ವಾತ್ಸಲ್ಯದ ಕರೆಯೋಲೆ . .

ತುಂಬ ದಿನಗಳ ನಂತರ ಮನಸ್ಸು ಏಕೋ ನಿರಾಳಭಾವವನ್ನು ಮೈಗೋಡವಿಕೊಂಡಿದೆ,ಈ ಹೋಸೆದು ಹೋಗುತ್ತಿರುವ ಬಿಜಿ ದಿನಗಳಲ್ಲಿ ಎಲ್ಲೊ ನಾವುಗಳು ಈ ಸಮ ಸರಪಳಿಯಲ್ಲಿ ಸಿಕ್ಕಿಬಿಟ್ಟೆವು ಅಂತಾ ಅನ್ನಿಸಲು ಸುರುವಾಗಿಬಿಡುತ್ತದೆ ಅಂತಹದರಲ್ಲಿ ಇವತ್ತು ಯಾಕೋ ಮನಸ್ಸು ಅಂಥಹ ಯಾವುದೇ ರೀತಿಯ ವಿವ್ಹಲಕ್ಕೆ ಒಳಗಾಗದೆ ತುಂಬಾ ಶಾಂತವಾಗಿದೆ ಬಿಸಿಲಿನಿಂದ ಸುಡೂತ್ತಿದ್ದ ಭೂಮಿ ಇಂದು ತಂಪಾಗಿದೆ.ಮಳೆಯ ಹನಿಗಳ ತುಂತುರು ಶುರುವಾಗಿದೆ ಏನೋ ಮನೆಯ ನೆನಪು ತುಂಬಾ ಕಾಡುತ್ತಿದೆ,ಯಾವುದಾದರು ಪುಸ್ತಕ ಕೈಗೆತ್ತಿಕೊಳ್ಳೋಣ ಎಂದರೆ ಮನಸ್ಸೆ ಬರ್ತಾ ಇಲ್ಲ.ಭಾನುವಾರ ಆದದ್ದರಿಂದ ವಾರದ ಬಾಕಿ ಕೇಲಸಗಳನ್ನು ಮುಗಿಸಿದ್ದಾಗಿದೆ ಹೋರಗಡೆ ಹೋಗಲೂ ಮೂಡ ಇಲ್ಲ , ಮನೆಯ ಕಿಟಕಿಯ ಹೋರಗಿಣುಕಿದಾಗ ರುಂತುರು ಮಳೆಯ ಹನಿಗಳ ಜಾಡು ಸುರಿಯುತ್ತಿತ್ತು.ಬೆಳಗ್ಗೆ ಇಂದ ಗಲಿಜುಗೊಂಡ ರೂಮನ್ನು ಒಮ್ಮೆ ಕ್ಲೀನ್ ಮಾಡಬೇಕು ಅಂತ ಅನ್ನಿಸಿ ಎಲ್ಲವನ್ನು ಮಾಡಿ ಇನ್ನೆನು ಸಾಕಪ್ಪಾ ಅಂತಾ ಹಾಸಿಗೆ ಮೇಲೆ ಬಿದ್ದಾಗ ಹಳೆಯ ಒಂದು ಡೈರಿ ಕಣ್ಣಿಗೆ ಬಿತ್ತು ಆ ಡೈರಿಯ ಪುಟಗಳಲ್ಲಿ ಅದಗಿಕೊಂಡ ಒಂದು ಕಂದು ಬಣ್ಣದ ಕವರ .ಅದರೋಳಗೆ ನನ್ನ “ಅಮ್ಮನ ಪತ್ರ” ಬೆಚ್ಚನೆ ಕುಳೀತುಕೊಂಡೀತ್ತು.ಅದನ್ನು ಕೈಗೆತ್ತಿಕೊಂಡ ಕೂಡಲೇ ಮನಸ್ಸು ನಿರಾಳವಾಗುತ್ತಿದೆ.ಭಗವಾನ್ ಶ್ರೀಕೃಷ್ಣ ಯುದ್ದ ಭೂಮಿಯಲ್ಲಿ ಕುಸಿದು ಕುಳಿತ ಅರ್ಜುನನಿಗೆ ಗೀತೋಪದೇಶ ನೀಡಿ ಹುರುಪು ಹುಟ್ಟಿಸಿದಂತೆ ಅಮ್ಮನ ಪತ್ರ ನನ್ನ ಕೈಗೆ ಸಿಕ್ಕಿದಾಗ ಚೈತನ್ಯ ನೀಡುವ ಅಸ್ತ್ರದಂತೆ ಭಾಸವಾಗುತ್ತದೆ.ನಾನು ಮೋದಲ ಸಲ ಊರನ್ನು ಬಿಟ್ಟು ಬಂದ ಮೇಲೆ ನನ್ನ ಅಮ್ಮ ನನಗೆ ಬರೆದ ಪತ್ರ ಅದು.
ಊರನ್ನು ಬಿಟ್ಟು ಬಂದ ಮೇಳೆ ನನ್ನ ಬದುಕನ್ನು ನಾನು ಕಟ್ಟುವ ಈ ಹಂತಗಳಲ್ಲಿ ಎಷ್ಟು ಏಳು ಬೀಳುಗಳು ಸಂಭವಿಸಿವೆಯೋ ಅಷ್ಟು ಬಾರಿ ಅಮ್ಮನ ಈ ಪತ್ರ ನನ್ನಲ್ಲಿ ಸ್ಥೈರ್ಯ ತುಂಬಿದೆ. ನಿಜ ಹೇಳಬೇಕೇ? ಮೊಬೈಲ್ ಫೋನ್‌ನಲ್ಲಿ ಆಗಾಗ ಮಾತನಾಡುತ್ತಾ ಕಷ್ಟ ಸುಖ ಹೇಳುತ್ತಿದ್ದರೂ ಅಮ್ಮನ ಈ ಪತ್ರದಲ್ಲಿ ಸಿಗುವಂತಹ ತೃಪ್ತಿ ಎಲ್ಲಿಯೂ ಸಿಕ್ಕಿಲ್ಲ. ಆ ಪತ್ರ ಅಂತದ್ದು. ತನ್ನ ಮಕ್ಕಳು ಎಲ್ಲಿಯೇ ಇರಲಿ ಮನಸ್ಸಲ್ಲಿ ಮಕ್ಕಳದ್ದೇ ಚಿಂತೆ. ಮಾತೃ ಹೃದಯವಲ್ಲವೇ? ಮಕ್ಕಳ ಒಂದೊಂದು ಉಚ್ವಾಸ ನಿಶ್ವಾಸವೂ ಆ ಅಮ್ಮನಿಗೆ ತಿಳಿಯುವ ಶಕ್ತಿ ಇದೆ. ಅದಕ್ಕಾಗಿಯೇ ಬಲ್ಲವರು ಅಮ್ಮ ದೇವರ ರೂಪ ಅಂದದ್ದು.

