ನೆಟ್‌ಫ್ಲಿಕ್ಸ್‌ನಲ್ಲಿ “ದಿ ಸಿಗ್ನಲ್” ಅನ್ನೊ ಜರ್ಮನ್ ನ ಚಿಕ್ಕ ಸಿರೀಜ಼್ ನೊಡೊದಕ್ಕೆ ಕಾರಣ ನಾಲ್ಕೆ ನಾಲ್ಕು ಎಪಿಸೋಡ್ ಇರೋ ಕಾರಣದಿಂದ.
ನಾಸಾದವ್ರು ಕಳುಹಿಸಿದ Voyager spacecraft ನ ಕಥೆಯನ್ನ ಫಿಕ್ಷನ್ ಥರಾ ಬಳಸಿಕೊಂಡು ತೆರೆಕಂಡ ಸಿನೇಮಾ ನನಗಂತೂ ಇಷ್ಟವಾಯ್ತು.
ಗಗನಯಾತ್ರಿ ಪೌಲಾ ಬಾಹ್ಯಾಕಾಶದಿಂದ ಒಂದು ನಿಘೂಢವಾದ ವಿಷಯವನ್ನ ಹೊಂದಿದ್ದ ಕಾರಣಕ್ಕೆ ಅವಳ ಸುತ್ತ ಹುಟ್ಟುವ ಅನೇಕ ಕಥೆಗಳು ಅವಳ ಬದುಕನ್ನ ಹೇಗೆ ಸಂಕಷ್ಟಕ್ಕೆ ಸಿಲುಕಿಸುತ್ತದೆ, ಇದರೊಟ್ಟಿದೆ ಅಚಾನಾಕ್ಕಾಗಿ ಭಾಹ್ಯಾಕಾಶದಿಂದ ಕಾಲಿಟ್ಟ ತಕ್ಷಣ ಆಕೆ ಕಣ್ಮರೆಯಾದಾಗ ದೇಶದಲ್ಲಿ ನಡೆಯವ ಅವಳ ಬಗೆಗಿನ ಶೋಧಕಾರ್ಯಗಳು, ರಾಜಕೀಯ ಕುತಂತ್ರಗಳು ಈ ಕಥೆಯನ್ನ ಹಿಡಿದಿಟ್ಟುಕೊಳ್ಳತ್ತೆ.
ಆಕೆಯ ಪತಿ ಸ್ವೆನ್ ಮತ್ತು ಕಿವಿ ಕೇಳದ ಮಗಳು ಚಾರ್ಲಿ ಈ ಕಥೆಗೆ ಯಾವ ಥರ ಪೂರಕವಾಗುತ್ತಾರೆ ಅನ್ನೊದನ್ನ ಚನ್ನಾಗಿ ತೋರಿಸಿದ್ದಾರೆ.
ಈ ಸಿರೀಜ಼್ ನಲ್ಲಿ ನಮ್ಮ ಬಾಲಿವುಡ್ ನ ಶೀಬಾ ಚಡ್ಡಾ ಕೂಡಾ ನಟಿಸಿದ್ದಾರೆ.
ನಾಲ್ಕು ಎಪಿಸೋಡ್ ನಲ್ಲೂ ಕಥೆ ಸ್ಲೋ ಆಯ್ತು ಅನಸ್ತು.
ಒಂದು ಸಾರಿ ನೋಡೊದಕ್ಕೆ ಅಡ್ಡಿಯಿಲ್ಲ.


