ಒಂದೂರಲ್ಲಿ ಒಂದಷ್ಟು ಸಹಜ ರೀತಿಯಿಂದ ಜನಾ ಬದುಕ್ತಿರುತ್ತಾರೆ. ಸಡನ್ ಆಗಿ ದೂರದ ಪ್ರಯೋಗಾಲಯದಲ್ಲಿ ಏನೊ ಆಗಿ ಒಂದು ವೈರಸ್ ಹುಟ್ಟತ್ತೆ ಅದು ಇನ್ಯಾರದ್ದೊ ದೇಹಕ್ಕೆ ಹರಡಿ ಭಯಂಕರವಾಗಿ ರೂಪಗೊಂಡು ಸಾಂಕ್ರಾಮಿಕವಾಗಿ ಊರನ್ನ ವ್ಯಾಪರಿಸಿಬಿಡೊದು ಅಲ್ಲಿಂದಾಚೆ ಗಡಿದಾಟಿ ಬೇರೆ ರಾಜ್ಯ, ದೇಶಕ್ಕೂ ಹರಡೋದು
ಇದರಿಂದಾಚೆ ಒಂದಷ್ಟು ಜನ ಬದುಕುಳಿಯಲು ಹೋರಾಟ ಮಾಡೋದು.
ಇಷ್ಟು ವರ್ಷಗಳಿಂದ ತೆರೆಕಂಡ ಎಲ್ಲ ಜ಼ೊಂಬಿ ಸಿನೇಮಾಗಳ ಥರ ಈ ಸಿನೆಮಾನೂ ಇದ್ದು ಹೊಸತನ ಅನ್ನೊದು ಏನೂ ಇಲ್ಲ. ಆದರೆ ಸಿನೇಮಾ ಮುಗಿಯೊ ವರ್ಗು ಬೇಜಾರಂತು ಆಗಲ್ಲ.
ಇನ್ನ ಎರಡನೇ ಪಾರ್ಟ್ ಬಂದ್ರೆ ಬೇಗ ನೋಡಿ ಅತ್ಲಾಗೆ ಮುಗಿಸಬಹುದು.
ಸಿನೇಮಾದ ಹಿರೊ ಕ್ಯೂಟ್ ಅಂತನ್ನಿಸಿದಾ.