ಇನ್ನು, ಮಕ್ಕಳೆಂದರೆ ಅಮ್ಮನಿಗೆ ಕಾಳಜಿ ಇಲ್ಲದೆ ಇರುತ್ತದಾ?. ನೋಡು ಪುಟ್ಟಾ ಅದು ಹಾಗೆ, ಇದು ಹೀಗೆ, ಜಾಗರೂಕತೆಯಿಂದಿರು , ಹೋಸ ಊರು ಹೋಸ ಜನ ಎಂಬ ಉಪದೇಶಗಳೊಂದಿಗೆ ತುಂಬಾ ಮಮತೆ, ತಪ್ಪು ಮಾಡಿದಲ್ಲಿ ಅಷ್ಟೇ ಕಟುವಾದ ಟೀಕೆ ಎಲ್ಲವೂ ತುಂಬಿರುವ ಅದೆಷ್ಟೋ ಮಮತಯ ಸಾಲುಗಳು ಈ ಪತ್ರದಲ್ಲಿದ್ದವು.ಆ ಸಾಲುಗಳು ನೀಡುವಂತಹ ಮಾರ್ಗದರ್ಶನ, ಒಲವು, ಸಾಂತ್ವನ.. ನಾನು ಧೃತಿಗೆಟ್ಟಾಗ “ಏಕಾಂಗಿಯಲ್ಲ” ಎಂಬ ಅರಿವು ಮೂಡಿಸಿ ಯಾವುದೇ ಕಷ್ಟ ಬಂದರೂ ಸೆಟೆದು ನಿಲ್ಲುವ ತಾಕತ್ತನ್ನು ನೀಡಿದೆ ಈ ಪತ್ರ.

