ಜನ ಗಣ ಮನ . .

ಎಲ್ಲ ಶಾಲೆಗಳಲ್ಲಿ ಮುಂಜಾವಿನ ಸಮಯ ಈಡಿ ಮೈದಾನ ಕಣ್ಣು ರಾಚುವ ಹಾಗೆ ಕಾಣುತ್ತಿರುತ್ತದೆ,ಯಾಕೆಂದರೆ ಅದು ಪ್ರಾರ್ಥನೆಯ ಸಮಯ ಈಡೀ ಮೈದಾನದ ತುಂಬ ಎಲ್ಲ ಮಕ್ಕಳು ಸಾಲಾಗಿ ನಿಂತು ಪ್ರಾರ್ಥನೆಗೆ ಮೋರೆಹೋಗುವುದಿದೆಯಲ್ಲ ಇದನ್ನು ನೋಡುವುದೇ ಸೌಭಾಗ್ಯ. ಇಂಧ ಭಾಗ್ಯವನ್ನು ಮೊನ್ನೆ ನಾನು ಇನ್ನೊಂದು ಬಾರಿ ಸವಿಯುವ ಸದಾವಕಾಶ ಒದಗಿ ಬಂತು . ಬೆಲಗಿನ ಜಾವ ಎದ್ದು ಚುಮು ಚುಮು ಮುಂಜಾವಿನಲ್ಲಿ Walking  ಅಂತಾ ಮನೆಯನ್ನು ಬಿಟ್ಟು ಶಾಲೆಯ ಕಡೆ ನಡೆದೆ ಅಲ್ಲಿ ಕಂಡದ್ದು ಪ್ರಾರ್ಥನೆಯ ದಿನಚರಿ . ನಮ್ಮ ಗೋಠೆ ಟೀಚರು,ಸುನೀತಾ ಟೀಚರು,ಅಂಜು ಟೀಚರು,ಕರೋಷಿ ಟೀಚರು ಇವರೆಲ್ಲರ ನಡುವೆ ನಮ್ಮ ಸೋಲಾಪೂರ್ ಸರು ತಮ್ಮ ಎಂದಿನ ಪಾರ್ಥನೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು .ಈಗಂತು ನಮ್ಮ ಶಾಲೆ ನಾಲ್ಕು ದಿಕ್ಕಿನೆಡೆ Compound ಕಂಡಿದೆ ಅದಕ್ಕಾಗಿ ಎಲ್ಲರೂ ಮುಖ್ಯದ್ವಾರದಿಂದಲೇ ಶಾಲೆಯಲ್ಲಿ Entry ಕೋಡಬೇಕು ಬೇರೆ ದಾರೀಯೇ ಇಲ್ಲ . ಇಂಥಹದರ ನಡುವೇ ಪ್ರಾರ್ಥನೆ ಶುರುವಾಗೀಯೇ ಬಿಡ್ತು.”ಜನಗಣ ಮನ …”

 ಈ ಪಾರ್ಥನೆಯ  ವೇಳೆಗೆ , ತಡವಾಗಿ ಒಳ ಬರುತ್ತಿರುವ ವಿದ್ಯಾರ್ಥಿಗಳೂ ಇದ್ದರು.ಗೇಟಿನ ಹೊರಗೆ ಅಥವಾ ಗೇಟಿನ ಒಳಗೆ,ನಡುದಾರಿಯಲ್ಲಿ,ಗುಂಪಿನಿಂದ ದೂರ..ಇದ್ದ ಬಿದ್ದ ಭಂಗಿಯಲ್ಲಿ ’ statue ‘ ಆಗಿ ನಿಂತುಬಿಟ್ಟು ಪಾರ್ಥನೆಯೊಂದಿಗೆ ಒಂದಾಗಲು ಯತ್ನಿಸುತ್ತಿದ್ದರು.ಪ್ರಾರ್ಥನೆ ತಪ್ಪಿಸಿಕೊಂಡ ಅಳುಕು, ಪಾಲ್ಗೋಳ್ಳಲು ಅಸಹಾಯಕ ಪ್ರಯತ್ನ, ಜಾರುವ ಪಾಟಿಚೀಲ – ಸಂಭಾಳಿಸಿಸುವ ಮೈಕುಲುಕು..ಎಲ್ಲ ಸೇರಿ ಆ ವಿದ್ಯಾರ್ಥಿಗಳು ಗ್ರಹವೇ ನಿಲುಕದ ಉಪಗ್ರಹದಂತೆ ಕಾಣುತ್ತಿದ್ದರು.

