ಈ ಸಿನೇಮಾವನ್ನ ಒಂದು ಹತ್ತಿಪ್ಪತು ವರ್ಷದ ಹಿಂದ ಮಾಡಿದ್ದರೆ ಚನ್ನಾಗಿರ್ತಿತ್ತು ಅಂತನಸ್ತು. ಚಲನಚಿತ್ರವು ಒಡಹುಟ್ಟಿದವರ ನಡುವಿನ ಅವಿನಾಭಾವ ಸಂಬಂಧವನ್ನು ಚಿತ್ರಿಸುತ್ತದೆ, ಇಲ್ಲಿ ಸಹೋದರಿ (ಆಲಿಯಾ) ತನ್ನ ಸಹೋದರನನ್ನು ಯಾವುದೇ ಬೆಲೆಯಲ್ಲಿ ರಕ್ಷಿಸಲು (ತನ್ನದಲ್ಲದ ಯಾವುದೋ ಒಂದು ಸಂಕಷ್ಟಕ್ಕೆ ಸಿಲುಕಿಕೊಂಡಾಗ) ಎಲ್ಲ ಗಡಿಗಳನ್ನು ದಾಟಿ ಅವನನ್ನು ಬಚಾವ್ ಮಾಡುವ ಕಥೆ.
ಆ್ಯಕ್ಷನ್ ಕೆಟೆಗರಿಗೆ ಈ ಸಿನೇಮಾವನ್ನ ಹಾಕಿದ್ದಾರೆ ಆದರೆ ಆ ತರಹದ ಯಾವುದೇ ಸೀನ್ ಗಳು ಸಿನೇಮಾದಿದ್ದಕ್ಕೂ ಕಾಣಿಸ್ಲಿಲ್ಲಾ ಹಾಗೂ ಎಸ್ಕೆಪ್ ಪ್ಲಾನ್ ಕೂಡಾ ಬಹಳ ಸಿಂಪಲ್ ಆಗಿ ಹೋಯ್ತು ಅಂತ ಅನಸ್ತು.. ಇನ್ನೊಂದಷ್ಟು ಪ್ರಯತ್ನ ಮಾಡಿದ್ದರೆ ಸಿನೇಮಾವನ್ನ ಜನರ ನೋಡ್ತಿದ್ರು ಅನ್ನೊ ಭಾವ.
ಅದನ್ನ ಬಿಟ್ರೆ ಆಲಿಯಾಳ ನಟನೆ ಚನ್ನಾಗಿ ಮೂಡಿ ಬಂದಿದೆ. ಸಿಂಗಾಪೂರ್ ನ ಜೈಲುಗಳ ನೈಜತೆಯನ್ನ ತೋರಿಸೊ ಸೀನ್ ಗಳು ಭಯವನ್ನ ಉಂಟು ಮಾಡಿಸುತ್ತವೆ.
ಅಲ್ಲಿಯ ಸ್ಟ್ರಿಕ್ಟ್ ಪೋಲಿಸ್ ಆಫಿಸರ್ರುಗಳು, ಜೈಲುಗಳಲ್ಲಿನ ನಿಯಮಗಳು ಎಲ್ಲವೂ.
ಇವೆಲ್ಲವನ್ನು ಇಟ್ಟುಕೊಂಡು ಇಲ್ಲೊಜಿಕಲ್ ರಿತಿಯಿಂದ ಏನೇನೊ ಸಿನೇಮಾ ಮಾಡಿದ್ದು ಅಷ್ಟು ಇಷ್ಟವಾಗಲಿಲ್ಲ.