ಪತ್ರದ ಬಗ್ಗೆ ಹೇಳುವಾಗ ತಕ್ಷಣ ನೆನಪಿಗೆ ಬರುವುದೇ ನೀಲಿ ಬಣ್ಣದ ಇನ್‌ಲ್ಯಾಂಡ್ ಲೆಟರ್. ಈಗ ಅದು ಕಾಣಲಿಕ್ಕೇ ಅಪರೂಪ. ನಿಜ, ಕಾಲಬದಲಾಗಿದೆ. ತಾಂತ್ರಿಕತೆ ವರ್ಧಿಸುತ್ತಾ ಬಂದಂತೆ ಪತ್ರಗಳ ಸ್ಥಾನವನ್ನು ಮೊಬೈಲ್ ಎಸ್‌ಎಂಎಸ್‌ಗಳು ಇಮೇಲ್ ಕಸಿದುಕೊಂಡಿವೆ. ಏನೇ ಇರಲಿ ತಮ್ಮ ಕೈಯಕ್ಷರಗಳಲ್ಲಿ ಬರೆದ ಪತ್ರದಲ್ಲಿ “ನನ್ನೂರಿನ” ಮಣ್ಣಿನ ಸುಗಂಧವಿದೆ, ವಿವರವಾಗಿ ಬರೆದ ಮುದ್ದಾದ ಅಕ್ಷರಗಳಲ್ಲಿ ಮಮತೆಯ ಕೊಂಡಿಯಿದೆ,ನಿಜವಾದ ಭಾವನೆಗಳ ಪ್ರಕಟಿಕರಣ ಇದೆ, “ಪ್ರೀತಿಯ…”ಎಂದು ಆರಂಭವಾಗುವ ಪತ್ರಗಳಿಂದ ಇಂತಿ “ನಿನ್ನ.. “ಎಂದು ಕೊನೆಗೊಳ್ಳುವ ಈ ಪತ್ರಗಳು ಹೊತ್ತು ತರುವ ಅದೆಷ್ಟು ಸುದ್ದಿಗಳು, ಭಾವನೆಗಳು! ಎಲ್ಲವನ್ನೂ ಓದಿ ಮುಗಿಸುವಾಗ ಕಣ್ಣು ತೇವಗೊಂಡಿರುತ್ತದೆ.

