ಬರ್ತಾ ಬರ್ತಾ ಸಮಾಜವೇ ಧೈರ್ಯವಂತವಾಗಿದೆಯೊ ಅಥವಾ ಸಿನೇಮಾ ಮಂದಿಗೆ ಈ ಹಾರಿರ್ ಸಿನೇಮಾಗಳ ಮೇಲೆ ಹಿಡಿತ ತಪ್ಪಿದೆಯೊ ಗೊತ್ತಿಲ್ಲ. ದೆವ್ವಗಳೂ ಸಹ ಕಾಮಿಡಿಯ ಪೀಸ್ ಗಳಾಗಿ ಮಿಂಚುತ್ತಿವೆ.
ಒಂದು ಕಾಲವಿತ್ತಿ ಹಾರರ್ ಸಿನೇಮಾಗಳು ತೆರೆಯ ಮೇಲೆ ಮೂಡಿ ಬರ್ತಿವೆ ಅಂದ್ರೆ ಕಣ್ಣು ಕಿವಿ ಮುಚ್ಚಿಕೊಂಡು ಸಿನೇಮಾಗಳ ನೋಡುತ್ತಿದ್ದ ಕಾಲವದು. ಆದರೆ ಈಗ ಈ ದೆವ್ವ, ಭೂತಗಳು ಪರದೆ ಮೇಲೆ ಮೂಡಿಬಂದರೂ ಇಂಟ್ರೆಸ್ಟ್ ಬಾರದಿರುವ ಸನ್ನಿವೇಶ. ಆ ಕೆಟೆಗರಿಗೆ ಸೇರಿಸಬಹುದಾದ ಸಿನೇಮಾ ‘ಕಕೂಡಾ’
ಈ ಚಿತ್ರವು ರಜೋರಿ ಎಂಬ ಗ್ರಾಮದಲ್ಲಿ ಪುರುಷರನ್ನು ಗುರಿಯಾಗಿಸಿದ ಒಂದು ವಿಭಿನ್ನ ಶಾಪದಿಂದ ಪೀಡಿತವಾಗಿದೆ. ಆ ಪೀಡಿತ ಶಾಪದಿಂದ ಗ್ರಾಮವನ್ನ ಮುಕ್ತಿ ಕೊಡಿಸುವ ಕಾರ್ಯವನ್ನ ಸಿಟಿಯಿಂದ ಬಂದ ಒಬ್ಬ ವ್ಯಕ್ತಿ ಮಾಡುತ್ತಾನೆ.
ಪಕ್ಕಾ ಬದಲಾಗದಿರುವ ಕಥೆ.. ಒಂದು ಹತ್ತು ಇಪ್ಪತ್ತು ವರ್ಷದಿಂದ ಇದೇ ಕಾನ್ಸೆಪ್ಟಿನ ಅದೆಷ್ಟೊ ಸಿನೇಮಾಗಳು ಬಂದು ಹೋಗಿವೆ ಆದರೂ ಇವರುಗಳಿ ಹೊಸಾ ಯೋಚನೆಗಳು ಬರ್ತಿಲ್ಲ.
ಅಲ್ಲಲ್ಲಿ ಒಂದಷ್ಟು ಹಾಸ್ಯ ಭರಿತವಾದ ಸನ್ನಿವೇಶಗಳು ಚನ್ನಾಗಿ ಮೂಡಿ ಬಂದಿವೆ.
ಅದನ್ನ ಬಿಟ್ಟು ಸಿನೇಮಾದಲ್ಲಿ ಏನೂ ಇಲ್ಲ.
ನೋಡಿ ಟೈಮ್ ವೆಸ್ಟ್ ಮಾಡಿಕೊಳ್ಳಬೇಡಿ.