ಪ್ರಾರ್ಥನೆ ಬಹಿರಂಗವಾಗಿ ಆಟದ ಬಯಲಿನಲ್ಲಿ ನಡೆಯುತ್ತಿತ್ತು,ಹೊರ ರಸ್ತೆಯಲ್ಲಿ ನಡೆವ ಕೆಲವರು,ಶಾಲೆಗೆ ಸಂಭಂದವೇ ಇರದವರು ನಿಂತು ಈ ಪ್ರಾರ್ಥನೆಯನ್ನು ನೋಡುತ್ತಿದ್ದರು. ಸೈಕಲ್ ನಿಲ್ಲಿಸಿ ಅಥವಾ ತುಸು ಹೊರೆ ಇಳಿಸಿ ಅವರು ಸುಮ್ಮನೆ ದೂರದ ಪ್ರಾರ್ಥನೆಯನ್ನು ನೋಡುತ್ತಿದ್ದರು. ಹೀಗೆ ಇರುವಾಗ “Side ನಿಂದರ್ರೀ ಪಾ . …” ಅಂತ ಪೇಟೆಗೆ Fresh ಹುಲ್ಲನ್ನು ತೆಗೆದುಕೊಂಡ ಹೋಗುತ್ತಿದ್ದವನೊಬ್ಬ ಅವರೆಲ್ಲರೀಗೂ ಎಚ್ಚರಿಸಿದ. ಇವರೆಲ್ಲರೂ  ತಮ್ಮ ದೈನಿಕದ ಆರಂಭದ ಒಂದು ಶುಭಾಂಕವೆಂಬಂತೆ ಪ್ರಾರ್ಥನೆಯನ್ನು ಪರಿಗಣಿಸುತ್ತಿದ್ದರು.

ದೂರದಿಂದ ನೋಡಿದರೆ ಪ್ರಾರ್ಥನೆಯ ಮಕ್ಕಳು ಕಾಳು ಹೆಕ್ಕಲು ಕಾದ ವಲಸೆ ಹಕ್ಕಿಗಳಂತೆ ತೋರುತ್ತಿತ್ತು. ಅಥವಾ ಎಲೆ ಗಿಲೆ ಇರದೆ ನೇಲ ಸಾಕಷ್ಟು ದೇಟುಗಳನ್ನು ಬೇಳೆಸಿನಿಂಥಂಥೆ ಭಾಸವಾಗುತ್ತಿತ್ತು.ಎಂಥ ಗಾಳಿಗೂ ಅಲ್ಲಾಡದ,ಧ್ವಜವೇ ಇಲ್ಲದ ಬೋಳು ಸ್ತಂಭದ ಪಕ್ಕ ನಿಂತ ಗೋಠೆ ಟೀಚರ ಸೂಚನೆಗಳು ಗಾಳಿಯಲ್ಲಿ ತೇಲಿ ತೇಲಿ ಹೋಗುತ್ತಿದ್ದವು.

ಶಾಲೆಯಲ್ಲಿ ನಡೆದ ಪ್ರಾರ್ಥನೆಯ  ಸಮೂಹ ದನಿ ಹೊರ ರಸ್ತೆಯ ನಾಗರಿಕರನ್ನು ತಡೆಯಿವಷ್ಟು ಆಳವಾಗಿ ಹೊರತನಕ  ಕೇಳಿಸುತ್ತಿತ್ತು.ಯಾವ ಶಬ್ದಗಳನ್ನೂ ಬಿಡೀಯಾಗಿ ಬಿಟ್ಟೂಗೊಡದ ಆ ಸ್ವರಗುಚ್ಚ.ಇಡೀ ಮನಕುಲದ ಪರವಾಗಿ ಯಾರೋ ಕೈಯೆತ್ತಿ ಗಗನಕ್ಕೆ ನಿವೇದಿಸಿಕೊಂಡಂತೆ ಕಾಣುತ್ತಿತ್ತು . ತನ್ನ ಕಕ್ಷೆಯಲ್ಲಿ ಬರುವ ಎಲ್ಲರನ್ನೂ ಒಂದು ಕ್ಷಣ ಈ ಪ್ರಾರ್ಥನೆ ಆವರಿಸಿಯೇ ಬಿಡುವಷ್ಟು ಮುಗ್ಧತೆ ಮಕ್ಕಳ ದನಿಯಿಂದ ಕೇಳಿಬರುತ್ತಿತ್ತು.