ನೆನಪುಗಳು ಮನಸ್ಸಿನ ಕದ ತಟ್ಟಿ ಒಮ್ಮೆ ನಗು ಮತ್ತೊಮ್ಮೆ ಅಳು ತರಿಸಿದರೂ ಪತ್ರದಲ್ಲಿನ ಅಕ್ಷರಗಳು ಮತ್ತಷ್ಟು ಮುದ್ದಾಗಿ ಕಾಣಿಸುತ್ತವೆ. ಓದಿದ ಪತ್ರವನ್ನು ಮತ್ತೆ ಮತ್ತೆ ಓದುವಾಗ ಹೊಸ ಉತ್ಸಾಹ, ಅಮ್ಮನ ನೆನಪು ಕಾಡುತ್ತದೆ. ಮರೆಯದೆ ಪತ್ರ ಬರಿ ಎಂದು ಕೊನೆಯ ಸಾಲಿನಲ್ಲಿ ಅಮ್ಮ ಬರೆದದ್ದು ನೋಡಿದಾಗ ನೆನಪಾದದ್ದು, ಅದೆಷ್ಟೋ ನನ್ನ ಉತ್ತರಗಳು ಅಮ್ಮನ ಕೈ ಸೇರಿವೆ ಎಂದು. ಸದ್ಯ, ನಾನು ನನ್ನವರನ್ನು ಮಿಸ್ ಮಾಡುವಾಗ ಪತ್ರವನ್ನು ಕೈಗೆತ್ತಿಕೊಂಡು ನೋವು ಮರೆಯುವಂತೆ, ಅವರೂ ಹಾಗೆ ಮಾಡುತ್ತಿರುತ್ತಾರಲ್ಲಾ..ಅದಕ್ಕೇ ಪತ್ರ ಬರೆಯುವುದನ್ನು ಮುಂದುವರಿಸುತ್ತಾ ಬಂದಿದ್ದೇನೆ. ಅದರಲ್ಲಿ ಏನೋ ಒಂಥಾರ ತೃಪ್ತಿಯಿದೆ, ಮನದಾಳದ ಮಾತನ್ನು ಹೇಳುವ ತಾಕತ್ತಿದೆ. ಸ್ನೇಹದ ಅಕ್ಷರಗಳು ಓಲೆ ರೂಪದಲ್ಲಿ ಕೈ ಸೇರುವಾಗ ಮನಸ್ಸಿನ ಮೂಲೆಯಲ್ಲಿರುವ ಪ್ರೀತಿಯ ಸೆಳೆತವು ಮುಂದಿನ ಪತ್ರವನ್ನು ನಿರೀಕ್ಷಿಸುತ್ತಿರುತ್ತದೆ.

ಈ ಪತ್ರ ಓದಿ ಮುಗಿಸುವುದರೋಳಗೆ ಒಂದೆರಡು ಹನಿಗಳು ಕಣ್ಣಿನಾಳದಲ್ಲಿ ಮೂಡಿದ್ದವು. ಸದ್ಯ ಈ ಪತ್ರ ಕೈಗೆ ಸಿಕ್ಕಿದ್ದು ನನ್ನ ಪುಣ್ಯ ತುಂಬಾದಿನಗಳಿಂದ ಎನನ್ನೋ ಕಳೆದುಕೊಂಡೆ ಅಂತಾ ಅನಿಸುತ್ತಿತ್ತು . Thank God . ಯಾಕೋ ಈಗಿಂದಿಗಲೇ ನನ್ನಮ್ಮನಿಗೆ ಒಂದು ಪತ್ರ ಬರೀಬೆಕು ಅನ್ನೊ ಹಾಗಿದೆ . ದಿನದಲ್ಲಿ ಮೂರರಿಂದ ನಾಲ್ಕು ಬಾರಿ ಫೋನನಲ್ಲಿ ಮಾತಾಡ್ತಿನಿ ಆದ್ರೆ ಇವತ್ತು ಒಂದು Surprise ಅಂತಾ ಪತ್ರ ಬರಿಬೇಕು ಅಂತಾ ಮಾಡಿದ್ದೇನೆ . .ಅವಳ ಬಗ್ಗೆ ನನ್ನಲ್ಲಿರುವ ಗೌರವವನ್ನು ಪತ್ರದ ಮೂಲಕ ವ್ಯಕ್ತಪಡಿಸಬೇಕೆಂದಿದ್ದೆನೆ . Ok ಹಾಗಾದ್ರೆ ಪತ್ರ ಬರೆಯೋದಿದೆ ಮತ್ತೇ ಸಿಗುವೆ . . Bye .

ಕೃಪೆ:ರಷ್ಮಿ ಅಕ್ಕ.,

Leave a Comment

Your email address will not be published. Required fields are marked *

Scroll to Top