Meiyazhagan

ಈ ಪ್ರೇಮಕುಮಾರ್‌ ಅನ್ನೊ ನಿರ್ದೇಶಕನನ್ನಾ ಏನಾದ್ರು ಮಾಡ್ಬೇಕು ಗುರು..

ಸಿನೇಮಾ ಮಾಡಿ ಅಂದ್ರೆ ಡೈರೆಕ್ಟರ್ರು ತಲೆಯಲ್ಲಿ ಕೈಹಾಕಿ ಹಳೆಯ ನೆನಪುಗಳನ್ನ ಕೆದಕಿ ಬಿಟ್ಟಿದ್ದಾರೆ. ಚಿತ್ರ ಸೀದಾ Directly Proportional ಟು ಭಾವನಾತ್ಮಕ ಸ್ಪಂದನೆ.

ಈ ಮುಂಚೆ 96 ಅನ್ನೊ ಸಿನೇಮಾ ಮಾಡಿ ತಲೆ ಕೆಡಿಸಿದ್ದು ಇವ್ರೆ.

ಯಪ್ಪಾ!!

“ಮೇಯಳಗನ್” ನಾವು ಮರೆತ ಹೋದ ಅದೆಷ್ಟೊ ನೆನಪುಗಳನ್ನ ಹೆಕ್ಕಿ ಹೆಕ್ಕಿ ತೆಗೆದು ಒಳಗಿಂದಾನೆ ದುಃಖತಪ್ತರನ್ನಾಗಿಸೊವಂಥಾ ಸಿನೇಮಾ.

ರೋಜಿ ರೋಟಿಕೆ ಡೌಡ್‌ ಮೆ ಕಳೆದು ಹೋದ ನಮಗೆ ನೆನಪಿನ ಬುತ್ತಿಡಬ್ಬಿ ಥರಾ ಫೀಲ್‌ ಕೊಡೊ ಸಿನೇಮಾ.

ಚಿಕ್ಕಂದಿನಲ್ಲಿದ್ದ ನಮ್‌ ನಮ್‌ ಮನೆಗಳ, ನಮ್‌ ನಮ್ ಊರುಗಳ, ಅಲ್ಲಿನ ಸಂಸ್ಕೃತಿ, ಮೌಲ್ಯಗಳ ಮತ್ತು ಅವಕ್ಕಂಟಿಕೊಂಡ ಬದುಕುಗಳ, ಜನರುಗಳ, ಆಗಿನ ವಿಭಿನ್ನ ಸಂಸ್ಕೃತಿ ಹಾಗು ಬಾಂಧವ್ಯಗಳ ಅಸ್ತಿತ್ವ..
ಈ ತರಹದ ಅನೇಕ ವಿಚಾರಗಳನ್ನ ಆಲ್ಮೊಸ್ಟ್‌ ಮರೆತು ಹೋದ ನಮಗೆ ಈ ಸಿನೇಮಾ ಇನ್ನೊಂದು ಅವಕಾಶ ಕೊಟ್ಟ ಅನುಭವ ಆಯ್ತು.

ಇಲ್ಲಿ ಹೊಸತನದ್ದು ಏನೂ ಇಲ್ಲ..

ನಾವು ಮರೆತು ಹೋದ ಒಂದಷ್ಟು ಸಂಗತಿಗಳನ್ನ ಸಹಜವಾಗಿ ತೋರಿಸಿದ್ದಾರೆ..

ಅಲ್ಲೆ ತೊಂದರೆ ಆಗಿದ್ದು..

ಸಹಜವಾಗಿ ಮರೆತು ಬಾಳೊದನ್ನ ನಾವು ಮರೆತು ಕಾಲಗಳೇ ಆಗಿವೆ..

ಅದಕ್ಕೆ ನಮಗೆ ದುಃಖ ಆಗತ್ತೆ ಸಿನೇಮಾ ನೋಡೊವಾಗ.

ಚಿತ್ರದಲ್ಲಿ ಅಣ್ಣ, ತಮ್ಮ, ಕಸಿನ್ಸು, ಗೆಳೆಯರು ಅಂತನ್ನೊ ಅನೇಕ ಬಗೆಯ ಸಂಬಂಧಗಳು ಹೇಗೆ ನಮ್ಮಲ್ಲಿ ಸಕಾರಾತ್ಮಕ ಚಿಂತನೆಗಳನ್ನು ತರುತ್ತವೆ ಹಾಗೂ ಜೀವನದಲ್ಲಿ ಕಳೆದುಕೊಂಡಿರುವ ವ್ಯಕ್ತಿತ್ವದ ಪ್ರತಿಯೊಂದು ಅಂಶವನ್ನು ಹೇಗೆ ಬದಲಾಯಿಸುತ್ತದೆ ಎಂಬ ಬಲವಾದ ಸಂದೇಶದ ಜೊತೆಗೆ ಸಂಸ್ಕೃತಿಯ ಒಂದು ಪಕ್ಕಾ ಝಲಕ್ಕನ್ನು ತೋರಿಸಿಕೊಟ್ಟಿದೆ.

ಕಮರ್ಷಿಯಲ್‌ ಸಿನೇಮಾ ನೋಡೊರಿಗೆ ಇಷ್ಟವಾಗದೆ ಇರಬಹುದು.
ಸಿನೇಮಾ ಸ್ಲೋ ಆಗಿದೆ ಯಾಕಂದ್ರೆ ಸೂಕ್ಷ್ಮ ಸಂವೇದನೆಗಳಿಗೆ ಹೆಚ್ಚಿನ ಒತ್ತು ಕೊಡಲಾಗಿದೆ.

ಸಿನೇಮಾ ನೋಡಿ ಇಷ್ಟ ಆಗ್ಲಿಲ್ಲ ಅಂದ್ರೆ
ಝೆಂಜಿ಼ ನಾಗರಿಕತೆಗೆ ಒಗ್ಗಿಕೊಂಡಿದ್ದೀರಿ ಅನ್ನೊದನ್ನ ಅರ್ಥೈಸಿಕೊಳ್ಳಿ.

ನೋಡಿ…

Leave a Comment

Your email address will not be published. Required fields are marked *

Scroll to Top