ಹಲವು ಜನರ ಶಿಫಾರಿಸ್ಸಿನ ಮೇಲೆ ನೋಡಿದ ಅದ್ಭುತ ಸರಣಿ ಇದು. ಯಾಕೆ ಮಿಸ್ ಆಯ್ತು ಅಂತ ಗೊತ್ತೆ ಆಗ್ಲಿಲ್ಲ.
ಒಂದು ಚಿಕ್ಕದಾದ ಕ್ರೈಮ್ ತೆಗೆದುಕೊಂಡು ಇಷ್ಟು ದೊಡ್ಡ ಪ್ಲಾಟ್ ಅನ್ನು ರಚಿಸಬಹುದು ಅಂತ ಈ ತಂಡ ಪ್ರೋವ್ ಮಾಡಿ ಬಿಟ್ಟದೆ. ಎಷ್ಟೊ ವರ್ಷಗಳಿಂದ ಬಗೆಹರಿಯದ ಪ್ರಕರಣಗಳನ್ನು ಸೂಜಿ ದಾರದಲ್ಲಿ ಹೆಣೆಧಂಘೆ ಹೆಣೆದು ಕೊನೆಯವರೆಗೂ ಪ್ರೇಕ್ಷಕನನ್ನು ಹಿಡಿದು ಕೂಡಿಸುವಂಥಾ ಕಥೆ.
ಫ್ಯಾಂಟೆಸ್ಸಿ, ವಿಜ್ಞಾನ, ತನಿಖೆ ಮತ್ತು ಇವೆಲ್ಲವುಗಳನ್ನು ಚಂದವಾಗಿ ಮಿಕ್ಸ್ ಮಾಡಿದ ಎಂಟು ಎಪಿಸೋಡ್ ಗಳ ಕಥೆ. ಪ್ರತಿ ಎಪಿಸೋಡ್ ನ ಕೊನೆ ಒಂದು ಸುಂದರವಾದ ಸಸ್ಪೆನ್ಸ್ ಗೆ ಮುಗಿಸಿ ಮುಂದಿನ ಎಪಿಸೋಡ್ ನಾ ಬಿಡದಿರುವ ಹಾಗೆ ನಿರ್ದೇಶಿಸಿದ್ದಾರೆ. ಪಕ್ಕಾ #bingeworthy.
ರಾಘವ್ ಜುಯಾಲ್ ನ ನಟನೆ ಸಿಕ್ಕಾಪಟ್ಟೆ ಚನ್ನಾಗಿ ಮೂಡಿ ಬಂದಿದ್ದು ಈ ಮನುಷ್ಯ ರಿಯಾಲಿಟಿ ಶೋನಲ್ಲಿ ಫಾಲ್ತು ಕಾಮಿಡಿ ಮಾಡ್ತಾನೆ ಅಂತ ಅನ್ಕೊಂಡಿದ್ದೆ ನಂತರ ಬಂದಂಥ ‘ಕಿಲ್’ ಸಿನೇಮಾ ಹಾಗೂ ಈ ಸರಣಿಯಲ್ಲಿ ಆತನ ನಟನೆಯಲ್ಲಿ ಭಯಂಕರ ಬದಲಾವಣೆಯಾಗಿದೆ ಅನ್ನೊದು ನೀಟ್ ಆಗಿ ಕಾಣ್ಸತ್ತೆ.
ಹೊಸ ಬಗೆಯ ಕಂಟೆಂಟ್ ಅನ್ನು ಹುಡುಕುವ ಎಲ್ಲ ಪ್ರೇಕ್ಷಕರಿಗೆ ಇದು ಹೇಳಿ ಮಾಡಿಸಿದ ಸರಣಿ.
ನೋಡಿ ಒಮ್ಮೆ.


