್ಕೈದು ಬಾರಿ ಗುನುಗಿಸೊ ನಮ್‌ ಗಳ ನಡುವೆ ಅದನ್ನೆ ಸಿನೇಮಾ ಮಾಡಿದ್ದಾರೆ ಅಷ್ಟೇ.

ಪಕ್ಕಾ ಹೃದಯಸ್ಪರ್ಶಿ ಹಾಗೂ ಹಾಸ್ಯಮಯ ಚಿತ್ರ, ವಯೋವೃದ್ಧರ ಜೀವನ, ಅವರ ಆತ್ಮಾನ್ವೇಷಣೆ ಮತ್ತು ಕುಟುಂಬದ ಸಂಬಂಧಗಳ ಕುರಿತಾದ ಸುಂದರ ಚಿತ್ರ. ಅನುಪಮ್ ಖೇರ್ ಅವರ ನಟನೆ ವಿಜಯ್ ಪಾತ್ರದಲ್ಲಿ ಸಿಕ್ಕಾ ಪಟ್ಟೆ ಚನ್ನಾಗಿ ಮೂಡಿ ಬಂದಿದೆ. ಅವರಿಗೆ ಸಾಥ್‌ ಕೊಟ್ಟ ಚಂಕಿ ಪಾಂಡೆ ಹಾಗು ಇನ್ನುಳಿದವರುಗಳು ಸಹ ಸ್ಕೀನ್‌ ಮೇಲೆ ಚಂದವಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಅನುಪಮ್‌ ಖೇರ್‌ ಹಾಗೂ ಚಂಕಿ ಪಾಂಡೆಯವರ ಚಿತ್ರದ ಶುರುವಾತಿನಲ್ಲಿಯ ಸಂಭಾಷಣೆ (ಕಾಫಿನ್/ಚಟ್ಟ ದ ಮುಂದೆ ಕುಳಿತು..) ನಮ್‌ ಗಳಿಗೆ ಹೇಳಿದ ಹಾಗಿದೆ.

ಚಂಕಿ : ವಿಜಯ ಬದುಕ್ನಲ್ಲಿ ಏನೇನೊ ಮಾಡಬೇಕು, ಏನೇನೊ ಆಗಬೇಕು ಅಂದುಕೊಂಡಿದ್ವಲ್ಲೊ.. ಅದನ್ನ ಬಿಟ್ಟು ಏನೇನೊ ಆಗಿಬಿಟ್ವಿ… (69 ರ ವಯಸ್ಸಲ್ಲಿ ಆಡೋ ಮಾತುಗಳು)

ಇದು ಬರೀ ಸಿನೇಮಾದ ಡೈಲಾಗ್‌ ಆಗಿರಲಿಲ್ಲ..
ಒಂದು ಎಚ್ಚರದ ಗಂಟೆ ಥರಾ ಕಾಣಸ್ತು..

ಇದಕ್ಕೆ ಸರಿಯಾಗಿ ಸಿನೇಮಾದಲ್ಲಿ ಅವಾಗಾವಾಗ ಬರುವ 1965 ರ ವಕ್ತ್‌ ಸಿನೇಮಾದ “ಆಗೆ ಭಿ ಜಾನೆ ನಾ ತು..” ಹಾಡು.

ಇವೆಲ್ಲ ಸೇರಿ ಚಿತ್ರವನ್ನ ಒಂದು ಚಂದದ ಫ್ರೇಮ್‌ ನಲಿ ತಂದಿಟ್ಟಿದೆ.

ಹಲವಾರು ಸನ್ನಿವೇಶಗಳಲ್ಲಿ ಚಿತ್ರವು ಸ್ವಲ್ಪ ನಿಧಾನಗತಿಯಲ್ಲಿ ಸಾಗಿದರೂ, ಎಲ್ಲೂ ಬೋರ್‌ ಅಂತ ಅನ್ನಿಸಲಿಲ್ಲ.

ಒಂದು ಸಾರಿ ನೋಡಬಹುದು.

Leave a Comment

Your email address will not be published. Required fields are marked *

Scroll to Top