ಇಂಥ ಪ್ರಾರ್ಥನೆಯನ್ನು ತಪ್ಪಿಸಿಕೊಂಡ ಆ ವಿದ್ಯಾರ್ಥಿಯ ಅಳಲನ್ನು ಅವ ಮಾತ್ರ ಬಲ್ಲ.ದಿನದ ಆರಂಭದಲ್ಲೇ ಲೆಕ್ಕ ತಪ್ಪಿಹೋದಂತೆ ಅವ ಪರಿತಪಿಸುತ್ತಿದ್ದಾನೆ.ಟೈಟಲ್ ಮುಗಿದ ನಂತರ ಥೇಟರು ಹೊಕ್ಕ ಪ್ರೇಮಿಯಂತೆ ಹಳಹಳಿಸುತ್ತಿದ್ದಾನೆ.ಏಕೆಂದರೆ ಈ ಪ್ರಾರ್ಥನೆ ಅವನ ದಿನಚರಿಯ ಲಯದ spring-board ಆಗಿಹೋಗಿದೆ ಅದನ್ನು ತಪ್ಪಿಸಿಕೊಂಡ ಅಳುಕು ಅವನನ್ನು ಕಾಡುತ್ತಿದೆ.

ಇದು ಬರೀ ಅವನದಷ್ಟೆ ಅಲ್ಲ, ಈ ಪ್ರಾರ್ಥನೆ ತನ್ನ ವಲಯದಲ್ಲಿ ಬರುವ ಎಲ್ಲರ ವ್ಯವಸ್ಥೆಯ ಭಾಗವಾಗುತ್ತ ಚಕ್ರದಲ್ಲಿ ತಳ್ಳುವ ಜ್ನಾಪಕ ಬಿಂದುವಾಗಿದೆ. GEETA ICECREEM ಮನೆಯ ಮೋದಲನೆ ಮಹಡಿಯ ಕಿಟಕಿಯಿಂದ ಸಪುರ ಕಣ್ಣುಗಳಿಂದ ನೋಡುವ ಆ ಮನೆಯ ವೃದ್ದನಿಗೆ ಇದೊಂದು ’ ಭರವಸೆಯ ವ್ಯವಸಾಯ’ದಂತೆ ತೋರುತ್ತಿದೆ(ಮೂಂದಿನ ನಾಡನ್ನು ಕಟ್ಟುವ ಮಕ್ಕಳು).ಮೊಮ್ಮಕ್ಕಳನ್ನು ಬಿಡಲು ಬಂದ ಎಷ್ಟೊಂದು ಅಜ್ಜ-ಅಜ್ಜಿಯರು,ಪ್ರಾರ್ಥನೆ ಮುಗಿದು ಹಕ್ಕಿಗಳು ತಮ ತಮ್ಮ ಕ್ಲಾಸು ರೂಮು ಸೇರುವ ತನಕ ದಣಿವಿಲ್ಲದೆ ಕಣ್ಣಿಗೆ ಹಬ್ಬ ಮಾಡಿಕೊಂಡು ಕಾಯುತ್ತಿದ್ದರು.ಶಾಲೆಗೆ ಹೊರಟ ಉಲ್ಲಾಸದ ಮಕ್ಕಳಿಗಿಂತ ಮಿಗಿಲಾದ ಯಾವ ಸಂಗತಿಯಿದೆ – ಒಂದು ಕಾಲ, ದೇಶದ ಆರೋಗ್ಯವನ್ನು ಸೂಚಿಸಲು.ಇಂಥ ಒಂದು ಸುಕಾಲ ನಮ್ಮ ಶಾಲೇಗೂ ಇದೆ ಅಂತಾ ತಿಳಿದು ತುಂಬಾನೆ ಖುಷಿ ಪಟ್ಟೆ.

ಇನ್ನೂ ಪ್ರಾರ್ಥನೆ ನೊಡಲು ನಿಂತ ನಾವೆಲ್ಲರೂ ಸಿನೇಮಾ ಮುಗಿದ ಮೇಲೆ ಹೇಗೆ ತೆವಳುತ್ತೇವೆಯೋ ಹಾಗೆ ಒಂದು ಹೋಸ ಆಲ್ಹಾದಕರ ಘಳಿಗೆಯೋಂದಿಗೆ ನಮ್ಮ ನಮ್ಮ ದಾರಿಯತ್ತ ಸಾಗಿದೇವು . .

Leave a Comment

Your email address will not be published. Required fields are marked *

Scroll to Top